
ಬೆಂಗಳೂರು (ಡಿ.17): ಚಿನ್ನ (Gold) ಮತ್ತು ಬೆಳ್ಳಿ (Silver) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಹಿಳೆಯರಿಗೆ ಬಂಗಾರದ ಒಡವೆಗಳು(Ornaments) ಅಚ್ಚುಮೆಚ್ಚು. ಇನ್ನು ಪುರುಷರಿಗೆ ಹೂಡಿಕೆಗೆ (Invest)ಚಿನ್ನವೆಂದ್ರೆ ಇಷ್ಟ. ಹೀಗೆ ಚಿನ್ನ ಖರೀದಿಸೋರು, ಚಿನ್ನದ ಮೇಲೆ ಹೂಡಿಕೆ(Invest) ಮಾಡೋರು ಪ್ರತಿದಿನ ಮಾರುಕಟ್ಟೆ ದರವನ್ನು(Price) ಪರಿಶೀಲಿಸುತ್ತಾರೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹಾವೇಣಿ ಆಟ ಕಾಮನ್. ಒಮ್ಮೆ ಏರಿಕೆ ಕಂಡ್ರೆ, ಇನ್ನೊಮ್ಮೆ ಇಳಿಕೆ ಸಹಜ. ಆದ್ರೆ ಕೊರೋನಾ (Corona) ಬಳಿಕ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಗಮನಾರ್ಹ ಏರಿಕೆಯಾಯ್ತು. ಆದ್ರೆ ಈ ವರ್ಷ ಜನವರಿಯಲ್ಲಿ ಚಿನ್ನದ ದರ ಇಳಿಕೆ ದಾಖಲಿಸಿತು. ಆದ್ರೆ ಒಮಿಕ್ರಾನ್Omicron) ವೈರಸ್ ಭೀತಿ ಹೆಚ್ಚಾದ ಬೆನ್ನಲ್ಲೇ ಈಗ ಮತ್ತೆ ಚಿನ್ನದ ದರದಲ್ಲಿ ಏರಿಕೆ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯತ್ತ ಮುಖ ಮಾಡಿರೋ ಚಿನ್ನದ ದರದಲ್ಲಿ ಇಂದು(ಡಿ.17) ಕೂಡ ಸುಮಾರು 400ರೂ. ಹೆಚ್ಚಳವಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ನಿನ್ನೆಯಂತೆ ಇಂದು ಕೂಡ ಏರಿಕೆ ಕಂಡುಬಂದಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.17) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ನಿನ್ನೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,300ರೂ. ಇದ್ದು,ಇಂದು 400ರೂ. ಏರಿಕೆ ಕಾಣೋ ಮೂಲಕ 45, 700ರೂ. ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,420ರೂ. ಇದ್ದು,ಇಂದು 430ರೂ. ಏರಿಕೆ ದಾಖಲಿಸೋ ಮೂಲಕ 49,850ರೂ. ತಲುಪಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ 900ರೂ. ಏರಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,400ರೂ. ಇತ್ತು. ಇಂದು 62,300ರೂ. ಇದೆ.
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 47,140ರೂ. ಇತ್ತು. ಇಂದು 310ರೂ. ಏರಿಕೆ ಕಂಡು 47,450ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 340ರೂ. ಏರಿಕೆಯಾಗಿದೆ. ನಿನ್ನೆ 51,420ರೂ. ಇದ್ದ ಚಿನ್ನದ ದರ ಇಂದು 51,760ರೂ. ತಲುಪಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 900ರೂ. ಏರಿಕೆಯಾಗಿದ್ದು, 62 ,300ರೂ. ಆಗಿದೆ. ನಿನ್ನೆ 61,400ರೂ. ಇತ್ತು.
ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ ಕೂಡ ಇಂದು ಚಿನ್ನದ ದರದಲ್ಲಿ 10ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,350ರೂ.ಇದ್ದು, ಇಂದು 47,360ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,350ರೂ. ಇತ್ತು, ಇಂದು 10ರೂ. ಏರಿಕೆಯಾಗಿ 48,360ರೂ. ಆಗಿದೆ. ಬೆಳ್ಳಿ ದರದಲ್ಲಿಇಂದು 900ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,400ರೂ. ಇದ್ದು, ಇಂದು 62,300ರೂ. ಆಗಿದೆ.
Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಕೂಡ ಇಂದು ಚಿನ್ನದ ದರದಲ್ಲಿ 490ರೂ. ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,940ರೂ.ಇದೆ. ನಿನ್ನೆ 45,450ರೂ. ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 49,590ರೂ. ಇದ್ದು, ಇಂದು 530ರೂ.ಏರಿಕೆಯಾಗಿ 49,590ರೂ. ಆಗಿದೆ. ಬೆಳ್ಳಿ ದರದಲ್ಲಿ 800ರೂ. ಏರಿಕೆಯಾಗಿದ್ದು, ಇಂದು ಒಂದು ಕೆ.ಜಿ. ಬೆಳ್ಳಿಗೆ 65,900ರೂ.ಇದೆ. ನಿನ್ನೆ 65,100ರೂ. ಇತ್ತು.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.