
ಮುಂಬೈ [ಫೆ.08] : ದೇಶದ ಅಗ್ರಗಣ್ಯ ಬ್ಯಾಂಕ್ ಆಗಿರುವ ಎಸ್‌ಬಿಐ, ಫೆ.10ರಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಸಾಲಗಳ ಮೇಲಿನ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ.
ಆರ್‌ಬಿಐ ಗುರುವಾರವಷ್ಟೇ ಪ್ರಕಟಿಸಿದ್ದ ದ್ವೈಮಾಸಿಕ ಸಾಲ ನೀತಿಯಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚುವರಿ ಹಣ ಲಭ್ಯವಾಗುವಂತೆ ಮಾಡಿದ ಬೆನ್ನಲ್ಲೇ, ಎಸ್‌ಬಿಐನ ಈ ನಿರ್ಧಾರ ಹೊರಬಿದ್ದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಬಿಐ ಬಡ್ಡಿದರ ಇಳಿಕೆ ಮಾಡುತ್ತಿರುವುದು ಇದು 9ನೇ ಬಾರಿ. ಹೊಸ ಬದಲಾವಣೆ ಬಳಿಕ ಸಾಲದ ಮೇಲಿನ ಬಡ್ಡಿದರ ಶೇ.7.90ರಿಂದ ಶೇ.7.85ಕ್ಕೆ ಇಳಿಯಲಿದೆ.
ಬಹಳ ಸಮಯದ ಬಳಿಕ ಗುಡ್ ನ್ಯೂಸ್ ಕೊಟ್ಟ RBI: ಸಾಲದ ಬಡ್ಡಿದರ......
ಇದರಿಂದಾಗಿ ಗೃಹ, ವಾಹನಗಳ ಸಾಲದ ಬಡ್ಡಿದರ ಇಳಿಕೆಯಾಗಲಿದೆ. ಅದೇ ರೀತಿಯಲ್ಲಿ ಬ್ಯಾಂಕ್ ಠೇವಣಿಗಳ ದರದಲ್ಲೂ ಇಳಿಕೆಯಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.