ಎಟಿಎಂಗಳಲ್ಲಿ ಇನ್ನು 2000 ರು. ನೋಟು ಸಿಗಲ್ಲ

By Kannadaprabha News  |  First Published Feb 8, 2020, 7:29 AM IST

 2000 ರು. ನೋಟುಗಳ ಚಲಾವಣೆಯನ್ನು ವಿತ್‌ಡ್ರಾವಲ್‌ ಸಮಯದಲ್ಲಿ ನಿರ್ಬಂಧಿಸಬೇಕು. ಎಟಿಎಂಗಳಲ್ಲೂ ಈ ನೋಟು ಹಾಕ ಕೂಡದು ಎಂದು ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕೊಂದು ಸೂಚಿಸಿದೆ


ನವದೆಹಲಿ (ಫೆ.08): ಕಪ್ಪುಹಣ ಕ್ರೋಡೀಕರಣಕ್ಕೆ ಕಾರಣವಾಗುತ್ತಿವೆ ಎಂದು ಹೇಳಲಾಗಿರುವ 2000 ರು. ನೋಟುಗಳ ಚಲಾವಣೆಯನ್ನು ವಿತ್‌ಡ್ರಾವಲ್‌ ಸಮಯದಲ್ಲಿ ನಿರ್ಬಂಧಿಸಬೇಕು. ಎಟಿಎಂಗಳಲ್ಲೂ ಈ ನೋಟು ಹಾಕ ಕೂಡದು ಎಂದು ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕೊಂದು ತನ್ನ ಉದ್ಯೋಗಿಗಳಿಗೆ ಸೂಚಿಸಿದೆ.

ಈ ಸಂಬಂಧ ಬ್ಯಾಂಕ್‌ ಉದ್ಯೋಗಿಗಳಿಗೆ ಬ್ಯಾಂಕ್‌ ಮುಖ್ಯಸ್ಥರು ಕಳಿಸಿರುವ ಇ-ಮೇಲ್‌ ಅನ್ನು ತಾನು ನೋಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Tap to resize

Latest Videos

ಆದರೆ ಹಾಗಂತ ಗ್ರಾಹಕರು ಗಾಬರಿಪಡಬೇಕಿಲ್ಲ. 2000 ರು. ನೋಟುಗಳನ್ನು ಗ್ರಾಹಕರು ಜಮಾ ಮಾಡಲು ಬಂದರೆ ಸ್ವೀಕರಿಸಬೇಕು. ವಿತ್‌ ಡ್ರಾವಲ್‌ಗೆ ಬರುವ ಗ್ರಾಹಕರಿಗೆ ಮಾತ್ರ ಈ ನೋಟುಗಳನ್ನು ನೀಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಎಟಿಎಂಗಳಲ್ಲಿ 500, 200 ಹಾಗೂ 100 ರು. ನೋಟುಗಳನ್ನು ಮಾತ್ರ ತುಂಬಬೇಕು. 100 ರು. ನೋಟುಗಳ ಪೂರೈಕೆಯನ್ನು ವಿಶೇಷ ಆಂದೋಲನ ಕೈಗೊಂಡು ಹೆಚ್ಚಿಸಲಾಗುವುದು ಎಂದು ಅದು ತಿಳಿಸಿದೆ.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!