ಎಸ್‌ಬಿಐ ಠೇವಣಿ, ಸಾಲದ ಬಡ್ಡಿದರ ಇಳಿಕೆ!

Published : Mar 12, 2020, 07:39 AM IST
ಎಸ್‌ಬಿಐ ಠೇವಣಿ, ಸಾಲದ ಬಡ್ಡಿದರ ಇಳಿಕೆ!

ಸಾರಾಂಶ

ಎಸ್‌ಬಿಐ ಠೇವಣಿ, ಸಾಲದ ಬಡ್ಡಿದರ ಇಳಿಕೆ: ಮಾ.10ರಿಂದ ಜಾರಿ| ಗ್ರಾಹಕರಿಗೆ ಶಾಕ್

ಮುಂಬೈ[ಮಾ.12]: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ನಿಶ್ಚಿತ ಠೇವಣಿ ಹಾಗೂ ವಿವಿಧ ಸಾಲದ ಮೇಲಿನ ಬಡ್ಡಿದರಗಳನ್ನು ಬುಧವಾರ ಕಡಿತಗೊಳಿಸಿದೆ. ಮಾಚ್‌ರ್‍ 10ರಿಂದ ಹೊಡ ಬಡ್ಡಿದರಗಳು ಜಾರಿಗೆ ಬರಲಿವೆ.

2 ಕೋಟಿ ರು.ಗಳಿಗಿಂತ ಕಮ್ಮಿ ಅವಧಿಯ ಎಫ್‌ಡಿ ಬಡ್ಡಿದರಗಳನ್ನು ಶೇ.0.10ರಿಂದ ಶೇ.0.50ವರೆಗೆ ಕಡಿಮೆ ಮಾಡಲಾಗಿದೆ. 1 ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಯ ಎಫ್‌ಡಿ (ನಿಶ್ಚಿತ ಠೇವಣಿ) ಬಡ್ಡಿದರಗಳನ್ನು ಶೇ.0.10ರಷ್ಟುಕಡಿತಗೊಳಿಸಲಾಗಿದೆ. 1ರಿಂದ 2 ವರ್ಷದ ಎಫ್‌ಡಿಗೆ ಇನ್ನು ಮುಂದೆ ಶೇ.6ರ ಬದಲು ಶೇ.5.90ರ ಬಡ್ಡಿದರ ಸಿಗಲಿದೆ. ಹಿರಿಯ ನಾಗರಿಕರಿಗೆ ಇಷ್ಟೇ ಅವಧಿಗೆ ಶೇ.6.50 ಬದಲು ಶೇ.6.40ರ ಬಡ್ಡಿ ದೊರಕಲಿದೆ.

ಇನ್ನು 1 ವರ್ಷ ಅವಧಿಯ ಸಾಲದ ಬಡ್ಡಿದರಗಳನ್ನು ಶೇ.0.10ರಷ್ಟುಕಡಿತ ಮಾಡಲಾಗಿದೆ. ಹೀಗಾಗಿ ಇದರ ಬಡ್ಡಿದರ ಇನ್ನು ಶೇ.7.85ರಿಂದ ಶೇ.7.75ಕ್ಕೆ ಇಳಿಯಲಿದೆ.

30 ವರ್ಷದ ಗೃಹ ಸಾಲದ ಇಎಂಐ ಪ್ರತಿ 1 ಲಕ್ಷ ರು.ಗೆ 7 ರು.ನಷ್ಟುಇಳಿಯಲಿದೆ. 7 ವರ್ಷ ಅವಧಿಯ 1 ಲಕ್ಷ ರು. ವಾಹನ ಸಾಲದ ಇಎಂಐ 5 ರು.ನಷ್ಟುಇಳಿಯಲಿದೆ.

ಫೆಬ್ರವರಿಯಲ್ಲಷ್ಟೇ ಬ್ಯಾಂಕ್‌, ಶೇ.0.10ರಿಂದ ಶೇ.0.50ರಷ್ಟುಬಡ್ಡಿದರ ಕಡಿತ ಮಾಡಿತ್ತು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಮಾ.11ರಿಂದ ಜಾರಿಯಾಗುವಂತೆ ಶೇ.0.10ರಷ್ಟು ಬಡ್ಡಿದರ ಕಡಿತಗೊಳಿಸಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಮೇ.25ರಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಿದ ಸೆಬಿ, ಇಂಧನ ಮಿತ ಬಳಕೆಗೆ ಒತ್ತು
ಪೆಟ್ರೋಲ್ ದರ ₹108ಕ್ಕೆ ಏರಿಕೆ: ನಮ್ಮದೇ ದೇಶದ ಈ ಭಾಗದಲ್ಲಿ ಪ್ರತಿ ಲೀ. ಪೆಟ್ರೋಲ್‌ಗೆ ಕೇವಲ 86 ರೂ. ಬೆಲೆ!