ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆ!

By Suvarna News  |  First Published Mar 11, 2020, 1:12 PM IST

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ| ವಾಹನ ಸವಾರರಿಗೆ ಗುಡ್‌ ನ್ಯೂಸ್| ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ


ನವದೆಹಲಿ[ಮಾ.11]: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಭಾರೀ ಕುಸಿತ ಕಂಡಿದ್ದು, ಭಾರತೀಯರಿಗೆ ಇದರಿಂದ ಭಾರೀ ಲಾಭವಾಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 

ಹೌದು ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆ 2 ರೂ. 69 ಪೈಸೆ ಕುಸಿತಗೊಂಡು, ಪ್ರತಿ ಲೀ. 70.20 ರೂ. ನಿಗದಿಯಾಗಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 2 ರೂ. 33 ಪೈಸೆ ಕುಸಿತವಾಗಿದ್ದು, 63.01 ರೂ. ನಿಗದಿಯಾಗಿದೆ.

Tap to resize

Latest Videos

ತೈಲ ಬೆಲೆ ಕುಸಿದಿದೆ, ಪೆಟ್ರೋಲ್ ದರ ಕಡಿಮೆ ಮಾಡಿ: ಪಿಎಂಗೆ ರಾಹುಲ್ ಮನವಿ!

ಸೌದಿ-ರಷ್ಯಾ ಸಮರ:

ಕೊರೋನಾ ಸೋಂಕಿನ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬಳಕೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತೈಲ ಉತ್ಪಾದಕ ದೇಶಗಳ ಒಕ್ಕೂಟವಾದ ಒಪೆಕ್‌ ಮತ್ತು ರಷ್ಯಾದ ಜೊತೆ ಸೌದಿ ಅರೇಬಿಯಾ ಸಭೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಬಳಕೆ ಪ್ರಮಾಣ ಇಳಿಕೆಯಿಂದಾದ ನಷ್ಟಭರಿಸುವ ನಿಟ್ಟಿನಲ್ಲಿ ಉತ್ಪಾದನೆ ಕಡಿತ ಮಾಡಿ, ಪರೋಕ್ಷವಾಗಿ ಬೆಲೆ ಏರಿಕೆಯ ವಾತಾವರಣ ಸೃಷ್ಟಿಸುವ ಪ್ರಸ್ತಾಪವನ್ನು ಸೌದಿ ಅರೇಬಿಯಾ ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ ಕಾರಣ ಸಿಟ್ಟಿಗೆದ್ದ ಸೌದಿ ಅರೇಬಿಯಾ ದರ ಸಮರಕ್ಕೆ ಮುಂದಾಗಿದ್ದು, ಕಳೆದ 20 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ದರ ಕಡಿತ ಮಾಡಿದೆ. ಅಂದರೆ ತನ್ನ ಏಪ್ರಿಲ್‌ ತಿಂಗಳ ಕಚ್ಚಾತೈಲ ಪೂರೈಕೆ ದರವನ್ನು ಪ್ರತಿ ಬ್ಯಾರಲ್‌ಗೆ 4-7 ಡಾಲರ್‌ವರೆಗೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದೆ.

ಕಚ್ಚಾ ತೈಲ ಬೆಲೆ ಶೇ. 30 ಕುಸಿತ, ಭಾರತಕ್ಕೆ ಭರ್ಜರಿ ಲಾಭ!

ಇದರ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 31ರಿಂದ 36 ಡಾಲರ್‌ ಆಸುಪಾಸಿಗೆ ಕುಸಿದಿದೆ. 2014ರಲ್ಲಿ ಕಚ್ಚಾತೈಲ ಬೆಲೆ 30 ಡಾಲರ್‌ ಆಸುಪಾಸಿಗೆ ಬಂದಿದ್ದು ಬಿಟ್ಟರೆ, ಮತ್ತೆ ಆ ಪ್ರಮಾಣಕ್ಕೆ ಎಂದೂ ಬಂದಿರಲಿಲ್ಲ.

ಮಾರ್ಚ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!