SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!

By Suvarna NewsFirst Published Jun 28, 2020, 2:29 PM IST
Highlights

ಕೊರೋನಾ ವೈರಸ್ ಲಾಕ್‌ಡೌನ್ ವೇಳೆ ಬ್ಯಾಂಕ್‌ಗಳು ಹೊಸ ನಿಯಮ ಜಾರಿಗೆ ತಂದಿತ್ತು. ಸಾಲ ಮರುಪಾವತಿ ಮುಂದೂಡಿಕೆ, ಎಟಿಎಂ ಹಣ ಪಡೆಯುವ ನೀತಿ ಬದಲು ಸೇರಿದಂತೆ ಹಲವು ನಿಯಮ ಬದಲಿಸಿತ್ತು. ಇದೀಗ SBI ಬ್ಯಾಂಕ್, ಜುಲೈ 1 ರಿಂದ ಮತ್ತೆ ನಿಯಮ ಬದಲಿಸುತ್ತಿದೆ. ಎಟಿಎಂನಿಂದ ಹಣ ಪಡೆಯುವ ರೂಲ್ಸ್ ಬದಲಾಗುತ್ತಿದೆ.

ನವದೆಹಲಿ(ಜೂ.28): ಕೊರೋನಾ ವೈರಸ್ ಲಾಕ್‌ಡೌನ್ ವೇಳೆ RBI ಸೂಚನೆ ಪ್ರಕಾರ ಬ್ಯಾಂಕ್‌ಗಳು ಹಲವು ವಿನಾಯಿತಿ ನೀಡಿತ್ತು. ಇದರಲ್ಲಿ ಎಟಿಎಂ ಮೂಲಕ ಹಣ ಪಡೆಯವ ನೀತಿಯಲ್ಲಿ ಸಡಿಲಿಕೆ ಮಾಡಲಾಗಿತ್ತು. SBI ಗ್ರಾಹಕರು ಇತರ ಬ್ಯಾಂಕ್ ಎಟಿಎಂ ಮೂಲಕ ಹಣ ಪಡೆದರೂ ಯಾವುದೇ ಶುಲ್ಕವಿರಲಿಲ್ಲ. ಎಷ್ಟು ಬಾರಿ ಟ್ರಾನ್ಸಾಕ್ಷನ್ ಮಾಡಿದರೂ ಉಚಿತವಾಗಿತ್ತು. ಆದರೆ ಜುಲೈ 1 ರಿಂದ ಹಳೇ ನಿಯಮ ಮತ್ತೆ ಜಾರಿಗೆ ಬರುತ್ತಿದೆ.

ಇನ್ಮುಂದೆ ಸಹಕಾರಿ ಬ್ಯಾಂಕ್‌ ಆರ್‌ಬಿಐ ಅಧೀನಕ್ಕೆ

ಲಾಕ್‌ಡೌನ್ ವೇಳೆ 3 ತಿಂಗಳ ಅವಧಿಗೆ SBI ಬ್ಯಾಂಕ್ ಗ್ರಾಹಕರ ಅನೂಕಲಕ್ಕೆ ಉಚಿತ ಟ್ರಾನ್ಸಾಕ್ಷನ್ ನೀಡಿತ್ತು. SBI ಸೇರಿದಂತೆ ಯಾವುದೇ ಎಟಿಂನಿಂದ ಎಷ್ಟು ಬಾರಿ ಹಣ ಪಡೆದರು ಕಳೆದ 3 ತಿಂಗಳಲ್ಲಿ ಉಚಿತ ಆಫರ್ ನೀಡಲಾಗಿತ್ತು. ಕೊರೋನಾ ವೈರಸ್ ಕಾರಣ ನೀತಿ ಬದಲಿಸಲಾಗಿತ್ತು.  ಇದೀಗ ಹಳೇ ನಿಯಮದಂತೆ SBI ಹಾಗೂ ಇತರ ಇತರ ಬ್ಯಾಂಕ್ ಎಟಿಂ ಮೂಲಕ ಹಣ ಪಡೆಯಲು ಹಳೇ ನಿಯಮದಂತೆ ಚಾರ್ಜ್ ನೀಡಬೇಕಾಗುತ್ತದೆ.

125 ದಿನಗಳಲ್ಲಿ 25 ಸ್ಕೀಮ್‌ಗಳ ಜಾರಿ: ನಿರ್ಮಲಾ ಸುದ್ದಿಗೋಷ್ಠಿ

ಮೆಟ್ರೋನಗರಗಳಲ್ಲಿ SBI ಗ್ರಾಹಕರು ಪ್ರತಿ ತಿಂಗಳಲ್ಲಿ 8 ಉಚಿತ ಟ್ರಾನ್ಸಾಕ್ಷನ್ ಪಡೆಯಲಿದ್ದಾರೆ. ಇದರಲ್ಲಿ 5 ಬಾರಿ SBI ಟ್ರಾನ್ಸಾಕ್ಷನ್ ಹಾಗೂ 3 ಬಾರಿ ಇತರ ಎಟಿಂ ಟ್ರಾನ್ಸಾಕ್ಷನ್ ಉಚಿತವಾಗಿತ್ತು. ಮೆಟ್ರೋ ನಗರ ಹೊರತು ಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ SBI ಗ್ರಾಹಕರಿಗೆ ಪ್ರತಿ ತಿಂಗಳು 10 ಉಚಿತ ಟ್ರಾನ್ಸಾಕ್ಷನ್ ನೀಡಿದೆ. 5 SBI ಹಾಗೂ 5 ಟ್ರಾನ್ಸಾಕ್ಷನ್ ಇತರ ಬ್ಯಾಂಕ್‌ ನೀಡಲಾಗಿತ್ತು. 

ಮೆಟ್ರೋ ನಗರಗಳಲ್ಲಿ 8 ಉಚಿತ ಟ್ರಾನ್ಸಾಕ್ಷನ್ ಹಾಗೂ ಇತರ ಪ್ರದೇಶಗಳಲ್ಲಿನ 10 ಟ್ರಾನ್ಸಾಕ್ಷನ್ ಬಳಿಕ ಪ್ರತಿ ಬಾರಿ ಹಣ ಪಡೆಯುವಾಗ 20 ರೂಪಾಯಿ + GST ಹಣ ನೀಡಬೇಕಾಗುತ್ತದೆ.

click me!