ಫೋನ್‌ ಕರೆ ಮಾಡಿದ್ರೆ ಮನೆ ಬಾಗಿಲಿಗೇ ಎಟಿಎಂ: 20 ಸಾವಿರವರೆಗೆ ವಿತ್‌ಡ್ರಾ!

By Suvarna News  |  First Published Aug 22, 2020, 3:38 PM IST

ಎಸ್‌ಬಿಐನಿಂದ ಮನೆ ಬಾಗಿಲಿಗೇ ಎಟಿಎಂ ಸೇವೆ| ಉತ್ತರ ಪ್ರದೇಶದ ಲಖನೌದಲ್ಲಿ ಪ್ರಾಯೋಗಿಕ ಜಾರಿ| ಈ ಯೋಜನೆಯಡಿ 20 ಸಾವಿರವರೆಗೆ ವಿತ್‌ಡ್ರಾಗೆ ಅವಕಾಶ


ನವದೆಹಲಿ(ಆ.22): ಹಿರಿಯ ನಾಗರಿಕರು ಮತ್ತು ದೊಡ್ಡ ವಹಿವಾಟುದಾರರಿಗೆ ಕರೆ ಮಾಡಿದರೆ ಮನೆ ಬಾಗಿಲಿಗೇ ಬ್ಯಾಂಕಿಂಗ್‌ ಸವಲತ್ತು ಬಂದಿದ್ದಾಯ್ತು. ಇದೀಗ ಒಂದು ಫೋನ್‌ ಕರೆ ಮಾಡಿದರೆ ಸ್ವತಃ ಎಟಿಎಂ ಮನೆ ಬಾಗಿಲಿಗೆ ಬರುತ್ತದೆ.

2.4 ಲಕ್ಷ ಸಿಬ್ಬಂದಿಗೆ ಇನ್ಫೋಸಿಸ್ ಗುಡ್ ನ್ಯೂಸ್, ಕೊರೋನಾ ನಡುವೆಯೂ ಬಡ್ತಿ

Tap to resize

Latest Videos

ಹೌದು. ಭಾರತೀಯ ಸ್ಟೇಟ್‌ ಬ್ಯಾಂಕ್‌ ಉತ್ತರಪ್ರದೇಶದ ಲಖನೌದಲ್ಲಿ ಇಂಥದ್ದೊಂದು ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದರೆ. 70 ವರ್ಷ ಮೇಲ್ಪಟ್ಟವರು, ದಿವ್ಯಾಂಗರು, ದೃಷ್ಟಿದೋಷವುಳ್ಳವರಿಗೆ ಈ ಯೋಜನೆ ಆರಂಭಿಸಲಾಗಿದ್ದು, ಇಲ್ಲಿ ಯಶಸ್ವಿಯಾದರೆ ಇದನ್ನು ಇತರೆ ದೊಡ್ಡ ನಗರಗಳಿಗೂ ವಿಸ್ತರಿಸುವುದಾಗಿ ಹೇಳಿಕೊಂಡಿದೆ.

ಎಸ್‌ಬಿಐನ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬ್ಯಾಂಕ್‌ ಶಾಖೆಯ 5 ಕಿ.ಮೀ ವ್ಯಾಪ್ತಿಯಲ್ಲಿನ ಮೇಲ್ಕಂಡ ವರ್ಗದ ಯಾವುದೇ ಗ್ರಾಹಕ ಕರೆ ಮಾಡಿದರೆ ಅಥವಾ ವಾಟ್ಸಾಪ್‌ ಸಂದೇಶ ಕಳುಹಿಸಿದರೆ, ಸಂಚಾರಿ ಎಟಿಎಂ ಹೊಂದಿರುವ ಯಂತ್ರ ಸೀದಾ ಗ್ರಾಹಕನ ಮನೆಗೆ ಬರುತ್ತದೆ. ಈ ಯೋಜನೆಯಲ್ಲಿ ಗರಿಷ್ಠ 20000 ರು.ವರೆಗೆ ಹಣ ಹಿಂದಕ್ಕೆ ಪಡೆಯಬಹುದು. ಆದರೆ ಇದಕ್ಕೆ ನಿಗದಿತ ಶುಲ್ಕ ಇರುತ್ತದೆ. ಹಣಕಾಸೇತರ ವಹಿವಾಟಿಗೆ 60 ರು. ಶುಲ್ಕ ಮತ್ತು ಜಿಎಸ್‌ಟಿ. ಹಣಕಾಸು ವಹಿವಾಟಿಗೆ 100 ರು. ಶುಲ್ಕ ಮತ್ತು ಜಿಎಸ್‌ಟಿ ನೀಡಬೇಕಾಗುತ್ತದೆ. ಚೆಕ್‌ ಮತ್ತು ಪಾಸ್‌ಬುಕ್‌ ಮೂಲಕ ಹಣ ವಿತ್‌ಡ್ರಾ ಮಾಡಿ ನೀಡಲಾಗುತ್ತದೆ.

click me!