SBI ATM Rules:ಎಸ್ ಬಿಐ ಎಟಿಎಂನಲ್ಲಿ ತಿಂಗಳಿಗೆ ಎಷ್ಟು ಬಾರಿ ಉಚಿತವಾಗಿ ನಗದು ವಿತ್ ಡ್ರಾ ಮಾಡಬಹುದು?

By Suvarna NewsFirst Published Jun 21, 2022, 6:46 PM IST
Highlights

ಎಸ್ ಬಿಐ ಎಟಿಎಂಗಳಲ್ಲಿ ನೀವು ಎಷ್ಟು ಬಾರಿ ಬೇಕಾದ್ರೂ ಹಣ ವಿತ್ ಡ್ರಾ ಮಾಡಬಹುದು ಎಂದು ಭಾವಿಸಿದ್ದೀರಾ? ನಿಗದಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ರೆ ದಂಡ ಬೀಳುತ್ತೆ. ಹಾಗಾದ್ರೆ ತಿಂಗಳಿಗೆ ಎಷ್ಟು ಬಾರಿ ಎಸ್ ಬಿಐ ಎಟಿಎಂನಿಂದ ಉಚಿತವಾಗಿ ಹಣ ವಿತ್ ಡ್ರಾ ಮಾಡಬಹುದು? ಉಚಿತ ಮಿತಿಗಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದ್ರೆ ಎಷ್ಟು ದಂಡ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ.
 

Business Desk:ಎಟಿಎಂನಲ್ಲಿ (ATM) ತಿಂಗಳಿಗೆ ಎಷ್ಟು ವಹಿವಾಟುಗಳನ್ನು (transactions) ಉಚಿತವಾಗಿ ಮಾಡಬಹುದು? ಎಷ್ಟು ಹಣ ವಿತ್ ಡ್ರಾ (Withdraw) ಮಾಡಬಹುದು? ಎಂಬುದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ದೇಶದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ (Customers) ತಿಂಗಳಿಗೆ  5 ಎಟಿಎಂ ವಹಿವಾಟುಗಳನ್ನು (transactions) ಉಚಿತವಾಗಿ ನಡೆಸಲು ಅವಕಾಶ ನೀಡಿದೆ. 

ಮಾಸಿಕ 1ಲಕ್ಷ ರೂ. ತನಕ ಬ್ಯಾಂಕ್ ಬ್ಯಾಲೆನ್ಸ್ (Bank Balance) ಹೊಂದಿರುವ ಗ್ರಾಹಕರಿಗೆ ದೆಹಲಿ (Delhi), ಕೋಲ್ಕತ್ತ (Kolkata), ಮುಂಬೈ (Mumbai), ಚೆನ್ನೈ (Chennai), ಬೆಂಗಳೂರು (Bengaluru) ಹಾಗೂ ಹೈದರಾಬಾದ್ ( Hyderabad) ನಗರಗಳ ಎಟಿಎಂಗಳಲ್ಲಿ ತಿಂಗಳಿಗೆ  5 ಉಚಿತ ವಹಿವಾಟುಗಳಿಗೆ  (transactions) ಅವಕಾಶ ನೀಡಲಾಗಿದೆ. ಇನ್ನು ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ಮೂರು ಉಚಿತ ವಹಿವಾಟುಗಳಿಗಷ್ಟೇ  (transactions) ಅವಕಾಶವಿದೆ.

Rules Change:ಜುಲೈ 1ರಿಂದ ಡೆಬಿಟ್ , ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ; ನಿಮಗೆ ತಿಳಿದಿರಲಿ ಈ 10 ಸಂಗತಿಗಳು

ಉಚಿತ ವಹಿವಾಟಿನ ಮಿತಿ ಮೀರಿದ್ರೆ ಎಷ್ಟು ಶುಲ್ಕ?
ಉಚಿತ  ಮಿತಿಯನ್ನು ಮೀರಿದ ಎಟಿಎಂ ವಹಿವಾಟಿಗೆ  (transactions) ಯಾವ ವಿಧದ ವಹಿವಾಟು ಹಾಗೂ ಎಟಿಎಂ (ATM) ಎಂಬುದನ್ನು ಆಧರಿಸಿ ಎಸ್ ಬಿಐ (SBI) 5-20ರೂ. ಶುಲ್ಕ ವಿಧಿಸುತ್ತದೆ. ಎಸ್ ಬಿಐ ತನ್ನದೇ ಬ್ಯಾಂಕಿನ ಎಟಿಎಂನಲ್ಲಿ ಉಚಿತ ವಹಿವಾಟಿನ ಮಿತಿಯನ್ನು ಮೀರಿ ಹಣ ವಿತ್ ಡ್ರಾ ಮಾಡಿದ್ರೆ 10ರೂ. ಶುಲ್ಕ (Fee) ವಿಧಿಸುತ್ತದೆ. ಇನ್ನು ಇತರ ಬ್ಯಾಂಕುಗಳ ಎಟಿಎಂನಲ್ಲಿ ಉಚಿತ ಮಿತಿ ಮೀರಿದ ಹಣಕಾಸಿನ ವಹಿವಾಟಿಗೆ 20ರೂ. ಶುಲ್ಕ ವಿಧಿಸುತ್ತದೆ. ಇನ್ನು  ಬ್ಯಾಂಕ್ ಖಾತೆ ಬ್ಯಾಲೆನ್ಸ್ (Balance) ಚೆಕ್ ಮುಂತಾದ ಹಣಕಾಸೇತರ ವಹಿವಾಟುಗಳನ್ನು ನಡೆಸಿದ್ರೆ ಎಸ್ ಬಿಐ ಎಟಿಎಂನಲ್ಲಿ ಗ್ರಾಹಕರಿಗೆ 5ರೂ. ಹಾಗೂ ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ನಡೆಸಿದ್ರೆ 8ರೂ. ಶುಲ್ಕ ವಿಧಿಸಲಾಗುತ್ತದೆ.

ಎಟಿಎಂನಲ್ಲಿ ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಬ್ಯಾಂಕ್ ಒಟ್ಟು ಮೊತ್ತದ ಶೇ.3.5 ಹೊರತಾಗಿ 100ರೂ. ಶುಲ್ಕ ವಿಧಿಸುತ್ತದೆ. ಮಾರಾಟದ ಉದ್ದೇಶದಿಂದ ಮಾಡಿದ ಅಂತಾರಾಷ್ಟ್ರೀಯ ವಹಿವಾಟಿಗೆ ಮೊತ್ತದ ಶೇ.3ರಷ್ಟು ಶುಲ್ಕ ವಿಧಿಸಲಾಗುತ್ತದೆ. ಒಂದು ವೇಳೆ ಖಾತೆಯಲ್ಲಿ ಅಗತ್ಯ ಮೊತ್ತದ ಬ್ಯಾಲೆನ್ಸ್ ಇಲ್ಲದಿದ್ರೆ ಹಾಗೂ ಆ ಕಾರಣಕ್ಕೆ ವಹಿವಾಟು ನಿರಾಕರಿಸಿದ್ರೆ ಆಗ ಎಸ್ ಬಿಐ 20ರೂ. ಶುಲ್ಕ ವಿಧಿಸುತ್ತದೆ.

Earn Money : ವಾಟ್ಸ್ ಆ್ಯಪ್ ಸ್ಟೇಟಸ್ ನೋಡೋ ಬದಲು ಸ್ಟೇಟಸ್ ಹಾಕಿ ,ಹಣ ಗಳಿಸಿ

ಬಡ್ಡಿದರ ಹೆಚ್ಚಳ
ಇತ್ತೀಚೆಗೆ ಎಸ್ ಬಿಐ ಸಾಲಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. ಈ ಹೊಸ ದರವು ಜೂನ್ 14ರಿಂದ ಜಾರಿಗೆ ಬರಲಿದೆ. ಎಸ್ ಬಿಐ ಹೊಸ ಬಡ್ಡಿದರ 2ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಅನ್ವಯಿಸಲಿದೆ. 211 ದಿನಗಳಿಂದ ಒಂದು ವರ್ಷದೊಳಗಿನ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿ ಗಳ ಬಡ್ಡಿದರವನ್ನು ಎಸ್ ಬಿಐ (SBI) ಶೇ.4.40ರಿಂದ ಶೇ. 4.60ಕ್ಕೆ ಹೆಚ್ಚಿಸಿದೆ. ಒಂದು ವರ್ಷ ಹಾಗೂ ಎರಡು ವರ್ಷಗಳೊಳಗಿನ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿ ಮೇಲಿನ ಬಡ್ಡಿದರ ಶೇ.5.30 ಹಾಗೂ ಎರಡರಿಂದ ಮೂರು ವರ್ಷಗಳ ಅವಧಿಯ
ಎಫ್ ಡಿ ಮೇಲಿನ ಬಡ್ಡಿದವನ್ನು ಶೇ.5.35 ಕ್ಕೆ ಹೆಚ್ಚಿಸಲಾಗಿದೆ. 

ಎಸ್ ಬಿಐ ಜೂ.15ರಿಂದಲೇ ಜಾರಿಗೆ ಬರುವಂತೆ ಸಾಲಗಳ (Loans) ಮೇಲಿನ ಬಡ್ಡಿದರವನ್ನು (Interest rate) 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಎಸ್ ಬಿಐ (SBI) ಎಫ್ ಡಿ (FD) ಹಾಗೂ ಸಾಲಗಳ (Loans) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. 

click me!