Earn Money : ವಾಟ್ಸ್ ಆ್ಯಪ್ ಸ್ಟೇಟಸ್ ನೋಡೋ ಬದಲು ಸ್ಟೇಟಸ್ ಹಾಕಿ ,ಹಣ ಗಳಿಸಿ

By Suvarna News  |  First Published Jun 21, 2022, 4:13 PM IST

ಈಗ ಗಳಿಕೆಗೆ ಅನೇಕ ವಿಧಾನಗಳಿವೆ. ಅದನ್ನು ಬಳಸುವ ಬುದ್ಧಿವಂತಿಕೆ ತಿಳಿದಿರಬೇಕು. ವಾಟ್ಸ್ ಅಪ್ ಬರೀ ಚಾಟ್ ಹಾಗೂ ವಿಡಿಯೋ ಕಾಲಿಗೆ ಸೀಮಿತವಲ್ಲ. ಅದ್ರ ಸಹಾಯದಿಂದ ನೀವು ನಿಮ್ಮ ಗಳಿಕೆ ಶುರು ಮಾಡ್ಬಹುದು. ವ್ಯಾಪಾರವನ್ನು ವಿಸ್ತರಿಸಬಹುದು.
 


ಈಗ ವಾಟ್ಸ್ ಅಪ್ (Whats Up) ಎಲ್ಲರೂ ಬಳಕೆ ಮಾಡ್ತಾರೆ. ವಾಟ್ಸ್ ಅಪ್ ಸ್ಟೇಟಸ್ (Status) ನೋಡ್ತಾ, ಅದಕ್ಕೆ ಕಮೆಂಟ್ ಮಾಡ್ತಾ ಸುಮ್ಮನೆ ಕಾಲಹರಣ ಮಾಡುವ ಬದಲು ಇದೇ ಸಮಯದಲ್ಲಿ ನೀವು ಸ್ವಲ್ಪ ಹಣ ಗಳಿಸ್ಬಹುದು. ವಾಟ್ಸ್ ಅಪ್ ಮೂಲಕ ಹಣ ಗಳಿಸಲು ನಾನಾ ದಾರಿಗಳಿವೆ. ನಾವಿಂದು ಹಣ ಗಳಿಸಲು ವಾಟ್ಸ್ ಅಪ್ ಹೇಗೆ ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ಹೇಳ್ತೇವೆ.  
ವಾಟ್ಸ್ ಅಪ್ ನಲ್ಲಿ ಹಣ (Money) ಗಳಿಸುವ ಮೊದಲು ನಿಮಗೆ ಏನೆಲ್ಲ ಸೌಲಭ್ಯ ಬೇಕು ಎಂಬುದನ್ನು ಹೇಳ್ತೇವೆ. ಸ್ಮಾರ್ಟ್ಫೋನ್, ವಾಟ್ಸ್ ಅಪ್ ಅಕೌಂಟ್, ಇಂಟರ್ನೆಟ್ ಸೌಲಭ್ಯ, ಒಂದಿಷ್ಟು ವಾಟ್ಸ್ ಅಪ್ ಗ್ರೂಪ್ ಹಾಗೂ ವಾಟ್ಸ್ ಅಪ್ ಬಳಕೆದಾರರ ದಂಡು. ಹಾಗೆ ಸೃಜನಶೀಲತೆ ಮುಖ್ಯವಾಗುತ್ತದೆ.

ವಾಟ್ಸ್ ಅಪ್ ಮೂಲಕ ಹೀಗೆ ಹಣ ಗಳಿಸಿ : 

Tap to resize

Latest Videos

ರೀಸೆಲ್ಲಿಂಗ್ ಅಪ್ಲಿಕೇಷನ್ ಮೂಲಕ ಹಣ : ಆನ್ಲೈನ್ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಎಲ್ಲ ಕಂಪನಿಗಳು ಆನ್ಲೈನ್ ಖರೀದಿ ಸೌಲಭ್ಯ ನೀಡ್ತಿವೆ. ಹೀಗಿರುವಾಗ ನೀವು ಯಾವುದೇ ಒಂದು ರೀಸೆಲ್ಲಿಂಗ್ ಅಪ್ಲಿಕೇಷನ್ ಮೂಲಕ ಹಣ ಗಳಿಸಬಹುದು. ಈ ಹಣ ಗಳಿಕೆಗೆ ವಾಟ್ಸ್ ಅಪ್ ನೆರವು ಪಡೆಯಬೇಕು. ನೀವು ಮೊದಲು ಕಮಿಷನ್ ನೀಡುವ ಅಥವಾ ರೀಸೇಲ್ ಗೆ ಅವಕಾಶ ನೀಡುವ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ. ನಂತ್ರ ಅದ್ರ ಉತ್ಪನ್ನಗಳನ್ನು ವಾಟ್ಸ್ ಅಪ್ ಸ್ಟೇಟಸ್ ಹಾಗೂ ಗ್ರೂಪ್ ಗಳಿಗೆ ಕಳುಹಿಸಿ. ಅಲ್ಲಿ ಗ್ರಾಹಕರು ಖರೀದಿಗೆ ಮುಂದಾದ್ರೆ ಅಪ್ಲಿಕೇಷನ್ ಸಹಾಯದಿಂದ ವಸ್ತುವನ್ನು ಆರ್ಡರ್ ಮಾಡಿ. ನಿಮ್ಮ ಆರ್ಡರ್ ಗೆ ಕಮಿಷನ್ ಒಂದು ವಾರದಲ್ಲಿ ನಿಮ್ಮ ಖಾತೆ ತಲುಪುತ್ತದೆ.   

ವಾಟ್ಸ್ ಅಪ್ ನಲ್ಲಿ ಬ್ಲಾಗ್ ಮೂಲಕ ಹಣ ಸಂಪಾದನೆ : ವಾಟ್ಸ್ ಅಪ್ ನಲ್ಲಿ ನಿಮ್ಮ ಯುಟ್ಯೂಬ್ ವಿಡಿಯೋಗಳನ್ನು ಹಂಚಿಕೊಳ್ಳುವಂತೆ ಬ್ಲಾಗ್ ಗಳನ್ನು ಹಂಚಿಕೊಳ್ಳಬಹುದು. ಗ್ರೂಪ್ ಅಥವಾ ಸ್ಟೇಟಸ್ ಗೆ ನಿಮ್ಮ ಬ್ಲಾಗ್ ಲಿಂಕ್ ಹಾಕಿ.   ಹೊಸ ಬ್ಲಾಗರ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿ ವಾಟ್ಸಾಪ್ ಗ್ರೂಪ್‌ನ ಸೇರ್ಪಡೆಯನ್ನು ನೀಡುತ್ತಾರೆ, ನೀವೂ ಹಾಗೆ ಮಾಡ್ಬಹುದು. ನಿಮ್ಮ ಗ್ರೂಪಿಗೆ ಸೇರಿದ ಸದಸ್ಯರಿಗೆ ವೆಬ್‌ಸೈಟ್‌ನ ಪೋಸ್ಟ್ ಆದ ಎಲ್ಲ ಲಿಂಕ್ ಸಿಗುವಂತೆ ನೀವು ಮಾಡ್ಬೇಕು. ವಾಟ್ಸಾಪ್ ಗುಂಪಿನ ಸದಸ್ಯರನ್ನು ಗುಂಪಿನಲ್ಲಿ ಉಳಿಸಿಕೊಳ್ಳಲು ನೀವು ಬಯಸಿದರೆ, ನಿಮ್ಮ ಬ್ಲಾಗ್ ಪೋಸ್ಟ್ ನೊಂದಿಗೆ ನೀವು ಇತರ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು.

ವಾಟ್ಸ್ ಅಪ್ ನಲ್ಲಿ ಯುಟ್ಯೂಬ್ (Youtube) ಮೂಲಕ ಹಣ ಗಳಿಕೆ : ನೀವು ಯುಟ್ಯೂಬ್ ಚಾನೆಲ್ ಹೊಂದಿದ್ದರೆ ಅದ್ರ ಲಿಂಕನ್ನು ಕೂಡ ನೀವು ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಬಹುದು. ಇದ್ರಿಂದ ನಿಮ್ಮ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ.  

ಅಫಿಲಿಯೇಟ್ ಮಾರ್ಕೆಟಿಂಗ್ (Affilicated Marketing) : ವಾಟ್ಸಾಪ್ ಮೂಲಕ ಆನ್‌ಲೈನ್‌ನಲ್ಲಿ (Online) ಹಣ ಸಂಪಾದಿಸಲು ನೀವು ಅಫಿಲಿಯೇಟ್ ಮಾರ್ಕೆಟಿಂಗ್ ಅನ್ನು ಬಳಸಬಹುದು. ಇಂದಿನ ದಿನಗಳಲ್ಲಿ ಅನೇಕ ಜನರು ಇದರ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಅಫಿಲಿಯೇಟ್ ಮಾರ್ಕೆಟಿಂಗ್ ಅಡಿಯಲ್ಲಿ ನೀವು ಅಫಿಲಿಯೇಟ್ ಕಂಪನಿಯ ಅಂಗ ಪ್ರೋಗ್ರಾಂಗೆ ಸೇರಬೇಕು ಮತ್ತು ಅದರ ನಂತರ ನೀವು ಅವರ ಉತ್ಪನ್ನವನ್ನು ನಿಮ್ಮ ವಾಟ್ಸಾಪ್ ಗುಂಪಿನಲ್ಲಿ ಮಾರಾಟ ಮಾಡಬಹುದು ಅಥವಾ ನಿಮ್ಮ ವಾಟ್ಸಾಪ್ ಮೂಲಕ ನೀವು ಅದನ್ನು ಪ್ರಚಾರ ಮಾಡಬಹುದು ಮತ್ತು ಪ್ರತಿ ಮಾರಾಟಕ್ಕೆ ನೀವು ಉತ್ತಮ ಆದಾಯವನ್ನು ಪಡೆಯಬಹುದು.   

ಉತ್ಪನ್ನಗಳನ್ನು ಮಾರಾಟಕ್ಕೆ ವಾಟ್ಸ್ ಅಪ್ : ನೀವು ತಯಾರಿಸಿದ ಉತ್ಪನ್ನಗಳಿಗೆ ಕೂಡ ನೀವು ವಾಟ್ಸ್ ಅಪ್ ಮೂಲಕ ಮಾರುಕಟ್ಟೆ ಸೃಷ್ಟಿಸಬಹುದು. ನಿಮ್ಮ ಉತ್ಪನ್ನಗಳ ಮಾಹಿತಿಯನ್ನು ಹಂಚಿಕೊಂಡು ಹಣ ಗಳಿಸಬಹುದು. ಉತ್ಪನ್ನ ಅಥವಾ ವ್ಯಾಪಾರಕ್ಕೆ ನೀವು ಬ್ಯುಸಿನೆಸ್ ಖಾತೆಯನ್ನು ತೆರೆಯಬಹುದು. ಅನೇಕ ಜನರು ತಮ್ಮ ಮಾರಾಟವನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಹಣವನ್ನು ಗಳಿಸಲು ವಾಟ್ಸ್ ಅಪ್ ಬ್ಯುಸಿನೆಸ್ ಖಾತೆಯನ್ನು ಬಳಸ್ತಿದ್ದಾರೆ.

Jio Recharge App ಮೂಲಕ ಮನೆಯಲ್ಲೇ ಕುಳಿತು ಗಳಿಸಿ ಹಣ

ವಾಟ್ಸ್ ಅಪ್ ನಲ್ಲಿ ಸ್ವತಂತ್ರವಾಗಿ ಹಣ ಸಂಪಾದನೆ : ಇತ್ತೀಚಿನ ದಿನಗಳಲ್ಲಿ ಎಲ್ಲಾ ವೃತ್ತಿಪರರು ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ವಾಟ್ಸ್ ಅಪ್ ಗ್ರೂಪ್ ಶುರು ಮಾಡ್ತಾರೆ. ನೀವು ಫ್ರೀಲ್ಯಾನ್ಸಿಂಗ್ ಕ್ಷೇತ್ರದಲ್ಲಿ ಪರಿಣತರಾಗಿದ್ದರೆ ನೀವು ಅನೇಕ ಫ್ರೀಲ್ಯಾನ್ಸಿಂಗ್ ಸಂಬಂಧಿತ ವಾಟ್ಸ್ ಅಪ್ ಗ್ರೂಪ್ ಗೆ ಸೇರಬಹುದು. ಅಲ್ಲಿ ನಿಮ್ಮ  ಕೆಲಸವನ್ನು ಪ್ರಚಾರ ಮಾಡಬಹುದು ಮತ್ತು ಉತ್ತಮ ಗ್ರಾಹಕರನ್ನು ಪಡೆಯಬಹುದು ಮತ್ತು ಹಣ  ಗಳಿಸಬಹುದು.

PENSION SCHEME:ದಿನಕ್ಕೆ ಕೇವಲ 2ರೂ. ಹೂಡಿಕೆ ಮಾಡಿದ್ರೆ 36 ಸಾವಿರ ಲಾಭ; ಹೇಗೆ? ಯಾವ ಯೋಜನೆ? ಇಲ್ಲಿದೆ ಮಾಹಿತಿ

ರೆಫರಲ್ ಲಿಂಕ್ ಮೂಲಕ ಹಣ ಗಳಿಕೆ : ಅನೇಕ ಕಂಪನಿಗಳು ರೆಫರಲ್ ಅವಕಾಶ ನೀಡುತ್ತವೆ. ನೀವು ಕಂಪನಿ ರೆಫರಲ್ ಲಿಂಕ್ ಹಂಚಿಕೊಳ್ಳಬೇಕು. ನೀವು ಹಂಚಿಕೊಂಡ ಲಿಂಕ್ ಸಹಾಯದಿಂದ ಇನ್ನೊಬ್ಬ ಖಾತೆ ತೆರೆದ್ರೆ ನಿಮಗೆ ಕಮಿಷನ್ ನೀಡಲಾಗುತ್ತದೆ. 

 

 

click me!