
ಬೆಂಗಳೂರು (ಜು.2): ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಇತ್ತೀಚೆಗೆ ಇನ್ಸ್‌ಟಗ್ರಾಮ್‌ನಲ್ಲಿ ತಮ್ಮ ಥೆಯನ್ನು ಹಂಚಿಕೊಂಡಿದ್ದರೆ. ಅತ್ಯಂತ ಸರಳ ಹಾಗೂ ಅಚ್ಚರಿಯ ಮಾ್ಗದಲ್ಲಿ ತಾವು ಹಣವನ್ನು ಹೇಗೆ ಉಳಿತಾಯ ಮಾಡುತ್ತಿದ್ದೇನೆ ಅನ್ನೋದನ್ನ ತಿಳಿಸಿದ್ದಾರೆ. ವಿಡಿಯೋದಲ್ಲಿ ಆಕೆ, ತಾವು ಯುಪಿಐ ಅಪ್ಲಿಕೇಶನ್ ಬಳಸೋದನ್ನ ಸಂಪೂರ್ಣವಾಗಿ ನಿಲ್ಲಿಸಿರುವುದಗಿ ತಿಳಿಸಿದ್ದಾರೆ. ಅದಲ್ಲದೆ, ಪ್ರತಿದಿನದ ಖರ್ಚುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾವು ಗೂಗಲ್ ಪೇ ಅಪ್ಲಿಕೇಶನ್‌ಅನ್ನೇ ಮೊಬೈಲ್‌ನಿಂದ ಡಿಲೀಟ್ ಮಾಡಿರುವುದಾಗಿ ತಿಳಿಸಿದ್ದಾರೆ.
ನಾನು ಎಲ್ಲಿಯೂ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡೋದಿಲ್ಲ, ಕ್ವಿಕ್ ಆಗಿ ಹಣವನ್ನು ಯಾರಿಗೂ ಕಳಿಸೋದಿಲ್ಲ ಇದರಿಂದಾಗಿ ನಾನು ದುಡಿದ ಹಣ ಎಲ್ಲಿ ಖರ್ಚಾಗುತ್ತಿದೆ ಎನ್ನುವ ಎಲ್ಲಾ ಮಾಹಿತಿಗಳೂ ನನಗೆ ಸಿಗುತ್ತಿದೆ ಎಂದು ತಮ್ಮ ಲಿಟಲ್ ಚೇಂಜಸ್, ಬಿಗ್ ಇಂಪ್ಯಾಕ್ಟ್ ಎನ್ನುವ ಸಿರೀಸ್‌ನ ನಾಲ್ಕನೇ ಎಪಿಸೋಡ್‌ನಲ್ಲಿ ತಿಳಿಸಿದ್ದಾರೆ.
"Little Changes, Big Impact. ಯುಪಿಐ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಸ್ಕ್ಯಾನ್ ಮಾಡೋದಿಲ್ = ಕಡಿಮೆ ಖರ್ಚು. ನನ್ನ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ನನಗೆ ಹೆಚ್ಚಿನ ಅರಿವು ಮೂಡಿಸಿದೆ" ಎಂದು ಅವರ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಆರಂಭದಲ್ಲಿ ನನಗೆ ಇದಕ್ಕೆ ಅಡ್ಜಸ್ಟ್ ಆಗುವುದು ಬಹಳ ಕಷ್ಟವಾಯಿತು ಎಂದು ಅನಮ್ ತಿಳಿಸಿದ್ದಾರೆ. ತಮ್ಮ ಕಾಫಿಯನ್ನು ತರಲು ನನ್ನ ಸ್ನೇಹಿತರಿಗೆ ಹೇಳುತ್ತಿದ್ದೆ ಎಂದಿದ್ದಾರೆ. ಆದರೆ, ದಿನಗಳು ಕಳೆದ ಹಾಗೆ ನಾನು ಬದಲಾವಣೆಗೆ ಒಗ್ಗಿಕೊಂಡಿದ್ದು, ಈಗ ನನಗೆ ಇದು ಬಹಳ ಸಹಾಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಅನಮ್ ಮಿರ್ಜಾ ಅವರ ವಿಡಿಯೋ ಕ್ವಿಕ್ ಆಗಿ ನೆಟ್ಟಿಗರ ಗಮನಸೆಳೆದಿದೆ. ಹೆಚ್ಚಿನವರು ಅವರ ಪ್ರಮಾಣಿಕತೆಯನ್ನು ಮೆಚ್ಚಿದ್ದು ಮಾತ್ರವಲ್ಲದೆ, ನಮ್ಮ ಜೀವನದಂತೆಯೇ ನಿಮ್ಮ ಜೀವನವೂ ಇದೆ ಎಂದಿದ್ದಾರೆ. ಕೆಲವು ಯೂಸರ್‌ಗಳು ತಾವು ಈಗಾಗಲೇ ಇದನ್ನು ಪ್ರಯತ್ನಿಸಲು ಆರಂಭಿಸಿದ್ದು, ಅದು ಕಡಿಮೆ ಖರ್ಚು ಮಾಡಲು ಸಹಾಯ ಮಾಡುತ್ತದೆಯೇ ಎಂದು ನೋಡುತ್ತಿದ್ದೇವೆ ಎಂದಿದ್ದಾರೆ.
ಒಬ್ಬ ಯೂಸರ್, 'ಇದು ಖಂಡಿತವಾಗಿ ದೊಡ್ಡ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗಲಿದೆ' ಎಂದು ಬರೆದುಕೊಂಡಿದ್ದಾರೆ. ಈ ಹಂತದ ಜೀವನದಲ್ಲಿ ಇಂಥದ್ದೊಂದು ಬದಲಾವಣೆಗೆ ಒಗ್ಗಿಕೊಳ್ಳುವುದು ನಿಜಕ್ಕೂ ಗ್ರೇಟ್ ಎಂದಿದ್ದಾರೆ.
"ನೀವು ಈಗಾಗಲೇ ಶ್ರೀಮಂತರಾಗಿರುವುದರಿಂದ ಇದು ನಿಮಗೆ ಸರಿಹೊಂದುತ್ತದೆ. ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಮಾತ್ರ UPI ಇರುವುದು ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅನಗತ್ಯ ಖರ್ಚುಗಳನ್ನು ಮಾಡುವ ಮೊದಲು ಜನರು ಖಂಡಿತವಾಗಿಯೂ ಯೋಚಿಸಬೇಕು ಆದರೆ ಅದಕ್ಕಾಗಿ UPI ಖಾತೆಯನ್ನು ಡಿಲೀಟ್ ಮಾಡುವುದು ತುಂಬಾ ಅತಿಯಾಯಿತು ಎನಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.
ಅನಮ್ ಅವರ ಹಣ ಉಳಿಸುವ ವೀಡಿಯೊ ಗಮನಸೆಳೆದಿದ್ದು, ಸಂಕೀರ್ಣವಾದ ಬಜೆಟ್ ವಿಧಾನಗಳನ್ನು ಅನುಸರಿಸುವ ಬಗ್ಗೆ ಅಲ್ಲ, ಬದಲಿಗೆ ತ್ವರಿತ ಡಿಜಿಟಲ್ ಪಾವತಿಗಳ ಸುಲಭತೆಯಿಂದ ದೂರವಿರುವುದನ್ನು ಒಳಗೊಂಡಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.