ನೌಕರಿ ಜೊತೆ ಹುಲ್ಲು ಬೆಳೆದರೆ ಸಾಕು, ಶೇ.100 ರಷ್ಟು ಟ್ಯಾಕ್ಸ್ ಉಳಿತಾಯ ಟಿಪ್ಸ್ ನೀಡಿದ ವೈರಲ್ ಸಿಎ!

By Chethan Kumar  |  First Published Jul 26, 2024, 6:07 PM IST

ಸ್ಯಾಲರಿ ಉದ್ಯೋಗಿಗಳು ಯಾವುದೇ ಉಳಿತಾಯ, ವಿಮೆ, ಎನ್‌ಪಿಎ, ಸಾಲವಿಲ್ಲದೆ ಶೇಕಡಾ 100 ರಷ್ಟು ಟ್ಯಾಕ್ಸ್ ಉಳಿಸಲು ಸಾಧ್ಯವೇ? ಇದಕ್ಕೆ ವೈರಲ್ ಸಿಎ ಸಿಂಪಲ್ ಟಿಪ್ಸ್ ನೀಡಿದ್ದಾರೆ. ಶೇ.100 ರಷ್ಟು ತೆರಿಗೆ ಉಳಿಸಲು ನಿಮ್ಮ ಬಾಲ್ಕನಿಯಲ್ಲಿ ಹುಲ್ಲು ಬೆಳೆದರೆ ಸಾಕು. ಹೇಗೆ ಅಂತೀರಾ? 


ಈ ಬಾರಿಯ ಬಜೆಟ್ ಬಳಿಕ ತೆರಿಗೆ ಪಾವತಿ, ಸ್ಯಾಲರಿ ಉದ್ಯೋಗಳ ತೆರಿಗೆ ಕಡಿತ ಅತೀ ಹೆಚ್ಚು ಚರ್ಚೆಯಾಗುತ್ತಿದೆ. ಸ್ಯಾಲರಿ ಉದ್ಯೋಗಿಗಳ ಅತೀ ದೊಡ್ಡ ಸಮಸ್ಯೆ ತೆರಿಗೆ. ಅದರಲ್ಲೂ ಮಧ್ಯಮ ವರ್ಗ ದುಡಿದ ಸಂಪಾದಿಸಿದ ದುಡ್ಡಿನಲ್ಲಿ ತೆರಿಗೆ ಕಟ್ಟಿ ಅರ್ಧ ಜೀವನ ಸವೆಸಿ ಬಿಡುತ್ತದೆ. ಇದೀಗ ವೈರಲ್ ಸಿಎ ಸ್ಯಾಲರಿ ಉದ್ಯೋಗಿಗಳಿಗೆ ಶೇಕಡಾ 100 ರಷ್ಟು ತೆರಿಗೆ ಉಳಿತಾಯ ಮಾಡಲು ವೈರಲ್ ಸಿಎ ಸಿಂಪಲ್ ಟಿಪ್ಸ್ ನೀಡಿದ್ದಾರೆ. ನೀವು ಜಮೀನಿನಲ್ಲಿ, ಬಾಲ್ಕನಿಯಲ್ಲಿ ಅಥವಾ ಟರೇಸ್ ಮೇಲೆ ಹುಲ್ಲು ಬೆಳೆದರೆ ಸಾಕು. ಈ ಹುಲ್ಲು ನಿಮ್ಮ ಸ್ಯಾಲರಿಯ ತೆರಿಗೆಯನ್ನು ಶೇಕಡಾ 100 ರಷ್ಟು ಉಳಿತಾಯ ಮಾಡಲಿದೆ ಎಂದು ಫನ್ನಿ ಟಿಪ್ಸ್ ನೀಡಿದ್ದಾರೆ. 

ಸಿಎ ಅಖಿಲ್ ಪಚೋರಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಜೆಟ್ ಬಳಿಕ ವೈರಲ್ ಆಗಿರುವ ಈ ವಿಡಿಯೋವನ್ನುಪಚೋರಿ ಹಂಚಿಕೊಂಡು ವಾಸ್ತವತೆ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ  ಬಜೆಟ್ ಮಂಡನೆ ಬಳಿಕ ಭಾರಿ ಚರ್ಚೆಯಾಗುತ್ತಿರುವ ತೆರಿಗೆ ಉಳಿತಾಯಕ್ಕೆ ಟಿಪ್ಸ್ ನೀಡಿದ್ದಾರೆ. ಪ್ರಮುಖವಾಗಿ ಸ್ಯಾಲರಿ ಉದ್ಯೋಗಿಗಳು ತೆರಿಗೆ ಕಡಿತಕ್ಕೆ ಗೃಹ ಸಾಲ, ಉಳಿತಾಯ, ವಿಮೆ, ಪಿಂಚಣಿ ಯೋಜನೆ ಸೇರಿದಂತೆ ಹಲವು ಹೂಡಿಕೆಗಳ ಮುಖಾಂತರ ಒಂದಷ್ಟು ತೆರಿಗೆ ಉಳಿತಾಯ ಮಾಡಬಗುದು. ಆದರೆ ವಾರ್ಷಿಕ ವೇತನ 3 ಲಕ್ಷಕ್ಕಿಂತ ಮೇಲ್ಪಟ್ಟರೆ ತೆರಿಗೆ ಕಟ್ಟಿಟ್ಟ ಬುತ್ತಿ. ಆದರೆ ಯಾವುದೇ ಉಳಿತಾಯ, ವಿಮೆ, ಏನೂ ಇಲ್ಲದೆ ಶೇಕಡಾ 100 ರಷ್ಟು ತೆರಿಗೆ ಉಳಿತಾಯಕ್ಕೆ ಅಖಿಲಿ ಪಿಚೋರಿ ಬಜೆಟ್ ವಿಡಂಬನೆ ಮಾಡಿದ ವಿಡಿಯೋ ಇಲ್ಲಿದೆ.

Tap to resize

Latest Videos

undefined

Union Budget 2024: ಹೂಡಿಕೆದಾರರಿಗೆ ‘ಕ್ಯಾಪಿಟಲ್‌ ಗೇನ್‌’ ಶಾಕ್‌: ಚಿನ್ನ, ಆಸ್ತಿಯತ್ತ ಹೂಡಿಕೆ ಹೆಚ್ಚಳ ಸಂಭವ

ಅಖಿಲ್ ಪಿಚೋರಿ ಪ್ರಕಾರ, ನೀವು ಸ್ಯಾಲರಿ ಪಡೆಯುತ್ತಿರುವ ಉದ್ಯೋಗಿಯಾಗಿದ್ದರೆ ಜಮೀನು, ಬಾಲ್ಕನಿ ಅಥವಾ ಟರೇಸ್ ಮೇಲೆ ಹುಲ್ಲು ಬೆಳೆಯಬೇಕು. ಅದು ಕಾನೂನು ಬದ್ಧವಾಗಿದೆ. ಹಾಗೂ ಅತ್ಯಂತ ಸುಲಭವಾಗಿ ಹುಲ್ಲು ಬೆಳೆಯಬಹುದು. ಹುಲ್ಲು ಸಂಪೂರ್ಣವಾಗಿ ಬೆಳೆದ ಬಳಿಕ ನಿಮ್ಮ ಹೆಚ್ಆರ್‌ ಸಂಪರ್ಕಿಸಿ, ನನಗೆ ಸ್ಯಾಲರಿ ಬೇಡ ಎಂದು ಹೇಳಬೇಕು. ಇದನ್ನು ಕೇಳಿದ ಹೆಚ್‌ಆರ್ ಸಂತಸಗೊಳ್ಳುತ್ತಾರೆ. ಆದರೆ ಸ್ಯಾಲರಿ ಬದಲು ಕಂಪನಿ ನನ್ನಿಂದ ಹುಲ್ಲು ಖರೀದಿಸಬೇಕು. ನನಗೆ ನೀಡುವ ಸ್ಯಾಲರಿಯ ಹಣದಷ್ಟು ನೀವು ಹುಲ್ಲು ಖರೀದಿಸಬೇಕು. ಉದಾಹರಣೆ ನಿಮ್ಮ ವೇತನ ತಿಂಗಳಿಗೆ 50 ಸಾವಿರ ರೂಪಾಯಿ ಆಗಿದ್ದರೆ, ಕಂಪನಿ ಒಂದು ಕಟ್ಟಿಗೆ 10 ಸಾವಿರದಂತೆ 5 ಕಟ್ಟು ಹುಲ್ಲು ಕಂಪನಿ ಖರೀದಿಸಿಬೇಕು. ಇದು ಕಾನೂನು ಬದ್ಧ. ಇದರಿಂದ ಕಂಪನಿ ನೀಡುವ ಸ್ಯಾಲರಿ ಶೂನ್ಯ. ಆದರೆ ನಿಮ್ಮ ಖಾತೆಯಲ್ಲಿ ತಿಂಗಳಲ್ಲಿ ಹುಲ್ಲು ಮಾರಾಟ ಮಾಡಿ 50,000 ರೂಪಾಯಿ ಕ್ರೆಡಿಟ್ ಆಗಿರುತ್ತದೆ. ಭಾರತದಲ್ಲಿ ಕೃಷಿ ಉತ್ಪನ್ನಗಳಿಗೆ ತೆರಿಗೆ ಇಲ್ಲ. ನೀವು ಟಿಡಿಎಸ್ ಕುರಿತು ಚಿಂತಿಸಬೇಕಿಲ್ಲ, ಹೂಡಿಕೆ, ಸಾಲ ಯೋಚಿಸಬೇಕಿಲ್ಲ. ಶೇಕಡಾ 100 ರಷ್ಟು ತೆರಿಗೆ ಉಳಿತಾಯ ಮಾಡಲು ಸಾಧ್ಯ ಎಂದು ಅಖಿಲ್ ಪಿಚೋರಿ ಈ ಬಾರಿಯ ಬಜೆಟನ್ನು ವಿಡಂಬನೆ ಮಾಡಿದ್ದಾರೆ.

 

Salaried Class, this video is for you...

How to save 100% income tax 😂😂 pic.twitter.com/UZBzuPNklV

— CA Akhil Pachori (@akhilpachori)

 

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಈ ರೀತಿ ಹುಲ್ಲು ಮಾರಾಟ ಮಾಡುತ್ತಾರೆ ಎಂದು ಸರ್ಕಾರಕ್ಕೂ ಮೊದಲೇ ಗೊತ್ತಿದೆ. ಹೀಗಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ನಿಮ್ಮನ್ನು ಬಂಧಿಸುತ್ತಾರೆ ಎಂದು ಎಚ್ಚರಿಸಿದ್ದಾರೆ. ಹಲವು ಇದು ಕಾನೂನು ಬದ್ಧವಾಗಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಬಜೆಟ್ ವಿಡಂಬನೆ ಮಾಡಲು ಪೋಸ್ಟ್ ಮಾಡಲಾಗಿದೆ. ಇದು ಕಾನೂನು ಬದ್ಧವಾಗಿ ಮಾಡಲು ಸಾಧ್ಯವಿಲ್ಲ. ವೈರಲ್ ವಿಡಿಯೋದ ಮೂಲಕ ಮದ್ಯಮ ವರ್ಗದ ತೆರಿಗೆ ಉಳಿತಾಯಕ್ಕೆ ಫನ್ನಿ ಟಿಪ್ಸ್ ನೀಡಲಾಗಿದೆ.

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ
 

click me!