ಮೋದಿ ದೂರದೃಷ್ಟಿ ಫಲ ಭಾರತದ ಆರ್ಥಿಕತೆಯಲ್ಲಿ ಕಾಣುತ್ತಿದೆ: ರಷ್ಯಾ ಅಧ್ಯಕ್ಷ

By Kannadaprabha News  |  First Published Jun 30, 2023, 7:33 AM IST

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾದ ಅತ್ಯಾಪ್ತ ಮಿತ್ರ ಎಂದು ಬಣ್ಣಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯನ್ನು ಬಹುವಾಗಿ ಹೊಗಳಿದ್ದಾರೆ. ಮೋದಿ ಜಾರಿಗೊಳಿಸಿದ ಈ ಯೋಜನೆ ಇದೀಗ ಭಾರತದ ಆರ್ಥಿಕತೆಯಲ್ಲಿ ಬಿಂಬಿತವಾಗಿದೆ ಎಂದು ಪುಟಿನ್‌ ಹೇಳಿದ್ದಾರೆ. 


ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾದ ಅತ್ಯಾಪ್ತ ಮಿತ್ರ ಎಂದು ಬಣ್ಣಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯನ್ನು ಬಹುವಾಗಿ ಹೊಗಳಿದ್ದಾರೆ. ಮೋದಿ ಜಾರಿಗೊಳಿಸಿದ ಈ ಯೋಜನೆ ಇದೀಗ ಭಾರತದ ಆರ್ಥಿಕತೆಯಲ್ಲಿ ಬಿಂಬಿತವಾಗಿದೆ ಎಂದು ಪುಟಿನ್‌ ಹೇಳಿದ್ದಾರೆ.  ಮಾಸ್ಕೋದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್‌ (Vladimir Putin)‘ಭಾರತದಲ್ಲಿನ ನನ್ನ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ (Narendra Modi), ರಷ್ಯಾಕ್ಕೂ ಅತ್ಯಂತ ಆತ್ಮೀಯ ಸ್ನೇಹಿತ. ಕೆಲ ವರ್ಷಗಳ ಹಿಂದೆ ಅವರೊಂದು ಮೇಕ್‌ ಇನ್‌ ಇಂಡಿಯಾ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ವಿದೇಶಿ ವಸ್ತುಗಳ ಮೇಲಿನ ಅವಲಂಬನೆ, ವಸ್ತುಗಳ ಆಮದಿನ ಬದಲಾಗಿ ದೇಶೀಯವಾಗಿಯೇ ತನ್ನದೇ ಆದ ಅತ್ಯಾಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಅದಾಗಿತ್ತು.

ಆ ಯೋಜನೆಯ ಫಲ ಇದೀಗ ಭಾರತದ ಆರ್ಥಿಕತೆ ಮೂಲಕ ಕಾಣಸಿಗುತ್ತಿದೆ. ಭಾರತದಂತೆ ನಾವು ಕೂಡಾ ದೇಶೀಯವಾಗಿ ಆಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಆರ್ಥಿಕತೆಯನ್ನು ಸೃಷ್ಟಿಸಬೇಕು ಎಂದು ಪುಟಿನ್‌ ಕರೆ ಕೊಟ್ಟಿದ್ದಾರೆ.

Tap to resize

Latest Videos

ಮೇಕ್‌ ಇನ್‌ ಇಂಡಿಯಾ ಫಲ: ದೇಶದಲ್ಲಿ 1 ಲಕ್ಷ ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಉತ್ಪಾದನೆ 

ತನ್ನ ವಿರುದ್ಧವೇ ದಂಗೆಯೆದ್ದ ಖಾಸಗಿ ಸೇನೆಗೆ ಪುಟಿನ್‌ ಕ್ಷಮೆ: ‘ದೇಶದ್ರೋಹಿಗಳ’ ಎದುರು ಮಂಡಿಯೂರಿದ ರಷ್ಯಾ?

click me!