
ಮಾಸ್ಕೋ: ರಷ್ಯಾದ ಮದ್ಯ ಕಂಪನಿ ರಿವರ್ಟ್ ಬ್ರೂವರಿ ಬಿಯರ್ ಬಾಟಲಿಯಲ್ಲಿ ಮಹಾತ್ಮಗಾಂಧಿ ಫೋಟೋ ಬಳಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿದೆ. ಕೇರಳ ಮೂಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಪ್ರತಿಷ್ಠಾನಕ್ಕೆ ಕಳುಹಿಸಿದ ಇ-ಮೇಲ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಬೂವರಿ, 'ಈ ಚಿತ್ರದಿಂದ ಯಾರನ್ನೂ ನೋಯಿಸುವ ಉದ್ದೇಶವಿರ ಲಿಲ್ಲ. ಬ್ಯಾಂಡ್‌ನ ಉತ್ಪಾದನೆಯನ್ನು ವರ್ಷದ ಹಿಂದೆಯೇ ನಿಲ್ಲಿಸಲಾಗಿತ್ತು. ಉಳಿದಿರುವ ಸ್ಟಾಕ್‌ಗಳನ್ನು ಹಿಂಪಡೆಯುತ್ತೇವೆ ಎಂದಿದೆ.
ಮಾಧವಿ ನಿವೃತ್ತಿ: ತುಹಿನ್ ಪಾಂಡೆ ಸೆಬಿ ಅಧ್ಯಕ್ಷ
ನವದೆಹಲಿ: ಹಾಲಿ ಹಣಕಾಸು ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರನ್ನು ಮಾರುಕಟ್ಟೆ ನಿಯಂ ತ್ರಕ 'ಸೆಬಿ'ಯ ಹೊಸ ಅಧ್ಯಕ್ಷರ ನ್ನಾಗಿ ನೇಮಿಸಲಾಗಿದೆ. ಅವರು ಒಡಿಶಾ ಕೇಡರ್‌ನ 1987ರ ಬ್ಯಾಚ್ ಅಧಿಕಾರಿ. ಅದಾನಿ ಷೇರು ಹಗರಣದಲ್ಲಿ ಸಿಲುಕಿದ್ದ ಹಾಲಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ 3 ವರ್ಷಗಳ ಅಧಿಕಾರಾವಧಿ ಫೆಬ್ರವರಿ 28ರಂದು ಕೊನೆಗೊಳ್ಳಲಿದ್ದು, ಅವರ ಸ್ಥಾನವನ್ನು ಪಾಂಡೆ ವಹಿಸಿಕೊಳ್ಳಲಿದ್ದಾರೆ.
ಆಸ್ಕರ್ ವಿಜೇತ ನಟ ಜೀನ್ ದಂಪತಿ ನಿಗೂಢ ಸಾವು
ಮೆಕ್ಸಿಕೊ: ಆಸ್ಕರ್‌ಪ್ರಶಸ್ತಿ ವಿಜೇತನಟ ಜೀನ್ ಹ್ಯಾಕ್‌ಮನ್ ಮತ್ತು ಅವರ ಪತ್ನಿ ಬುಧ ವಾರ ನ್ಯೂ ಮೆಕ್ಸಿಕೋದ ರೀತಿ ಶವವಾಗಿ ಪತ್ತೆ ಯಾಗಿ ದ್ದಾರೆ. ಸಾಕು ನಾಯಿ ಕೂಡ ಸತ್ತಿದೆ. ಕಾರ್ಬನ್ ಮೊನಾಕ್ಸೆಡ್ ಸೇವನೆಯೇ ಸಾವಿಗೆ ಕಾರಣ ಎನ್ನಲಾಗಿದೆ. 95 ವರ್ಷದ ಜೀನ್ 2 ಬಾರಿ ಆಸ್ಕರ್‌ಪ್ರಶಸ್ತಿ ಪಡೆದಿದ್ದರು.
ಬಿಹಾರ ಅನಾಗರಿಕ ರಾಜ್ಯ ಎಂದ ಶಿಕ್ಷಕಿ ಸಸ್ಪೆಂಡ್
ಪಟನಾ: 'ನನ್ನನ್ನು ಡಾರ್ಜಿಲಿಂಗ್, ಬಂಗಾಳದ ಯಾವುದೆ ಭಾಗ ಅಥವಾ ದಕ್ಷಿಣ ರಾಜ್ಯಗಳ ಯಾವುದೇ ಭಾಗಕ್ಕೆ ಹಾಕಿದರೂ ಕೆಲಸ ಮಾಡಲು ಸಿದ್ಧಳಿದ್ದೆ. ಆದರೆ ಅತ್ಯಂತ ಕೆಟ್ಟ ರಾಜ್ಯವಾದ ಬಿಹಾರಕ್ಕೆ ನನ್ನನ್ನು ಕೆಲಸಕ್ಕೆ ನಿಯೋಜಿಸಲಾಗಿದೆ. ಬಿಹಾರದಿಂದಲೇ ಇಂದು ದೇಶ ಅಭಿವೃದ್ಧಿ ಹೊಂದಿಲ್ಲ ಎಂದು ಜೆಹಾನಾಬಾದ್ ಕೇಂದ್ರೀಯ ವಿದ್ಯಾಲಯ ಶಿಕ್ಷಕಿ ದೀಪಾಲಿ ಸಾಹ್ ವಿಡಿಯೋ ಮಾಡಿದ್ದಾಳೆ. ಅದು ವೈರಲ್ ಆದ ಬೆನ್ನಲ್ಲೇ ಆಕೆಯನ್ನು ಸಸ್ಪೆಂಡ್ ಮಾಡಲಾಗಿದೆ. 'ಬಿಹಾರ ಅತ್ಯಂತ ಕೆಟ್ಟ**** ಪ್ರದೇಶ' ಎಂದು ಅವಾಚ್ಯ ಶಬ್ದ ಬಳಸಿರುವ ಆಕೆ, 'ಯಾವಾಗ ಬಿಹಾರವನ್ನು ದೇಶದಿಂದ ಹೊರದಬ್ಬುತ್ತಾರೋ ಅಂದು ದೇಶ ಅಭಿವೃದ್ಧಿ ಕಾಣಲಿದೆ. ಬಿಹಾರದ ಜನರಿಗೆ ನಾಗರಿಕ ಪ್ರಜ್ಞೆ ಇಲ್ಲ. ಅವರು ರೈಲ್ವೆಯನ್ನು ಹಾಳು ಮಾಡಿದ್ದಾರೆ' ಎಂದಿದ್ದಾಳೆ.
ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧ ತನಿಖೆಗೆ ಪಿಎಸಿ ನಿರ್ಧಾರ?
ಅಮೆರಿಕದಲ್ಲಿ ಅಪಘಾತ: ಕೋಮಾಗೆ ಭಾರತೀಯ ವಿದ್ಯಾರ್ಥಿನಿ
ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಫೆ.14 ರಂದು ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಾರಾಷ್ಟ್ರದ ಸತಾರಾ ಮೂಲದ ವಿದ್ಯಾರ್ಥಿನಿ ನೀಲಂ ಶಿಂಧೆ (35) ಕೋಮಾಗೆ ಜಾರಿದ್ದಾರೆ. ಇದರ ಬೆನ್ನಲ್ಲೇ ಅವರ ತಂದೆಗೆ ವೀಸಾ ನೀಡಲು ಮೊದಲು ಅಮೆರಿಕ ಸರ್ಕಾರ ಮೀನಾ ಮೇಷ ಎಣಿಸಿತ್ತು. ಆದರೆ ಭಾರತ ಸರ್ಕಾರದ ಕೋರಿಕೆ ಮೇರೆಗೆ ತುರ್ತು ವೀಸಾಕ್ಕಾಗಿ ಅಮೆರಿಕ ಶುಕ್ರವಾರ ಬೆಳಗ್ಗೆ 9ಕ್ಕೆ ಸಂದರ್ಶನಕ್ಕೆ ಅನುಮತಿಸಿದೆ. ನೀಲಂಗೆ ಕಾರು ಡಿಕ್ಕಿ ಹೊಡೆದು ಕೈ ಕಾಲು ಮೂಳೆ ಮುರಿದು ತಲೆಗೆ ಏಟಾಗಿದೆ. ಕಾರು ಚಾಲಕ ಲಾರೆನ್ಸ್ ಗ್ಯಾ ರೋನನ್ನು ಬಂಧಿಸಲಾಗಿದೆ.
ಛತ್ತೀಸ್‌ಗಢದಲ್ಲಿ ಒಂದೇ ದಿನ 22 ನಕ್ಸಲರ ಬಂಧನ
ಬಿಜಾಪುರ/ಸುಕ್ಖಾ: ಛತ್ತೀಸ್‌ಗಢದದಲ್ಲಿ ಗುರುವಾರ ನಕ್ಸಲ್ ನಿಗ್ರಹ ಗ್ರಹ ಪಡೆಗಳು ಕಾರ್ಯಾಚರಣೆ ನಡೆಸಿದ್ದು 22 ನಕ್ಸಲರನ್ನು ಬಂಧಿಸಿವೆ. ಇದರಲ್ಲಿ 18 ನಕ್ಸಲರು ಬಿಜಾಪುರ ಜಿಲ್ಲೆ ಹಾಗೂ 4 ಜನ ಸುಕ್ಕಾ ಜಿಲ್ಲೆಯಲ್ಲಿ ಸೆರೆ ಸಿಕ್ಕಿದ್ದಾರೆ.
ಸ್ಟಾಕ್ ಮಾರ್ಕೆಟ್‌ನ 'ಶೀ ಊಲ್ಫ್' ಅಸ್ಮಿತಾ ಪಟೇಲ್‌ನನ್ನು ಸೆಬಿ ಬ್ಯಾನ್ ಮಾಡಿದ್ದೇಕೆ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.