ಎಲ್ಲ ರೇಟೂ ಗಗನಕ್ಕೇರಿದೆ, ಈ ವರ್ಷವಾದ್ರೂ ನಿಮ್ಮ ಸಂಬಳ ಹೆಚ್ಚುತ್ತಾ?

Published : Feb 28, 2025, 11:56 AM ISTUpdated : Feb 28, 2025, 12:29 PM IST
ಎಲ್ಲ ರೇಟೂ ಗಗನಕ್ಕೇರಿದೆ,  ಈ ವರ್ಷವಾದ್ರೂ ನಿಮ್ಮ ಸಂಬಳ ಹೆಚ್ಚುತ್ತಾ?

ಸಾರಾಂಶ

2025ರಲ್ಲಿ ಭಾರತದ ಉದ್ಯೋಗಿಗಳ ಸರಾಸರಿ ವೇತನ ಶೇ.9.4ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ, ಇದು 2024ಕ್ಕಿಂತ ಕಡಿಮೆ. ಇ-ಕಾಮರ್ಸ್ ವಲಯದಲ್ಲಿ ಅತಿ ಹೆಚ್ಚು, ಶೇ.10.5ರಷ್ಟು ಏರಿಕೆಯಾಗಬಹುದು. ಹಣಕಾಸು ಸೇವೆ, ಜಿಸಿಸಿ, ಐಟಿ ವಲಯಗಳಲ್ಲೂ ವೇತನ ಹೆಚ್ಚಳವಾಗಲಿದೆ. ಉದ್ಯೋಗ ತೊರೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಸಿಇಒಗಳ ವೇತನದಲ್ಲಿ ಗಣನೀಯ ಏರಿಕೆಯಾಗಿದೆ. ವೇತನ ನಿರ್ಧಾರಕ್ಕೆ ಹಲವು ಕಂಪನಿಗಳು ಕೃತಕ ಬುದ್ಧಿಮತ್ತೆ ಬಳಸುತ್ತಿವೆ.

ಈ ಬಾರಿಯಾದ್ರೂ ನಮ್ಮ ಸಂಬಳ (Salary) ಹೆಚ್ಚಾಗುತ್ತಾ? ಪ್ರತಿಯೊಬ್ಬ ಉದ್ಯೋಗಿಗೆ ಸಂಬಳ ಮುಖ್ಯ. ಪ್ರತಿ ವರ್ಷ ಮಾರ್ಚ್ ಬರ್ತಿದ್ದಂತೆ ಸಂಬಳ ಹೆಚ್ಚಾಗ್ಬಹುದಾ ಎಂಬ ಆಸೆಗಣ್ಣಿನಲ್ಲಿ ನೋಡ್ತಿರುತ್ತಾರೆ. ನೀವೂ ಈ ಸಾಲಿನಲ್ಲಿದ್ರೆ, ಈ ಬಾರಿ ಯಾವೆಲ್ಲ ಕ್ಷೇತ್ರದಲ್ಲಿ ಸಂಬಳ ಏರಿಕೆ ಸಂಭವ ಇದೆ, ನಿಮಗೆ ಸಂಬಳ ಎಷ್ಟು ಹೆಚ್ಚಾಗ್ಬಹುದು ಎಂಬುದನ್ನು ಚೆಕ್ ಮಾಡ್ಕೊಳ್ಳಿ. 

ಉದ್ಯೋಗಿ (employee) ಗಳ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಹತ್ವದ ವರದಿಯೊಂದು ಹೊರಗೆ ಬಿದ್ದಿದೆ. ಈ ವರದಿಯಲ್ಲಿ ಉದ್ಯೋಗಿಗಳಿಗೆ ನಿರಾಸೆಯಾಗಿದೆ. ಈ ಬಾರಿ ಅಂದ್ರೆ 2025ರಲ್ಲಿ ಉದ್ಯೋಗಿಗಳ ಸರಾಸರಿ ವೇತನ ಶೇಕಡಾ 9.4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  2024ಕ್ಕೆ ಹೋಲಿಸಿದ್ರೆ ಇದು ಕಡಿಮೆ. 2024ರಲ್ಲಿ ಸರಾಸರಿ ವೇತನ ಶೇಕಡಾ 9.6ರಷ್ಟು ಹೆಚ್ಚಳವಾಗಿತ್ತು. ಮುಂಬರುವ ವರ್ಷಗಳಲ್ಲಿ  ಕಂಪನಿಗಳು ಉದ್ಯೋಗಿಗಳ ಸಂಬಳ ಮತ್ತು ಸವಲತ್ತುಗಳನ್ನು  ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಧರಿಸುತ್ತವೆ ಎಂದು ಇವೈ ತನ್ನ ಭವಿಷ್ಯದ ವೇತನ ವರದಿಯಲ್ಲಿ ಹೇಳಿದೆ.

ವಿಮಾ ಪಾವತಿದಾರರಿಗೆ ಖುಷಿ ಸುದ್ದಿ, ನಾಳೆ ಇಳಿಕೆಯಾಗುತ್ತಾ ಸಿಲಿಂಡರ್ ಬೆಲೆ?

ಯಾವ ಕ್ಷೇತ್ರದಲ್ಲಿ ಎಷ್ಟು ವೇತನ ಹೆಚ್ಚಳ ? : 

ವರದಿ ಪ್ರಕಾರ, ಇ ಕಾಮರ್ಸ್ ವಲಯವು ಈ ವರ್ಷ ಶೇಕಡಾ 10.5 ರಷ್ಟು ವೇತನ ಹೆಚ್ಚಿಸುವ ಸಾಧ್ಯತೆ ಇದೆ. ಇದು ಎಲ್ಲ ಕ್ಷೇತ್ರಕ್ಕಿಂತ ಹೆಚ್ಚಿನ ವೇತನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವೇತನ ಏರಿಕೆಗೆ ಮುಖ್ಯ ಕಾರಣ ಆನ್‌ಲೈನ್ ಬ್ಯುಸಿನೆಸ್ ನಲ್ಲಾದ ಬೆಳವಣಿಗೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಹಣಕಾಸು ಸೇವಾ ವಲಯವಿದೆ. ಹಣಕಾಸು ಸೇವಾ ವಲಯದಲ್ಲಿ ಶೇಕಡಾ 10.3 ರಷ್ಟು ವೇತನ ಏರಿಕೆಯಾಗುವ ನಿರೀಕ್ಷೆ ಇದೆ.

ಗ್ಲೋಬಲ್ ಕೆಪೆಬೆಲಿಟಿ ಸೆಂಟರ್ (GCC) ನಲ್ಲಿ ಶೇಕಡಾ 10.2 ರಷ್ಟು ವೇತನ ಹೆಚ್ಚಳ ಸಾಧ್ಯತೆ ಇದೆ. ಐಟಿ ವಲಯದ ವೇತನದಲ್ಲಿ ಶೇಕಡಾ 9.6ರಷ್ಟು ಬೆಳವಣಿಕೆಯನ್ನು ನಿರೀಕ್ಷಿಸಲಾಗಿದೆ. 2024ರಲ್ಲಿ ಶೇಕಡಾ 9.8ರಷ್ಟಿತ್ತು. ಐಟಿ ಸಕ್ರಿಯಗೊಳಿಸಿದ ಸೇವೆಗಳ (ಐಟಿಇಎಸ್) ವಲಯದಲ್ಲಿ ವೇತನ ಹೆಚ್ಚಳ ಈ ಬಾರಿ ಇಳಿದಿದೆ. 2024 ಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಈ ಕ್ಷೇತ್ರದ ಉದ್ಯೋಗಿಗಳಿಗೆ ಕಡಿಮೆ ಸಂಬಳ ಏರಿಕೆಯಾಗಲಿದೆ. 2024 ರಲ್ಲಿ ಸಂಬಳ ಹೆಚ್ಚಳ ಶೇಕಡಾ 9.2ರಷ್ಟಿತ್ತು. ಆದ್ರೆ ಈ ಬಾರಿ ಶೇಕಡಾ 9ಕ್ಕೆ ಇಳಿದಿದೆ.  ಆಟೋಮೊಬೈಲ್, ಫಾರ್ಮಾ ಮತ್ತು ತಯಾರಿಕಾ ವಲಯಗಳ ವೇತನದಲ್ಲಿ ಹೆಚ್ಚಿನ ಬದಲಾವಣೆಯಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.  

ನೌಕರಿ ಬಿಡುವವರ ಸಂಖ್ಯೆಯಲ್ಲಿ ಬದಲಾವಣೆ : ಭಾರತದಲ್ಲಿ  2023 ರಲ್ಲಿ ಶೇಕಡಾ 18.3 ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಬಿಟ್ಟಿದ್ದರು. ಈ ದರ 2024 ರಲ್ಲಿ ಇಳಿಕೆ ಕಂಡಿತ್ತು. 2024ರಲ್ಲಿ ಇದ್ರ ಸಂಖ್ಯೆ ಶೇಕಡಾ 17.5ರಷ್ಟು ಇಳಿದಿತ್ತು. ಈ ವರ್ಷ ಇದು ಮತ್ತಷ್ಟು ಇಳಿಯುವ ನಿರೀಕ್ಷೆ ಇದೆ. ಜನರು ಸ್ಥಿರ ಉದ್ಯೋಗಕ್ಕೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ. 

ಪತಿಗಾಗಿ ಗೂಗಲ್ ಜಾಬ್ ಬಿಟ್ಟವಳನ್ನೇ ಗಂಡ ದೂರ ಮಾಡ್ದ, ಧೈರ್ಯಗೆಡದ ಮಹಿಳೆ ಸಂಬಳ ಈಗ

ಸಿಇಒ ಸಂಬಳ ಅತಿ ಹೆಚ್ಚು ಏರಿಕೆ : ವರದಿ ಪ್ರಕಾರ, ಪ್ರಮುಖ ಕಂಪನಿಗಳ ಸಿಇಒ ಸಂಬಳ ಅತಿ ಹೆಚ್ಚಾಗಿದೆ. 2023 ಮತ್ತು 2024 ರ ನಡುವೆ ಭಾರತದ ಅಗ್ರ 50 ನಿಫ್ಟಿ (NIFTY) ಸೂಚ್ಯಂಕ ಕಂಪನಿಗಳು ತಮ್ಮ ಸಿಇಒಗಳ ಸಂಬಳವನ್ನು ಶೇಕಡಾ 1820ರಷ್ಟು ಹೆಚ್ಚಿಸಿವೆ. ಹಿರಿಯ ಅಧಿಕಾರಿಗಳಿಗೆ ತ್ವರಿತವಾಗಿ ವೇತನ ಹೆಚ್ಚಾಗ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಅನೇಕ ಕಂಪನಿಗಳು ತಮ್ಮ ವೇತನ ಹೆಚ್ಚಳಕ್ಕೆ ಎಐ ಬಳಕೆ ಮಾಡ್ತಿವೆ, 2028ರ ವೇಳೆಗೆ ಎಲ್ಲ ಕಂಪನಿಗಳೂ ಎಐ ಬಳಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!