Dollar Vs Rupee:ಡಾಲರ್ ಎದುರು ಚೇತರಿಸಿದ ರೂಪಾಯಿ; ಎರಡು ತಿಂಗಳಲ್ಲೇ ಗರಿಷ್ಠ ಗಳಿಕೆ

Published : Jul 29, 2022, 11:08 AM IST
Dollar Vs Rupee:ಡಾಲರ್ ಎದುರು ಚೇತರಿಸಿದ ರೂಪಾಯಿ; ಎರಡು ತಿಂಗಳಲ್ಲೇ ಗರಿಷ್ಠ ಗಳಿಕೆ

ಸಾರಾಂಶ

*ಡಾಲರ್ ಎದುರು 14 ಪೈಸೆ ಗಳಿಕೆ ದಾಖಲಿಸಿದ ರೂಪಾಯಿ *ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾರುಕಟ್ಟೆ ಮೇಲೆ ಪರಿಣಾಮ ಬೀರಿಲ್ಲ *ಮುಂದಿನ ವಾರ ಆರ್ ಬಿಐ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆ   

ಮುಂಬೈ (ಜು.29): ಈ ವರ್ಷದ ಪ್ರಾರಂಭದಿಂದ ಡಾಲರ್ ಎದುರು ಕುಸಿತ ದಾಖಲಿಸುತ್ತ ಬಂದಿರುವ ರೂಪಾಯಿ ಮೌಲ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 14 ಪೈಸೆಗಳಷ್ಟು ಚೇತರಿಕೆ ದಾಖಲಿಸಿದೆ. ಇದು ಕಳೆದ ಎರಡು ತಿಂಗಳಲ್ಲೇ ಡಾಲರ್ ಎದುರು ರೂಪಾಯಿಯ ಅತ್ಯುತ್ತಮ ಗಳಿಕೆಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು  75 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದ್ದರೂ ಅದರ ಮುಖ್ಯಸ್ಥ ಜೆರೋಮೆ ಪೊವೆಲ್ ಆಶಾದಾಯಕ ಹೇಳಿಕೆಯ ಬಳಿಕ ಮಾರುಕಟ್ಟೆಗಳಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದೆ. ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿದರೂ ಕಠಿಣ ನೀತಿಗಳನ್ನು ಘೋಷಿಸದ ಹಿನ್ನೆಲೆಯಲ್ಲಿ ಗುರುವಾರ (ಜು.28) ದಿನದ ಅಂತ್ಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ  79.76ರಲ್ಲಿ ಮುಕ್ತಾಯಗೊಂಡಿತ್ತು. ಇದಕ್ಕೂ ಹಿಂದಿನ ದಿನದ ಅಂತ್ಯದಲ್ಲಿ ರೂಪಾಯಿ ಮೌಲ್ಯ 79.90 ಇತ್ತು. ಅಂದರೆ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 14 ಪೈಸೆ ಹೆಚ್ಚಳವಾಗಿದೆ. ಇದು ಮೇ  20ರ ಬಳಿಕದ ಅತ್ಯಂತ ವೇಗವಾದ ಚೇತರಿಕೆಯಾಗಿದೆ. ಗುರುವಾರ ತಡ ಸಂಜೆ ರೂಪಾಯಿ 79.70ಕ್ಕಿಂತ ಕೆಳ ಮಟ್ಟದಲ್ಲಿ ಟ್ರೇಡ್ ಆಗಿತ್ತು.

ಬಡ್ಡಿದರ ಹೆಚ್ಚಿಸಿದ ಫೆಡರಲ್ ಬ್ಯಾಂಕ್
ಅಮೆರಿಕದ ಫೆಡರಲ್ ಬ್ಯಾಂಕ್ (Federal Bank) ನಿರೀಕ್ಷೆಯಂತೆ ಬಡ್ಡಿದರವನ್ನು (Interest rate) 75 ಬೇಸಿಸ್ ಪಾಯಿಂಟ್ ಗಳಷ್ಟು (Basis points) ಹೆಚ್ಚಳ ಮಾಡಿದೆ. ಒಂದು ತಿಂಗಳ ಅವಧಿಯಲ್ಲಿ ಬಡ್ಡಿದರ (Interest rate) ಹೆಚ್ಚಳವಾಗುತ್ತಿರೋದು ಇದು ಎರಡನೇ ಬಾರಿ. ಕಳೆದ ತಿಂಗಳು ಕೂಡ ಬಡ್ಡಿದರ ಹೆಚ್ಚಳ ಮಾಡಲಾಗಿತ್ತು. ಆದರೆ, ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿರೋದು ಮುಂದಿನ ವಾರ ನಡೆಯಲಿರುವ ಆರ್ ಬಿಐ ಹಣಕಾಸು ನೀತಿ ಸಮಿತಿಯ ನಿರ್ಧಾರದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎನ್ನೋದು ತಜ್ಞರ ಅಭಿಪ್ರಾಯವಾಗಿದೆ.

5ಜಿ ಸ್ಪೆಕ್ಟ್ರಮ್ ಗೆ ಭಾರೀ ಬೇಡಿಕೆ; ಎರಡನೇ ದಿನ 1.49 ಲಕ್ಷ ಕೋಟಿ ರೂ. ಬಿಡ್ ಸಲ್ಲಿಕೆ

ಮುಂದಿನ ವಾರ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆ
ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹಣಕಾಸು ನೀತಿ ಸಮಿತಿ ಸಭೆ (MPC) ಮುಂದಿನ ವಾರ (ಆ.3-5) ನಡೆಯಲಿದೆ. ಈ ಸಭೆಯಲ್ಲಿ ಭಾರತದಲ್ಲಿ ಬಡ್ಡಿದರ (Interest rate) ಹೆಚ್ಚಳ ಮಾಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳಲಾಗುತ್ತದೆ. ಭಾರತದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರ ಜೂನ್ ನಲ್ಲಿ ಶೇ.7.01ರಷ್ಟಿತ್ತು. ಆದರೆ, ಕಳೆದ ತಿಂಗಳುಗಳಿಗೆ ಹೋಲಿಸಿದ್ರೆ ಈ ಬಾರಿ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದೆ. ಏಪ್ರಿಲ್ ನಲ್ಲಿ ಹಣದುಬ್ಬರ ಶೇ.7.79ರಷ್ಟಿದ್ದು, ಮೇನಲ್ಲಿ ಶೇ.7.04ರಷ್ಟಿತ್ತು. ಆದರೆ, ಇದು ಆರ್ ಬಿಐ ಸಹನ ಮಿತಿ ಶೇ.2-6ಕ್ಕಿಂತ ಹೆಚ್ಚಿದೆ. ಇದು ಬಡ್ಡಿ ದರ ಪರಿಶೀಲನೆಗೆ ನಡೆಯುತ್ತಿರುವ ಹಣಕಾಸು ನೀತಿ ಸಮಿತಿಯ ಈ ವರ್ಷದ ನಾಲ್ಕನೇ ಸಭೆಯಾಗಿದೆ.

ಹಣದುಬ್ಬರ, ಆರ್ಥಿಕ ಹಿಂಜರಿತ ಭೀತಿಗೆ ನಲುಗಿದ ಮೆಟಾ: ಆದಾಯ ಕುಸಿತ, ಷೇರುಗಳು ಅಲ್ಲೋಲ ಕಲ್ಲೋಲ

ಎಂಪಿಸಿ ದೈಮಾಸಿಕ ಸಭೆ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ. ಆದ್ರೆ ಈ ಬಾರಿ ಮೇನಲ್ಲಿ ಕೂಡ ಎಂಪಿಸಿ ತುರ್ತುಸಭೆ ನಡೆಸಿ, ಹಣದುಬ್ಬರ ನಿಯಂತ್ರಣಕ್ಕೆ ರೆಪೋ ದರವನ್ನು (Repo rate) 40 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು.ಜೂನ್ ನಲ್ಲಿ 50 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಲಾಗಿದೆ. ಅಂದ್ರೆ ಈ ತನಕ ರೆಪೋ ದರವನ್ನು ಒಟ್ಟು  90 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಲಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌