ಡಾಲರ್‌ ವಿರುದ್ಧ ರುಪಾಯಿ ಮೌಲ್ಯ 83.13ಕ್ಕೆ ಕುಸಿತ: ಇದು ಸಾರ್ವಕಾಲಿಕ ಕನಿಷ್ಠ

Published : Aug 22, 2023, 11:40 AM ISTUpdated : Aug 22, 2023, 11:55 AM IST
ಡಾಲರ್‌ ವಿರುದ್ಧ ರುಪಾಯಿ ಮೌಲ್ಯ 83.13ಕ್ಕೆ ಕುಸಿತ: ಇದು ಸಾರ್ವಕಾಲಿಕ ಕನಿಷ್ಠ

ಸಾರಾಂಶ

ಡಾಲರ್‌ ಎದುರು ರುಪಾಯಿ ಮೌಲ್ಯ ಸೋಮವಾರ 3 ಪೈಸೆ ಕುಸಿದಿದ್ದು, 83.13 ರು.ಗೆ ಇಳಿದಿದೆ. ಇದು ರುಪಾಯಿ ಮೌಲ್ಯದ ಸಾರ್ವಕಾಲಿಕ ಕನಿಷ್ಠವಾಗಿದೆ.

ನವದೆಹಲಿ: ಡಾಲರ್‌ ಎದುರು ರುಪಾಯಿ ಮೌಲ್ಯ ಸೋಮವಾರ 3 ಪೈಸೆ ಕುಸಿದಿದ್ದು, 83.13 ರು.ಗೆ ಇಳಿದಿದೆ. ಇದು ರುಪಾಯಿ ಮೌಲ್ಯದ ಸಾರ್ವಕಾಲಿಕ ಕನಿಷ್ಠವಾಗಿದೆ. ಬೆಳಗ್ಗೆ ರುಪಾಯಿ ಮೌಲ್ಯ 83.10 ಇತ್ತು. ನಂತರ 83.05 ರು.ಗೆ ಸುಧಾರಿಸಿ ಒಂದು ಹಂತದಲ್ಲಿ 83.16 ರು.ಗೆ ಕುಸಿದಿತ್ತು. ಕೊನೆಗೆ ಅಲ್ಪ ಸುಧಾರಿಸಿ 83.13 ರು.ಗೆ ದಿನಾಂತ್ಯಗೊಳಿಸಿತು. ಅಂತಾರಾಷ್ಟ್ರೀಯ ಪೇಟೆಯಲ್ಲಿ ಕಚ್ಚಾತೈಲ ಬೆಲೆ ಬಾರಿ ಏರಿಕೆ ಕಂಡಿದ್ದು ಹಾಗೂ ವಿದೇಶಿ ಹೂಡಿಕೆದಾರರು ತಮ್ಮ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರಲು ಮುಂದಾಗಿದ್ದು, ರುಪಾಯಿ ಮತ್ತಷ್ಟು ಅಪಮೌಲ್ಯಗೊಳ್ಳಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ವಿಮಾನದ ಗಗನಸಖಿಗೆ ನಿನ್ನ ರೇಟ್‌ ಎಷ್ಟು? ಡಾಲರ್‌ ಕೊಟ್ರೆ ಬರ್ತಿಯಾ ಎಂದವನಿಗೆ ಸಿಕ್ಕಿದ್ದೇನು ಗೊತ್ತಾ?

ರೂಪಾಯಿಯ ಮೌಲ್ಯವು ಡಾಲರ್  ಮುಂದೆ ದಿನೇ ದಿನೇ ಕುಸಿಯುತ್ತಿದೆ. ಇದು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗೆ ಕಾರಣವಾಗುತ್ತದೆ. ಇದರಿಂದ ವಿದೇಶಿ ವಸ್ತುಗಳ ಆಮದಿಗೆ ನಾವು ಹೆಚ್ಚಿನ ಹಣ ವೆಚ್ಚ ಮಾಡಬೇಕಾಗುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ