ಅಲ್ಲಿ 8 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನ: ಇಲ್ಲಿ ಬೆಲೆ ಏರಿಕೆಗೆ ಆಮಂತ್ರಣ!

Published : Sep 24, 2019, 07:58 PM IST
ಅಲ್ಲಿ 8 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನ: ಇಲ್ಲಿ ಬೆಲೆ ಏರಿಕೆಗೆ ಆಮಂತ್ರಣ!

ಸಾರಾಂಶ

ಬೆಂಗಳೂರಿನಲ್ಲಿ 60 ರೂ. ತಲುಪಿದ ಈರುಳ್ಳಿ ಬೆಲೆ| ಈರಳ್ಳಿ ಬೆಲೆ ಏರಿಕೆಗೆ ಕೊನೆಗೂ ಕಾರಣ ಪತ್ತೆ| ಪಾಟ್ನಾದಲ್ಲಿ 8 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನ| ಗೋಡೌನ್’ನಲ್ಲಿದ್ದ 328 ಈರುಳ್ಳಿ ಹೊತ್ತೊಯ್ದ ಖದೀಮರು|

ಪಾಟ್ನಾ(ಸೆ.24): ಬೆಂಗಳೂರಿನಲ್ಲಿ ಏಕಾಏಕಿ ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇದಕ್ಕೆ ಕಾರಣ ಇದೀಗ ಬಯಲಾಗಿದೆ.

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳ್ಳತನವಾಗಿದ್ದು, ದೇಶಾದಯಂತ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಕೆಜಿ ಈರುಳ್ಳಿ ಬೆಲೆ 60 ರೂ. ಇದ್ದು, ದೇಶದ ಇತರೆಡೆಯೂ ಬೆಲೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಏರಿಕೆಗೆ ಸರಬರಾಜು ಕೊರತೆ ಪ್ರಮುಖ ಕಾರಣವಾಗಿದ್ದರೂ , ಪಾಟ್ನಾದಲ್ಲಿ ನಡೆದ ಈರುಳ್ಳಿ ಕಳ್ಳತನ ಕೂಡ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

ಪಾಟ್ನಾದಲ್ಲಿರುವ ಈರುಳ್ಳಿ ಗೋಡೌನ್’ಗೆ ನುಗ್ಗಿದ ಖದೀಮರು ಸುಮಾರು 8 ಲಕ್ಷ ರೂ. ಮೌಲ್ಯದ 328 ಈರುಳ್ಳಿ ಚೀಲಗಳನ್ನು ಹೊತ್ತೊಯ್ದಿದ್ದಾರೆ ಎಂದು ಗೋಡೌನ್ ಮ್ಯಾನೇಜರ್ ಧೀರಜ್ ಕುಮಾರ್ ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ನೌಕರರಿಗೆ 8ನೇ ವೇತನ ಆಯೋಗ ಬಂಪರ್, ಜ.1ರಿಂದ ಪಿಯೋನ್‌ಗೆ 45000, ಸೆಕ್ರೆಟರಿಗೆ 5 ಲಕ್ಷ ರೂ ಸ್ಯಾಲರಿ
2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ? ಹೊಸವರ್ಷದಂದು ಚಿನ್ನದಲ್ಲಿಚಿನ್ನದಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿದ್ರೆ ಮುಂದಿನ ವರ್ಷ ನಿಮ್ಮ ಕೈ ಸೇರುವ ಹಣವೆಷ್ಟು?