ವಿಶ್ವದ ಶ್ರೀಮಂತರ ಪೈಕಿ ಅದಾನಿ-ರೋಶ್ನಿ ನಾಡರ್ ದಾಖಲೆ , ಟಾಪ್ 10 ಪಟ್ಟಿಯಿಂದ ಅಂಬಾನಿ ಔಟ್

ಶ್ರೀಮಂತರ ಪೈಕಿ ಗೌತಮ್ ಅದಾನಿ ಹಾಗೂ ಹೆಚ್‌ಸಿಎಲ್‌ನ ರೋಶ್ನಿ ನಾಡರ್ ಆದಾಯ ಗಳಿಕೆಯಲ್ಲಿ ದಾಖಲೆ ಬರೆದಿದ್ದಾರೆ. ಆದರೆ ವಿಶ್ವದ ಟಾಪ್ 10 ಪಟ್ಟಿಯಿಂದ ಮುಕೇಶ್ ಅಂಬಾನಿ ಹೊರಬಿದ್ದಿದ್ದಾರೆ. ಹೊಸ ಶ್ರೀಮಂತರ ಪಟ್ಟಿಯಲ್ಲಿ ಯಾರಿದ್ದಾರೆ? 
 

Roshni nadar become fifth richest women in the world Ambani drop out from top 10 list

ನವದೆಹಲಿ(ಮಾ.28) ಕಳೆದೊಂದು ವರ್ಷದಿಂದ ಮಾರುಕಟ್ಟೆಯಲ್ಲಿ ಆಗಿರುವ ಏರಿಳಿತ, ಪ್ರತಿಕೂಲ ವಾತಾವರಣ ಸೇರಿದಂತೆ ಹಲವು ಕಾರಣಗಳಿಂದ ಶ್ರೀಮಂತರ ಆದಾಯ, ಷೇರು ಮಾರುಕಟ್ಟೆಯಲ್ಲಿ ಹಲವು ತಲ್ಲಣಗಳು ಆಗಿದೆ. ಇದರ ಪರಿಣಾಮ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ  ಕೆಲ ಬದಲಾವಣೆಗಳಾಗಿದೆ. ಇದೀಗ ಹುರನ್ ಗ್ಲೋಬರ್ ರಿಚ್ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ ಟಾಪ್ 10 ಪಟ್ಟಿಯಿಂದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹೊರಬಿದ್ದಿದ್ದಾರೆ.ವಿಶೇಷ ಅಂದರೆ ಗೌತಮ್ ಅದಾನಿ ಹಾಗೂ ಹೆಚ್‌ಸಿಎಲ್‌ನ ರೋಶ್ನಿ ನಾಡರ್ ದಾಖಲೆಯ ಆದಾಯ ಗಳಿಕೆ ಮೂಲಕ ಮೈಲಿಗಲ್ಲು ನಿರ್ಮಿಸಿದ್ದಾರೆ.

ವಿಶ್ವದ 5ನೇ ಶ್ರೀಮಂತ ಮಹಿಳೆ ರೋಶ್ನಿ ನಾಡರ್
ಹೆಚ್‌ಸಿಎಲ್ ಕಂಪನಿಯ ಶಿವ್ ನಾಡರ್ ಕುಟುಂಬ ಈ ಬಾರಿ ಶ್ರೀಮಂತರ ಪಟ್ಟಿಯಲ್ಲಿ ಹೊಸ ದಾಖಲೆ ಬರೆದಿದೆ. ಶಿವ ನಾಡರ್ ಇತ್ತೀಚೆಗೆ ಹೆಚ್‌ಸಿಎಲ್ ಕಂಪನಿ ಶೇಕಡಾ 47 ರಷ್ಟು ಪಾಲನ್ನು ಪುತ್ರಿ ರೋಶ್ನಿ ನಾಡರ್‌ಗೆ ವರ್ಗಾಯಿಸಿದ್ದರು. ಇದರ ಪರಿಣಾಮ ರೋಶ್ನಿ ನಾಡರ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.  ವಿಶೇಷ ಅಂದರೆ ರೋಶ್ನಿ ನಾಡರ್ ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ರೋಶ್ನಿ ನಾಡರ್ ಒಟ್ಟು ಆಸ್ತಿ 3.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.

Latest Videos

 

ವಿಶ್ವದ ಶ್ರೀಮಂತರ ಮಹಿಳೆಯರ ಟಾಪ್ 10 ಪಟ್ಟಿಯಲ್ಲಿ ಮೊದಲ ಭಾರತೀಯ
ರೋಶ್ನಿ ನಾಡರ್ ಹೆಚ್‌ಸಿಎಲ್ ಪಾಲು ಕೈಸೇರುತ್ತಿದ್ದಂತೆ ಸಂಚಲನ ಸೃಷ್ಟಿಸಿದ್ದಾರೆ. ವಿಶ್ವದ ಶ್ರೀಮಂತ ಮಹಿಳೆಯ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಮಹಿಳೆ ಶಿವ ನಾಡರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಅಂಬಾನಿ ಆದಾಯ ಗಳಿಗೆ
ಕಳೆದೊಂದು ವರ್ಷದಲ್ಲಿ ಬಹುತೇಕ ಭಾರತೀಯ ಶ್ರೀಮಂತರ ಆದಾಯ ಕುಸಿತ ಕಂಡಿದ್ದರೆ ಗೌತಮ್ ಅದಾನಿ ಆದಾಯ ಗಣನೀಯವಾಗಿ ಏರಿಕೆ ಕಂಡಿದೆ. ಅದಾನಿ ಒಟ್ಟು ಆಸ್ತಿಯಲ್ಲಿ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಆದಾಯದಲ್ಲಿ ಶೇಕಡಾ 13ರಷ್ಟು ಏರಿಕೆಯಾಗಿದೆ ಎಂದು ಹುರನ್ ಗ್ಲೋಬಲ್ ರಿಚ್ ಲಿಸ್ಟ್ ಪಟ್ಟಿಯಲ್ಲಿ ಹೇಳಿದೆ. ಅದಾನಿ ಒಟ್ಟು ಆಸ್ತಿ 8.4 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಭಾರತದ 2ನೇ ಅತೀ ಶ್ರೀಮಂತ ಉದ್ಯಮಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ನಂ.1
ವಿಶ್ವದ ಟಾಪ್ 10 ಪಟ್ಟಿಯಿಂದ ಮುಕೇಶ್ ಅಂಬಾನಿ ಹೊರಬಿದ್ದಿದ್ದಾರೆ. ರಿಲಯನ್ಸ್ ಗ್ರೂಪ್‌ನ ಎನರ್ಡಿ ಹಾಗೂ ರಿಟೇಲ್ ವ್ಯವಹಾರದಲ್ಲಿ ಆದ ನಷ್ಟದಿಂದ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಆದರೆ ಈಗಲೂ ಮುಕೇಶ್ ಅಂಬಾನಿ ಭಾರತ ಹಾಗೂ ಏಷ್ಯಾದ ನಂಬರ್ 1 ಶ್ರೀಮಂತ. ಮುಕೇಶ್ ಅಂಬಾನ ಒಟ್ಟು ಆಸ್ತಿ 8.6 ಲಕ್ಷ ಕೋಟಿ ರೂಪಾಯಿ.

ಭಾರತದ ಶ್ರೀಮಂತರು
ಮುಕೇಶ್ ಅಂಬಾನಿ: 8.6 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ಗೌತಮ್ ಅದಾನಿ : 8.4 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ರೋಶ್ನಿ ನಾಡರ್:3.5 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ದಿಲೀಪ್ ಸಾಂಘ್ವಿ: 2.5 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ಅಜೀಮ್ ಪ್ರೇಮ್‌ಜಿ:2.2 ಲಕ್ಷ ಕೋಟಿ ರೂಪಾಯಿ (ಸಂಪತ್ತು)
 

vuukle one pixel image
click me!