
ನವದೆಹಲಿ(ಆ.14): ತರಕಾರಿ ಮತ್ತು ಹಣ್ಣುಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ 4.17 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳಿದೆ.
ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ಆಧಾರದ ಮೇಲೆ, ಜೂನ್ ತಿಂಗಳಿನಲ್ಲಿ ಕೂಡ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ. ಹಣದುಬ್ಬರ ಅಂದಾಜು ಶೇ .5 ರಿಂದ ಶೇ 4.92 ಕ್ಕೆ ಇಳಿದಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (ಸಿಎಸ್ಒ) ಡೇಟಾದಲ್ಲಿ ವಿವರಿಸಲಾಗಿದೆ.
ಆದರೆ ಕಳೆದ ವರ್ಷದ ಜುಲೈ ಹಣದುಬ್ಬರಕ್ಕೆ ಹೋಲಿಸಿದರೆ ಈ ಬಾರಿ ಹಣದುಬ್ಬರ ಪ್ರಮಾಣ ಶೇ.2.36 ರಷ್ಟು ಹೆಚ್ಚಾಗಿದೆ. ಅಲ್ಲದೆ ಇದಕ್ಕೂ ಮುನ್ನ ಅಕ್ಟೋಬರ್ 2017 ರಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 3.58ರಷ್ಟಕ್ಕೆ ಇಳಿದು ದಾಖಲೆ ಬರೆದಿತ್ತು.
ಇನ್ನು ಜೂನ್ ತಿಂಗಳಿನಲ್ಲಿ ಶೇ. 7.8 ರಷ್ಟು ಇದ್ದ ತರಕಾರಿ ಹಣದುಬ್ಬರ ಈ ಬಾರಿ ಶೇ. 2.19 ರಷ್ಟು ಕುಸಿದಿದೆ ಎಂದು ಸಿಎಸ್ಒ ಅಂಕಿ ಅಂಶ ಬಹಿರಂಗಪಡಿಸಿದೆ. ಹಣ್ಣುಗಳ ಬೆಲೆ ಏರಿಕೆ ದರ ಶೇ 6.98 ಕ್ಕೆ ಕುಸಿದಿದ್ದರೆ ಮಾಂಸ ಮತ್ತು ಮೀನು ಮುಂತಾದ ಪ್ರೋಟೀನ್ ಸಮೃದ್ಧ ವಸ್ತುಗಳ ಹಣದುಬ್ಬರ, ಹಾಲಿನ ಬೆಲೆಯ ಮೇಲಿನ ಹಣದುಬ್ಬರ ಸಹ ಕುಸಿತವಾಗಿದೆ. ಇಂಧನ ಮತ್ತು ಶಕ್ತಿ ಹಣದುಬ್ಬರ ಕಳೆದ ಬಾರಿಗಿಂತ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಶೇ.7.14 ಇದ್ದ ಹಣದುಬ್ಬರ ಪ್ರಮಾಣ ಈ ಬಾರಿ ಶೇ. 7.96ಕ್ಕೆ ತಲುಪಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.