14, 978 ಕೋಟಿ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟ ಗೌತಮ್‌ ಅದಾನಿ ಕಂಪನಿ!

Published : Nov 02, 2023, 08:07 PM IST
14, 978 ಕೋಟಿ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟ ಗೌತಮ್‌ ಅದಾನಿ ಕಂಪನಿ!

ಸಾರಾಂಶ

ಅದಾನಿ ಗ್ರೂಪ್ ಸೋಲಾರ್ ಮತ್ತು ಪವನ ಯೋಜನೆಗಳಿಗೆ ಖರ್ಚು ಮಾಡಲು ಸಾಲವನ್ನು ಬಳಸಲು ಯೋಜನೆ ರೂಪಿಸಿದೆ.  

ಮುಂಬೈ (ನ.2): ಗೌತಮ್ ಅದಾನಿ ಅವರ ಅದಾನಿ ಗ್ರೂಪ್‌ನ ಮಾಲೀಕತ್ವದಲ್ಲಿರುವ ಅದಾನಿ ಗ್ರೀನ್ ಎನರ್ಜಿ 1.8 ಶತಕೋಟಿ ಡಾಲರ್ (ಸುಮಾರು ₹ 14,978 ಕೋಟಿ) ಸಾಲ ಪಡೆಯಲು ವಿದೇಶದಲ್ಲಿರುವ ಸಾಲದಾತರ ಗುಂಪಿನೊಂದಿಗೆ ಮಾತುಕತೆ ನಡೆಸುತ್ತಿದೆ. ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಅದಾನಿ ಗ್ರೀನ್‌ ಎನರ್ಜಿ ಕಾರ್ಯಾಚರಣೆ ಮಾಡುತ್ತಿದೆ. ಸಾಲದ ಮೊತ್ತವನ್ನು ಕಂಪನಿ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ ಎಂದು ಹೆಸರು ತಿಳಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ ಏಜೆನ್ಸಿಯ ಪ್ರಕಾರ, ಅದಾನಿ ಗ್ರೂಪ್ ಸೋಲಾರ್ ಮತ್ತು ಪವನ ಯೋಜನೆಗಳಿಗೆ ಖರ್ಚು ಮಾಡಲು ಸಾಲವನ್ನು ಬಳಸಲಿದೆ ಎಂದು ವರದಿಯಾಗಿದೆ. ಗೌತಮ್ ಅದಾನಿ ನೇತೃತ್ವದ ಕಂಪನಿಗಳು ಸಂಪರ್ಕದಲ್ಲಿರುವ ಹಣಕಾಸು ಸಂಸ್ಥೆಗಳಲ್ಲಿ ಬಾರ್ಕ್ಲೇಸ್ ಪಿಎಲ್‌ಸಿ, ಬಿಎನ್‌ಪಿ ಪರಿಬಾಸ್ ಎಸ್‌ಎ, ಡಾಯ್ಚ ಬ್ಯಾಂಕ್ ಎಜಿ, ಫಸ್ಟ್ ಅಬುಧಾಬಿ ಬ್ಯಾಂಕ್ ಪಿಜೆಎಸ್‌ಸಿ, ರಾಬೋಬ್ಯಾಂಕ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಿಎಲ್‌ಸಿ ಸೇರಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಏಜೆನ್ಸಿ ವರದಿ ಮಾಡಿದೆ.

ಈ ಬಗ್ಗೆ ಅದಾನಿ ಗ್ರೂಪ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಈ ವಹಿವಾಟನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಮತ್ತು ಡಿಸೆಂಬರ್‌ನ ಮುನ್ನ ಈ ಸಾಲದ ಮೊತ್ತ ಸಿಗುವ ಸಾಧ್ಯತೆ ಇದೆ. ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಅನ್ನು ಖರೀದಿಸಲು ತೆಗೆದುಕೊಂಡಿರುವ ಅಸ್ತಿತ್ವದಲ್ಲಿರುವ ಸಾಲವನ್ನು ಮರುಹಣಕಾಸು ಮಾಡಲು ಅದಾನಿ ಗ್ರೂಪ್ $3.5 ಶತಕೋಟಿ ಸಾಲದ ಒಪ್ಪಂದವನ್ನು ಕೊನೆ ಮಾಡಿದ ಕೆಲವೇ ದಿನಗಳಲ್ಲಿ ಹೊಸ ಸಾಲದ ಬಗ್ಗೆ ವರದಿಯಾಗಿದೆ. ಇದು ಈ ವರ್ಷ ಏಷ್ಯಾದಲ್ಲಿ 10 ದೊಡ್ಡ ಸಾಲದ ವ್ಯವಹಾರಗಳಲ್ಲಿ ಒಂದಾಗಿದೆ.

ಈ ಬೆನ್ನು ಬೆನ್ನಿಗೆ ಸಾಲದ ಒಪ್ಪಂದಗಳು ಹಿಂಡೆನ್‌ಬರ್ಗ್ ಕಂಪನಿಯ ವಿರುದ್ಧ ಸ್ಟಾಕ್ ಮಾರ್ಕೆಟ್ ಮ್ಯಾನಿಪ್ಯುಲೇಷನ್ ಅನ್ನು ಆಪಾದನೆ ಮಾಡಿದ ಹಾನಿಕಾರಕ ವರದಿಯನ್ನು ಪ್ರಕಟಿಸಿದ ನಂತರ ಹೂಡಿಕೆದಾರರ ಭಾವನೆಯನ್ನು ತುಂಬಲು ಸಹಾಯ ಮಾಡುತ್ತದೆ.

ಗೌತಮ್ ಅದಾನಿ ಈ ವರ್ಷದ ಆರಂಭದಲ್ಲಿ ಹಿಂಡೆನ್‌ಬರ್ಗ್ ತನ್ನ ಸಮೂಹವನ್ನು ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಿಸಿದಾಗ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಆರೋಪದ ಬಂದ ಕೆಲವೇ ವಾರಗಳಲ್ಲಿ ಮಾರುಕಟ್ಟೆಗಳಲ್ಲಿ ಇವರ ಕಂಪನಿಯ ನಿವ್ವಳ ಮೌಲ್ಯವು 40 ಶತಕೋಟಿ ಡಾಲರ್‌ಗಳಿಗೆ ಕುಸಿತ ಕಂಡಿತ್ತು.

ಪ್ರಶ್ನೆಗಾಗಿ ಲಂಚ ಕೇಸ್‌: ಉದ್ಯಮಿಗೆ ಪಾಸ್‌ವರ್ಡ್‌ ನೀಡಿದ್ದು ನಿಜವೆಂದು ಒಪ್ಪಿಕೊಂಡ ಟಿಎಂಸಿ ಸಂಸದೆ

ಅದಾನಿ ಗ್ರೂಪ್‌ ಕಳೆದುಹೋದ ಕೆಲವು ಸಂಪತ್ತನ್ನು ಚೇತರಿಸಿಕೊಂಡಿದೆ ಆದರೆ ಈ ವರ್ಷದ ಆರಂಭದಲ್ಲಿ ಅದು ಕಂಡ ಉತ್ತಮ ಮಟ್ಟದಿಂದ ಸಾಕಷ್ಟು ದೂರದಲ್ಲಿದೆ. ಫೋರ್ಬ್ಸ್ ಪ್ರಕಾರ ಗೌತಮ್ ಅದಾನಿ ಅವರ ವೈಯಕ್ತಿಕ ಸಂಪತ್ತು 50 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಾಗಿದೆ.

ಅದಾನಿಗೆ ಬಿಡದ ಶನಿ ಕಾಟ: ಇಸ್ರೇಲ್‌ - ಪ್ಯಾಲೆಸ್ತೀನ್‌ ಯುದ್ಧಕ್ಕೆ ಅದಾನಿ ಗ್ರೂಪ್‌ನ 34 ಸಾವಿರ ಕೋಟಿ ಢಮಾರ್!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!