WeWork Bankruptcy: ವೀವರ್ಕ್‌ ಕಂಪನಿ ದಿವಾಳಿ, ಶೇ. 50ರಷ್ಟು ಕುಸಿದ ಕಂಪನಿಯ ಷೇರುಗಳು!

By Santosh Naik  |  First Published Nov 2, 2023, 1:17 PM IST

ಬೆಂಗಳೂರು ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋ ವರ್ಕಿಂಗ್‌ ಸ್ಪೇಸ್‌ ಸೌಲಭ್ಯ ನೀಡಿರುವ ವೀವರ್ಕ್‌ ಇಂಕ್‌ ದಿವಾಳಿಯ ಹಾದಿಯಲ್ಲಿದೆ. ಅಮೆರಿಕ ಮೂಲದ ಕಂಪನಿ ಮುಂದಿನ ವಾರ ನ್ಯೂಜೆರ್ಸಿಯಲ್ಲಿ ದಿವಾಳಿತನ ಅರ್ಜಿಯನ್ನು ಸಲ್ಲಿಕೆ ಮಾಡಲಿದೆ ಎಂದು ವರದಿಯಾಗಿದೆ.
 


ನವದೆಹಲಿ (ನ.2): ಫ್ಲೆಕ್ಸಿಬಲ್ ವರ್ಕ್‌ಸ್ಪೇಸ್ ಪ್ರೊವೈಡರ್ ಅಥವಾ ಕೋ ವರ್ಕಿಂಗ್‌ ಸ್ಪೇಸ್‌ ನೀಡುವ ಕಂಪನಿಯಾಗಿರುವ ಅಮೆರಿಕ ಮೂಲದ ವೀ ವರ್ಕ್‌ ಮುಂದಿನ ವಾರದಲ್ಲಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲಿಯೇ ಬುಧವಾರದಂದು ವೀವರ್ಕ್‌ ಕಂಪನಿಯ ಷೇರುಗಳು ದಾಖಲೆಯ ಮಟ್ಟಕ್ಕೆ ಕುಸಿದಿದೆ. ಕಂಪನಿಯ ಷೇರುಗಳು ಶೇ. 50ರಷ್ಟು ಕುಸಿದಿದೆ ಎಂದು ಹೇಳಲಾಗಿದೆ. ಒಂದು ಹಂತದಲ್ಲಿ 47 ಶತಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ನ್ಯೂಯಾರ್ಕ್ ಮೂಲದ ಕಂಪನಿಯು ಗಣನೀಯ ನಷ್ಟವನ್ನು ಅನುಭವಿಸಿದ್ದು, ಈಗ ಕೆಲವು ವರ್ಷಗಳಿಂದ ಬೃಹತ್ ಸಾಲದ ಹೊರೆಯನ್ನು ಎದುರಿಸುತ್ತಿದೆ. ಆದರೆ, ವೀವರ್ಕ್‌ ಇಂಕ್‌ನ ದಿವಾಳಿ, ಭಾರತದ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ವೀ ವರ್ಕ್‌ ಇಂಡಿಯಾದ ಸಿಇಒ ತಿಳಿಸಿದ್ದಾರೆ. ವೀ ವರ್ಕ್‌ ಭಾರತದಲ್ಲಿ ಸಾಕಷ್ಟು ಕೋ ವರ್ಕಿಂಗ್‌ ಸ್ಪೇಸ್‌ಗಳನ್ನು ಹೊಂದಿದೆ. ಬೆಂಗಳೂರಿನಲ್ಲಿಯೂ ಈ ಕಂಪನಿ ಹಲವು ಪ್ರಮುಖ ಪ್ರದೇಶಗಳಲ್ಲಿ ತನ್ನ ಕೋ ವರ್ಕಿಂಗ್‌ ಸ್ಪೇಸ್‌ ಅನ್ಜು ಹೊಂದಿದೆ. ವೀವರ್ಕ್‌ ಗ್ಲೋಬಲ್‌ನಿಂದ ವೀ ವರ್ಕ್‌ ಇಂಡಿಯಾ ಸಂಪೂರ್ಣ ಪ್ರತ್ಯೇಕ ಘಟಕವಾಗಿದೆ ಎಂದು ವೀವರ್ಕ್‌ ಇಂಡಿಯಾದ ಸಿಇಒ ತಿಳಿಸಿದ್ದಾರೆ.

ವೀ ವರ್ಕ್‌ ಗ್ಲೋಬಲ್‌ ಕಂಪನಿಯ ಸ್ಟಾಕ್ ಪ್ರಸ್ತುತ 1.22 ಡಾಲರ್‌ನ ಐತಿಹಾಸಿಕ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಒಂದೇ ವರ್ಷದಲ್ಲಿ ಕಂಪನಿಯ ಮೌಲ್ಯದಲ್ಲಿ ಶೇ. 98.96ರಷ್ಟು ಕುಸಿತವಾಗಿದೆ. ಪ್ರಸ್ತುತ ಈ ಕಂಪನಿಯ  ಸರಿಸುಮಾರು 121 ಮಿಲಿಯನ್ ಯುಎಸ್‌ ಡಾಲರ್‌ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಹಿಂದಿನ ದಾಖಲೆಗೆ ಹೋಲಿಸಿದರೆ ದೊಡ್ಡ ಮಟ್ಟದ ಕುಸಿತ ಇದಾಗಿದೆ. ಸಾಫ್ಟ್‌ಬ್ಯಾಂಕ್‌ನಿಂದ ಬೆಂಬಲಿತವಾಗಿರುವ ಕಂಪನಿಗೆ ಕಾರ್ಯಾಚರಣೆಯಲ್ಲಿ ಸಸಾಕಷ್ಟು ಸವಾಲುಗಳನ್ನು ಎದುರಿಸಿದ ಬಳಿಕ ದಿವಾಳಿತನದ ಫೈಲಿಂಗ್‌ ಹಾಕಿದೆ. ದೀರ್ಘಾವಧಿಯ ಗುತ್ತಿಗೆಗಳನ್ನು ತೆಗೆದುಕೊಳ್ಳುವ ಮತ್ತು ಅವುಗಳನ್ನು ಅಲ್ಪಾವಧಿಗೆ ಬಾಡಿಗೆಗೆ ನೀಡುವ ವ್ಯವಹಾರ ಮಾದರಿಯ ಬಗ್ಗೆ ಅನುಮಾನಗಳ ನಡುವೆ ಕಂಪನಿಯ ಇನೀಶಿಯಲ್‌ ಪಬ್ಲಿಕ್‌ ಆಫರಿಂಗ್‌ 2019 ರಲ್ಲಿ ಕುಸಿತ ಕಂಡಿತ್ತು.

ಜೂನ್ ಅಂತ್ಯದ ವೇಳೆಗೆ, ಕಂಪನಿಯು ಒಟ್ಟು 2.9 ಶತಕೋಟಿ ಯುಎಸ್‌ ಡಾಲರ್‌ ನಿವ್ವಳ ದೀರ್ಘಾವಧಿಯ ಸಾಲವನ್ನು ಹೊಂದಿತ್ತು ಮತ್ತು ದೀರ್ಘಾವಧಿಯ ಗುತ್ತಿಗೆಗಳಲ್ಲಿ 13 ಶತಕೋಟಿ ಯುಎಸ್‌ ಡಾಲರ್‌ಗಿಂತ ಹೆಚ್ಚಿನ ಹೊರೆಯನ್ನು ಹೊಂದಿತ್ತು. 

WeWork ಗ್ಲೋಬಲ್‌ ನ್ಯೂಜೆರ್ಸಿಯಲ್ಲಿ ದಿವಾಳಿತನಕ್ಕಾಗಿ ಅಧ್ಯಾಯ 11 ಅರ್ಜಿಯನ್ನು ಸಲ್ಲಿಸಲು ಯೋಜಿಸಿದ್ದರೂ ಸಹ, ಕೋ ವರ್ಕಿಂಗ್‌ ಸ್ಪೇಸ್‌ ಕಂಪನಿಯ ಭಾರತೀಯ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು WeWork ಇಂಡಿಯಾದ CEO ಕರಣ್ ವಿರ್ವಾನಿ ಹೇಳಿದ್ದಾರೆ. 'ವೀ ವರ್ಕ್‌ ಇಂಡಿಯಾ,  ವೀ ವರ್ಕ್‌ ಗ್ಲೋಬಲ್‌ನಿಂದ ಪ್ರತ್ಯೇಕ ಘಟಕವಾಗಿದೆ. ವೀ ವರ್ಕ್‌ ಗ್ಲೋಬಲ್‌ ದಿವಾಳಿತನದ ಕುರಿತಾಗಿ ಚಾಪ್ಟರ್‌-11 ಅರ್ಜಿಯನ್ನು ಅಮೆರಿಕದಲ್ಲಿ ಸಲ್ಲಿಸಲಿದೆ ಎಂದು ವರದಿಯಾಗಿರುವ ನಡುವೆ ಇದು ಭಾರತದ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತದಲ್ಲಿ ನಾವು ಎಂದಿನಂತೆ ನಮ್ಮ ಸದ್ಯಸರು, ಭೂಮಾಲೀಕರು ಹಾಗೂ ಪಾಲುದಾರರೊಂದಿಗೆ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ವಿರ್ವಾನಿ ಸ್ಪಷ್ಟಪಡಿಸಿದ್ದಾರೆ.

ಫ್ರೀ ಗ್ಯಾರಂಟಿ ಕೊಟ್ಟು ಪಂಜಾಬ್ ಸರ್ಕಾರ ದಿವಾಳಿ: ಡಿಕೆಶಿ ನೋ ರಿಯಾಕ್ಷನ್‌..!

ಭಾರತದಲ್ಲಿ ವ್ಯವಹಾರವನ್ನು ನಡೆಸಲು ಮತ್ತು ನಿರ್ವಹಿಸಲು ಹೆಚ್ಚಿನ ಪಾಲು ಮತ್ತು ನಿಯಂತ್ರಣವನ್ನು ಎಂಬಸಿ ಗ್ರೂಪ್‌ ಹೊಂದಿದೆ. ಇದೇ ಕಂಪನಿ ವೀ ವರ್ಕ್‌ ಇಂಡಿಯಾ ಕಂಪನಿಯ, ಭಾರತೀಯ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Tap to resize

Latest Videos

ಉಚಿತ ಕೊಡುಗೆಗಳಿಂದ ದಿವಾಳಿಯತ್ತ ಖಜಾನೆ: 3.27 ಲಕ್ಷ ಕೋಟಿ ರು. ಸಾಲದ ಸುಳಿಯಲ್ಲಿ ಪಂಜಾಬ್‌

click me!