ಅಂಬಾನಿಯವರ ಬುಲೆಟ್ ಪ್ರೂಫ್ ವಾಹನವನ್ನು ಡ್ರೈವ್ ಮಾಡುವ ಈ ಚಾಲಕರು ವಾಣಿಜ್ಯ ಮತ್ತು ಐಷಾರಾಮಿ ವಾಹನಗಳನ್ನು ರೈಡ್ ಮಾಡುವಲ್ಲಿ ಪರಿಣತರಾಗಿದ್ದಾರೆ. ಕೆಟ್ಟ ರಸ್ತೆಗಳು ಮತ್ತು ಅಹಿತಕರ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಡ್ರೈವರ್ ಆಗಿದ್ದಾರೆ.
ಮುಂಬೈ (ಮಾ.4): ಭಾರತದ ಪ್ರಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಆದಾಯ ಎಷ್ಟು, ಎಲ್ಲೆಲ್ಲಾ ಅವರ ಸಂಪತ್ತು ಇದೆ, ಅವರು ಯಾವೆಲ್ಲಾ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಅನ್ನೋದನ್ನ ಬಹುತೇಕ ವಿಶ್ವದ ಎಲ್ಲಾ ಪತ್ರಿಕೆಗಳು ಮಾಡಿವೆ. ಈ ಎಲ್ಲದರ ನಡುವೆ ಅಂಬಾನಿ ಅವರ ಕಾರ್ ಡ್ರೈವರ್‌ನ ಸ್ಯಾಲರಿ ಎಷ್ಟು ಅನ್ನೋದು ಹೊಸ ವರದಿಯಲ್ಲಿ ಬಹಿರಂಗವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಅದರಲ್ಲಿ ಮುಕೇಶ್ ಅಂಬಾನಿ ಅವರ ಸ್ಯಾಲರಿ 2017ರಲ್ಲಿ ತಿಂಗಳಿಗೆ 2 ಲಕ್ಷ ಆಗಿತ್ತಂತೆ. ಲೈವ್ ಮಿಂಟ್ ಪತ್ರಿಕೆ ಈ ವರದಿ ಮಾಡಿದೆ. ಇದರರ್ಥ ಒಂದು ವರ್ಷಕ್ಕೆ ಕಾರು ಚಾಲಕನ ಸಂಬಳವೇ 24 ಲಕ್ಷ ರೂಪಾಯಿ ಅಗಿದೆ. ಬಹುಶಃ ಇಂದೂ ಕೂಡ ಕೆಲ ಎಂಎನ್‌ಸಿ ಕಂಪನಿಗಳ ವೃತ್ತಿಪರರು ಕೂಡ ಇಷ್ಟು ಸಂಬಳ ಪಡೆಯುತ್ತಿಲ್ಲ. ಆದರೆ, 2023ರಲ್ಲಿ ಮುಕೇಶ್ ಅಂಬಾನಿ ಕಾರು ಚಾಲಕ ಪಡೆಯುವ ಸ್ಯಾಲರಿ ಎಷ್ಟು ಎನ್ನುವುದು ಇನ್ನೂ ಕುತೂಹಲವಾಗಿದೆ. ವರದಿಯ ಪ್ರಕಾರ ಅಂಬಾನಿ ಮನೆಯ ಕಾರ್ ಚಾಲಕರು ಖಾಸಗಿ ಗುತ್ತಿಗೆ ಸಂಸ್ಥೆಯ ಮೂಲಕ ನೇಮಕಗೊಂಡಿದ್ದಾರೆ ಮತ್ತು ಬಿಲಿಯನೇರ್ ಕುಟುಂಬದ ಐಷಾರಾಮಿ ಜೀವನಶೈಲಿಯ ಕಾರಣಕ್ಕಾಗಿ ಡ್ರೈವಿಂಗ್ ಸಿಬ್ಬಂದಿ ಕಠಿಣ ತರಬೇತಿಯನ್ನು ಪಡೆಯುತ್ತಾರೆ.
ಅಂಬಾನಿ ಅವರ ಬುಲೆಟ್‌ಫ್ರೂಫ್ ಕಾರುಗಳನ್ನು ಹ್ಯಾಂಡಲ್ ಮಾಡುವುದು ಇವರ ಪ್ರಮುಖ ಕೆಲಸವಾಗಿದೆ. ಅದರೊಂದಿಗೆ ಅಂಬಾನು ಕುಟುಂಬದ ವಾಣಿಜ್ಯ ಹಾಗೂ ಐಷಾರಾಮಿ ಕಾರುಗಳನ್ನು ಕೆಟ್ಟ ರಸ್ತೆಗಳಲ್ಲಿ ಕುಶಲವಾಗಿ ಓಡಿಸದು, ಅಹಿತಕರ ಸಂದರ್ಭವನ್ನು ಸಮರ್ಥಗಾಗಿ ನಿಭಾಯಿಸುವಂಥ ಕೆಲಸಗಳು ಅವರದಾಗಿರುತ್ತದೆ. ಅಡುಗೆಯವರು, ಕಾವಲುಗಾರರು ಮತ್ತು ಮನೆಗೆಲಸದ ಸಿಬ್ಬಂದಿಯಿಂದ ಹಿಡಿದು ಎಲ್ಲಾ ನೌಕರರಿಗೆ ಭತ್ಯೆ ಮತ್ತು ವಿಮೆ ನೀಡಲಾಗುತ್ತದೆ ಎಂದು ವರದಿಗಳು ಹೇಳಿವೆ.
ಮುಖೇಶ್ ಅಂಬಾನಿ ಮಕ್ಕಳಿಗೆ ಬಾಲ್ಯದಲ್ಲಿ ಸಿಗುತ್ತಿದ್ದ ಪಾಕೆಟ್ ಮನಿ ವಾರಕ್ಕೆ 5ರೂ. ಅಷ್ಟೇ!
ಇನ್ನು ಕೆಲವು ಬಾಲಿವುಡ್ ಸ್ಟಾರ್‌ಗಳು ಕೂಡ ತಮ್ಮ ಬಾಡಿಗಾರ್ಡ್‌ಗಳಿಗೆ ಕೋಟಿ ಲೆಕ್ಕದಲ್ಲಿ ವೇತನ ನೀಡುತ್ತಾರೆ. ಅದರಲ್ಲಿ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಮುಂಚೂಣಿಯಲ್ಲಿದ್ದಾರೆ. ಕಳೆದ 20 ವರ್ಷಗಳಿಂದ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿರುವ ಶೇರಾ, ವರ್ಷಕ್ಕೆ 2 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಇನ್ನು ಕರೀನಾ ಕಪೂರ್ ಖಾನ್ ತನ್ನ ಮಕ್ಕಳನ್ನು ನೋಡಿಕೊಳ್ಳುವ ನರ್ಸ್‌ಗಾಗಿ ಪ್ರತಿ ತಿಂಗಳು 1.50 ಲಕ್ಷ ಖರ್ಚು ಮಾಡುತ್ತಾರೆ. ಓವರ್‌ಟೈಮ್ ಕೆಲಸ ಮಾಡಿದರೆ, ಇದು 1.75 ಲಕ್ಷ ರೂಪಾಯಿಯವರೆಗೆ ವೇತನ ಏರುತ್ತದೆ.
ಮುಖೇಶ್ ಅಂಬಾನಿ ನಿವಾಸ ಆಂಟಿಲಿಯಾದ ಪ್ಲಂಬರ್ ವೇತನ ಕೇಳಿದ್ರೆ ಶಾಕ್ ಆಗ್ತೀರಾ!
ಇನ್ನು ಅಕ್ಷಯ್ ಕುಮಾರ್ ಅವರ ಬಾಡಿಗಾರ್ಡ್ ಶ್ರೇಯಸ್, ವರ್ಷಕ್ಕೆ 1.2 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಇನ್ನು ಅಮಿತಾಬ್ ಬಚ್ಛನ್ ಅವರ ಬಾಡಿಗಾರ್ಡ್ ಜೀತೇಂದ್ರ ಶಿಂಧೆ ಅವರಿಗೆ ವರ್ಷಕ್ಕೆ 1.5 ಕೋಟಿ ಸ್ಯಾಲರಿ ಇದೆ. ಆಮಿರ್ ಖಾನ್ ಅವರ ಅಂಗರಕ್ಷಕನಾಗಿರುವ ಯುವರಾಜ್ ಘೋರ್ಪಡೆ ವರ್ಷಕ್ಕೆ 2 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇನ್ನು ಶಾರುಖ್ ಖಾನ್ ಅವರ ಬಾಡಿಗಾರ್ಡ್ ರವಿ ಸಿಂಗ್ ವರ್ಷಕ್ಕೆ 2.5 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಅಂಗರಕ್ಷಕರ ಹೊರತಾಗಿ, ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನ ಚಿತ್ರಗಳು ಬಿಡುಗಡೆಯಾದಾಗ ಅವರ ಸಂಬಳವೂ ಈ ಹಿಂದೆ ಮುಖ್ಯಾಂಶಗಳನ್ನು ಮಾಡಿತು. ಅವರು ವಾರ್ಷಿಕವಾಗಿ ₹ 7 ರಿಂದ 9 ಕೋಟಿ ಗಳಿಸುತ್ತಾರೆ, ₹ 50 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.