ಕೆನಡಾದಲ್ಲಿ ಬಿಯರ್, ವೈನ್ ಮಾರಾಟದಲ್ಲಿ ಸಾರ್ವಕಾಲಿಕ ಇಳಿಕೆ, ಕಾರಣವೇನು?

Published : Mar 04, 2023, 05:02 PM IST
ಕೆನಡಾದಲ್ಲಿ ಬಿಯರ್, ವೈನ್ ಮಾರಾಟದಲ್ಲಿ ಸಾರ್ವಕಾಲಿಕ ಇಳಿಕೆ, ಕಾರಣವೇನು?

ಸಾರಾಂಶ

ಕೆನಡಾದಲ್ಲಿ ಕಳೆದ ಸಾಲಿನಲ್ಲಿ ಬಿಯರ್ ಹಾಗೂ ವೈನ್ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇದಕ್ಕೆ ಕೆನಡಾದಲ್ಲಿ ಮದ್ಯಪಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿರೋದು ಹಾಗೂ ಹೊಸ ತೆರಿಗೆ ಪರಿಚಯಿಸಿರೋದೇ ಕಾರಣ ಎಂದು ಹೇಳಲಾಗಿದೆ. 

ವಾಷಿಂಗ್ಟನ್ (ಮಾ.4): ಕೆನಡಾದಲ್ಲಿ ಬಿಯರ್ ಹಾಗೂ ವೈನ್  ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ. 2021-22ನೇ ಸಾಲಿನಲ್ಲಿ ಕೆನಾಡದಲ್ಲಿ ಪ್ರತಿ ವ್ಯಕ್ತಿಗೆ ಮಾರಾಟ ಮಾಡಿದ ಬಿಯರ್ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ವೈನ್ ಮಾರಾಟದಲ್ಲಿ ಕೂಡ ಇಳಿಕೆಯಾಗಿದ್ದು, 1949ರ ಬಳಿಕ ವೈನ್ ಮಾರಾಟದಲ್ಲಿ ಅತೀಹೆಚ್ಚಿನ ಇಳಿಕೆಯಾಗಿದೆ. ಮದ್ಯಪಾನಕ್ಕೆ ಸಂಬಂಧಿಸಿ ಕೆನಡಾದಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ ಹಾಗೂ ಹೊಸ ಮದ್ಯಪಾನ ತೆರಿಗೆ ಪರಿಚಯಿಸಲಾಗಿದೆ. ಇದು ಮದ್ಯಪ್ರಿಯರಿಗೆ ಬಿಯರ್ ಸೇರಿದಂತೆ ಇತರ ಮದ್ಯಗಳ ಮೇಲಿನ ಆಸಕ್ತಿ ಕಳೆದುಕೊಳ್ಳಲು ಮುಖ್ಯ ಕಾರಣವಾಗಿದೆ. ಬಿಯರ್ ಮಾರಾಟ ತಗ್ಗಿದ್ದರೂ ಕೂಡ ಇದು ಕೆನಡಾದ ಅತೀಜನಪ್ರಿಯ ಮದ್ಯಪಾನೀಯಗಳಲ್ಲಿ ಒಂದಾಗಿದೆ. ಕೆನಡಾ ಸರ್ಕಾರದ ಅಕಿಅಂಶಗಳ ಇಲಾಖೆ ಸ್ಟ್ಯಾಟಿಸ್ಟಿಕ್ಸ್ ಕೆನಡಾ ಬಿಡುಗಡೆಗೊಳಿಸಿರುವ ವರದಿ ಪ್ರಕಾರ ಕಳೆದ ಒಂದು ದಶಕದಲ್ಲಿ ಮದ್ಯ ಮಾರಾಟದಲ್ಲಿ ಶೇ.1.2 ಇಳಿಕೆಯಾಗಿದೆ. ವೈನ್ ಮಾರಾಟದಲ್ಲಿ ಶೇ.4 ಇಳಿಕೆ ಕಂಡುಬಂದಿದೆ. ಇದು ಸ್ಟ್ಯಾಟಿಸ್ಟಿಕ್ಸ್ ಕೆನಡಾದ ದಾಖಲಿಸಿರುವ ಅತೀದೊಡ್ಡ ಪ್ರಮಾಣದ ಇಳಿಕೆಯಾಗಿದೆ.

ವರದಿಗಳ ಅನ್ವಯ ಬಿಯರ್ ಕೆನಡಾದಲ್ಲಿ (Canada) ಅತೀಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದ ಮದ್ಯಪಾನೀಯಗಳಲ್ಲಿ ಒಂದಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ 10 ವರ್ಷಗಳಲ್ಲಿ ಬಿಯರ್ ಮಾರುಕಟ್ಟೆಯಲ್ಲಿ ತನ್ನ ಪಾಲು ಕಳೆದುಕೊಳ್ಳುತ್ತಿದೆ. ಒಟ್ಟು ಶೇ.8.8ರಷ್ಟು ಇಳಿಕೆ ಕಂಡುಬಂದಿದೆ. ಈ ಮಧ್ಯೆ ಸೀಡರ್ಸ್ ಹಾಗೂ ವೈನ್ ಕಲರ್ಸ್ ಅಥವಾ ಅಲ್ಕೋಪಸ್ ಬಿಯರ್ ಮಾರುಕಟ್ಟೆ ಕಳೆದುಕೊಂಡ ಬಹುಪಾಲು ಷೇರುಗಳನ್ನು ಪಡೆದುಕೊಂಡಿದೆ. ಸೀಡರ್ಸ್ ಹಗೂ ವೈನ್ ಕಲರ್ಸ್ ಷೇರುಗಳಲ್ಲಿ ಶೇ.5ರಷ್ಟು ಹೆಚ್ಚಳವಾಗಿದೆ. ಎಲ್ಲ ಆಲ್ಕೋಹಾಲಿಕ್ ಬಿವರೇಜ್ ಗಳಲ್ಲಿ ಇವುಗಳ ಮಾರುಕಟ್ಟೆ ಷೇರಿನಲ್ಲಿ ಅತ್ಯಧಿಕ ಹೆಚ್ಚಳ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ 2021-22ನೇ ಸಾಲಿನಲ್ಲಿ ಇವುಗಳ ಮಾರಾಟದ ಒಟ್ಟು ಮೌಲ್ಯದಲ್ಲಿ ಶೇ.13.5ರಷ್ಟು ಹೆಚ್ಚಳವಾಗಿದೆ.

ರಾಜ್ಯದಲ್ಲಿ ಬೃಹತ್‌ ಐಫೋನ್‌ ಘಟಕ: ತೈವಾನ್‌ ಮೂಲದ ಫಾಕ್ಸ್‌ಕಾನ್‌ ಜತೆ ಸಿಎಂ ಬೊಮ್ಮಾಯಿ ಸಮ್ಮುಖ ಒಪ್ಪಂದ

ಗಾತ್ರದ ಆಧಾರದಲ್ಲಿ ಒಟ್ಟು ಆಲ್ಕೋಹಾಲ್ ಮಾರಾಟದಲ್ಲಿ ಇಳಿಕೆಯಾಗಿದ್ರೂ ಹಣದುಬ್ಬರ ಕಾರಣಕ್ಕೆ ಮಾರಾಟದ ಮೌಲ್ಯದಲ್ಲಿಶೇ.2.4ರಷ್ಟು ಹೆಚ್ಚಳವಾಗಿದೆ.  2022ರ  ಮಾರ್ಚ್ ಅಂತ್ಯದಲ್ಲಿ ಲಿಕ್ಕರ್ ಸ್ಟೋರ್ ಗಳು ಹಾಗೂ ಇತರ ಔಟ್ ಲೆಟ್ಸ್ ಗಳಲ್ಲಿ 26.1 ಬಿಲಿಯನ್ ಡಾಲರ್ ಮಾರಾಟವಾಗಿದೆ. ಕೆನಡಾದ ಮದ್ಯ ಕೈಗಾರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುತ್ತಿವೆ. ಏಪ್ರಿಲ್ 1ರಿಂದ ಎಲ್ಲ ಬಿಯರ್ (Beer), ವೈನ್ (Wine) ಹಾಗೂ ಸ್ಪಿರಿಟ್ ಗಳ (Spirits) ಮೇಲಿನ ಫೆಡರಲ್ ತೆರಿಗೆಗಳು ಶೇ.6.3ರಷ್ಟು ಏರಿಕೆ ಕಾಣಲಿವೆ ಎಂದು ಟೊರೋನ್ಟೋ ಸ್ಟಾರ್ ವರದಿ ತಿಳಿಸಿದೆ.

2021-22ನೇ ಸಾಲಿನಲ್ಲಿ ಕೋವಿಡ್ -19 ಕಾರಣದಿಂದ ಕೂಡ ಮಾರುಕಟ್ಟೆಗೆ ತೆರಳಿ ಬಿಯರ್ ಖರೀದಿಸುವವರ ಸಂಖ್ಯೆ ತಗ್ಗಿತ್ತು.ಇನ್ನು ಕೆನಡಾದಲ್ಲಿ ಕ್ರಾಪ್ಟ್ ಬಿಯರ್ (Craft beer) ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕೊರೋನಾ ಪೆಂಡಾಮಿಕ್ ಗಿಂತ ಮುನ್ನ ಇದರ ಮಾರಾಟದಲ್ಲಿ ಎರಡು ಪಟ್ಟು ಹೆಚ್ಚಳ ಕಂಡುಬಂದಿತ್ತು. ಆದರೆ, ಮದ್ಯಪಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದ ಬೆನ್ನಲ್ಲೇ ಬಿಯರ್ ಹಾಗೂ ವೈನ್ ಗೆ ಬೇಡಿಕೆ ತಗ್ಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ರಾಜ್ಯದ 300 ಎಕರೆ ಪ್ರದೇಶದಲ್ಲಿ ಐಫೋನ್‌ ಫ್ಯಾಕ್ಟರಿ, ಚೀನಾದಿಂದ ಶಿಫ್ಟ್‌!

ಇನ್ನು ಕೆನಡಾದ ಸೆಂಟರ್ ಆನ್ ಸಬ್ ಸ್ಟೆನ್ಸ್ ಯೂಸ್ ಹಾಗೂ ಅಡಿಕ್ಷನ್ ಝೀರೋ ಅಲ್ಕೋಹಾಲ್ ಸೇವನೆಯನ್ನು ಶಿಫಾರಸ್ಸು ಮಾಡಿದೆ. ಇನ್ನು ಮದ್ಯ ಸೇವಿಸಲೇಬೇಕು ಅನ್ನೋರಿಗೆ ಈ ಮಾರ್ಗಸೂಚಿ ಅನ್ವಯ ವಾರಕ್ಕೆ ಎರಡು ಗ್ಲಾಸ್ ಬಿಯರ್  (Beer)ಸಾಕು. ಈ ಎಲ್ಲ ಕಾರಣಗಳಿಂದ ಕೆನಡಾದಲ್ಲಿ ಬಿಯರ್ ಗೆ ಬೇಡಿಕೆ ತಗ್ಗಿದೆ ಎಂದು ಹೇಳಲಾಗುತ್ತಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?