ರಿಲಯನ್ಸ್‌ ಈಗ ಜಗತ್ತಿನ ನಂ.2 ಇಂಧನ ಕಂಪನಿ!

By Kannadaprabha News  |  First Published Jul 28, 2020, 8:54 AM IST

ಅಮೆರಿಕದ ಎಕ್ಸೋನ್‌ಮೊಬಿಲ್‌ ಹಿಂದಿಕ್ಕಿದ ರಿಲಯನ್ಸ್‌| ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಈಗ ಜಗತ್ತಿನ ನಂ.2 ಇಂಧನ ಕಂಪನಿ!


ಮುಂಬೈ(ಜು.28): ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಇದೀಗ ಸೌದಿ ಅರೇಬಿಯಾದ ಅರಾಮ್ಕೋ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಇಂಧನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುಕಟ್ಟೆಮೌಲ್ಯದಲ್ಲಿ ಅಮೆರಿಕದ ಎಕ್ಸೋನ್‌ಮೊಬಿಲ್‌ ಕಾರ್ಪೊರೇಷನ್‌ ಅನ್ನು ರಿಲಯನ್ಸ್‌ ಹಿಂದಿಕ್ಕಿದೆ.

2021ಕ್ಕೆ ರಿಲಯನ್ಸ್‌ನಿಂದ 'ಆತ್ಮನಿರ್ಭರ' 5ಜಿ!

Latest Videos

undefined

ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ರಿಲಯನ್ಸ್‌ ಮಾರುಕಟ್ಟೆಮೌಲ್ಯ ಶುಕ್ರವಾರ ಶೇ.4.3ರಷ್ಟುಏರಿಕೆ ಆಗಿದೆ. ಇದರಿಂದ ಸಂಸ್ಥೆಗೆ 59,824 ಕೋಟಿ ರು. ಸೇರ್ಪಡೆ ಆಗಿದ್ದು, ರಿಲಯನ್ಸ್‌ನ ಮಾರುಕಟ್ಟೆಮೌಲ್ಯ 14.17 ಲಕ್ಷ ಕೋಟಿ ರು.ಗೆ ಏರಿಕೆ ಆಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಶೇ.80ರಷ್ಟುಆದಾಯ ಇಂಧನ ಉದ್ಯಮದಿಂದಲೇ ಹರಿದುಬರುತ್ತಿದೆ.

2ಜಿ ಮುಕ್ತ ಭಾರತ, ಗೂಗಲ್‌ಗೆ ಅಂಬಾನಿ ವೆಲ್‌ಕಂ, ಹೇಗಿರಲಿದೆ ಹೊಸ ಅಂಡ್ರಾಯ್ಡ್ ಸಿಸ್ಟಂ?

ಇದೇ ವೇಳೆ ಎಕ್ಸೋನ್‌ಮೊಬಿಲ್‌ ಮಾರುಕಟ್ಟೆಮೌಲ್ಯ 7500 ಕೋಟಿ ರು. ಇಳಿಕೆ ಆಗಿದ್ದು, ಮಾರುಕಟ್ಟೆಮೌಲ್ಯ 13.85 ಲಕ್ಷ ಕೋಟಿ ರು. ಆಗಿದೆ. ಇನ್ನೊಂದೆಡೆ ರಿಲಯನ್ಸ್‌ ಷೇರುಗಳು ಈ ವರ್ಷ ಶೇ.43ರಷ್ಟುಏರಿಕೆ ಆಗಿದ್ದರೆ, ಜಾಗತಿಕವಾಗಿ ತೈಲ ಬೇಡಿಕೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದರಿಂದ ಎಕ್ಸೋನ್‌ಮೊಬಿಲ್‌ ಷೇರುಗಳು ಶೇ.39ರಷ್ಟುಇಳಿಕೆ ಕಂಡಿವೆ. ಇದೇ 1.26 ಲಕ್ಷ ಕೋಟಿ ರು. ಮಾರುಕಟ್ಟೆಮೌಲ್ಯದೊಂದಿಗೆ ಅರಾಮ್ಕೋ ವಿಶ್ವದ ನಂ.1 ಇಂಧನ ಕಂಪನಿ ಎನಿಸಿಕೊಂಡಿದೆ.

click me!