ಎಚ್‌ಡಿಎಫ್‌ಸಿಯಲ್ಲಿ 842 ಕೋಟಿ ರೂ ಷೇರು ಮಾರಿದ ಆದಿತ್ಯ ಪುರಿ!

By Suvarna NewsFirst Published Jul 27, 2020, 1:20 PM IST
Highlights

ಎಚ್‌ಡಿಎಫ್‌ಸಿಯಲ್ಲಿ 842 ಕೋಟಿ ರೂ ಷೇರು ಮಾರಿದ ಆದಿತ್ಯ ಪುರಿ| ಪುರಿ ಅವರು ಇದೇ ಅಕ್ಟೋಬರ್‌ನಲ್ಲಿ ನಿವೃತ್ತಿ ಪಡೆಯುತ್ತಿದ್ದಾರೆ| ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿ ಎಚ್‌ಡಿಎಫ್‌ಸಿಯನ್ನು ಬೆಳೆಸಿದ ಪುರಿ

ಮುಂಬೈ(ಜು.27): ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯಪುರಿ ಜು. 21ರಿಂದ 23ರ ಅವಧಿಯಲ್ಲಿ ತಮ್ಮ ಪಾಲಿನ 0.13% ಷೇರನ್ನು 842.87 ಕೋಟಿ ರು.ಗೆ ಮಾರಾಟ ಮಾಡಿದ್ದಾರೆ.

ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!

ಪುರಿ ಅವರು ಇದೇ ಅಕ್ಟೋಬರ್‌ನಲ್ಲಿ ನಿವೃತ್ತಿ ಪಡೆಯುತ್ತಿದ್ದಾರೆ. ಈ ಷೇರು ಮಾರಾಟಕ್ಕೂ ಮುನ್ನ ಪುರಿ ಬಳಿ 0.14% ಷೇರುಗಳಿದ್ದವು. ಮಾರಾಟದ ಬಳಿಕ 0.01% ಷೇರುಗಳನ್ನು ಮಾತ್ರ ಹೊಂದಿದ್ದಾರೆ ಎಂದು ಷೇರುಪೇಟೆಗೆ ಜುಲೈ ತಿಂಗಳಿನಲ್ಲಿ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿ ಎಚ್‌ಡಿಎಫ್‌ಸಿಯನ್ನು ಬೆಳೆಸಿದ ಪುರಿ ಅವರಿಗೆ 70 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ನಿವೃತ್ತಿ ಪಡೆಯಲಿದ್ದಾರೆ. ಎಚ್‌ಡಿಎಫ್‌ಸಿ ಮಾರುಕಟ್ಟೆಮೌಲ್ಯ ಸುಮಾರು 6.14 ಲಕ್ಷ ಕೋಟಿ ರು. ನಷ್ಟಿದೆ.

click me!