'ಜಿಯೋ' ಅಂಬಾನಿ: ಅದ್ದೂರಿ ಆಫರ್‌ಗಳಿಂದ ಭರ್ಜರಿ ಪಾಯಿಂಟ್!

By Web Desk  |  First Published Nov 27, 2019, 5:07 PM IST

ರಿಲಯನ್ಸ್ ಜಿಯೋಗೆ ಮತ್ತೊಂದು ಸಾಧನೆಯ ಗರಿ|  ಆದಾಯದ ಮಾರುಕಟ್ಟೆ ಪಾಲು ಹೆಚ್ಚಿಸಿಕೊಂಡ ರಿಲಯನ್ಸ್ ಜಿಯೋ| ಸೆಪ್ಟೆಂಬರ್ ತ್ರೈಮಾಸಿಕದ ಒಟ್ಟು ಆದಾಯದಲ್ಲಿ 60 ಬೇಸಿಸ್ ಪಾಯಿಂಟುಗಳ ಹೆಚ್ಚಳ| ಮಹಾನಗರ ಹಾಗೂ ಗ್ರಾಮೀಣ ಮಾರುಕಟ್ಟೆಯಲ್ಲಿ ಸದೃಢ ಬೆಳವಣಿಗೆ| ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್-ಐಡಿಯಾದ RMS 30 ಬೇಸಿಸ್ ಪಾಯಿಂಟ್|  ತ್ರೈಮಾಸಿಕದ ಹೋಲಿಕೆಯಲ್ಲಿ 40 ಬಿಪಿಎಸ್ ಇಳಿಕೆ ಕಂಡ ಭಾರ್ತಿ ಏರ್‌ಟೆಲ್| ಟ್ರಾಯ್ ಸಂಗ್ರಹಿಸಿದ ಆರ್ಥಿಕ ದತ್ತಾಂಶ ವರದಿ ಬಹಿರಂಗ|
 


ಮುಂಬೈ(ನ.27): ಅತ್ತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ರಿಲಯನ್ಸ್ ಕಮ್ಯುನಿಕೇಶನ್ಸ್ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿ ಹೊರ ಹೋಗಿದ್ದಾರೆ. ಇತ್ತ ರಿಲಯನ್ಸ್ ಇಂಡಸ್ಟ್ರಿ ನೊಗ ಹೊತ್ತ ಮುಖೇಶ್ ಅಂಬಾನಿ ವ್ಯಾಪಾರ ಕ್ಷೇತ್ರದಲ್ಲಿ ಶಿಖರದ ಉತ್ತುಂಗವೇರಿದ್ದಾರೆ.

ಕಳೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಆದಾಯದ ಮಾರುಕಟ್ಟೆ ಪಾಲನ್ನು(ರೆವೆನ್ಯೂ ಮಾರ್ಕೆಟ್ ಶೇರ್, RMS)ವೃದ್ಧಿಸಿಕೊಂಡಿದೆ. 

Latest Videos

ಜಾಗತಿಕ ಮಟ್ಟದಲ್ಲೂ ಸಾಧನೆ ವಿಶಿಷ್ಟ, ಜಿಯೋಗೆ ಮತ್ತೊಂದು ಕಿರೀಟ!

ಸೆಪ್ಟೆಂಬರ್ ತ್ರೈಮಾಸಿಕದ ಒಟ್ಟು ಆದಾಯದಲ್ಲಿ 60 ಬೇಸಿಸ್ ಪಾಯಿಂಟುಗಳ ಸದೃಢ ಹೆಚ್ಚಳ ದಾಖಲಿಸಿರುವ ಜಿಯೋ ಆದಾಯದ ಮಾರುಕಟ್ಟೆ ಪಾಲು ಶೇ.29ರಷ್ಟು ತಲುಪಿದೆ.

ಪ್ರಮುಖ ಮಹಾನಗರಗಳು ಹಾಗೂ ಗ್ರಾಮೀಣ ಮಾರುಕಟ್ಟೆಯಲ್ಲಿ ಸದೃಢ ಬೆಳವಣಿಗೆಯೇ ಜಿಯೋದ ಈ ಸಾಧನೆಗೆ ಕಾರಣ ಎನ್ನಲಾಗಿದೆ.

ಟೆಲಿಕಾಂ ಕಂಪನಿಗಳಿಗೆ ಕೇಂದ್ರದ ಪ್ಯಾಕೇಜ್‌ : ಜಿಯೋ ವಿರೋಧ

ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವೊಡಾಫೋನ್-ಐಡಿಯಾ ತುಲನೆಯಲ್ಲಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿದೆ. ಆದರೆ ವೊಡಾಫೋನ್ ಐಡಿಯಾ ಬಹುತೇಕ ಕಡೆಗಳಲ್ಲಿ ತನ್ನ ನೆಲೆ ಕಳೆದುಕೊಂಡಿರುವುದು ನಿಚ್ಚಳವಾಗಿದೆ. 

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್-ಐಡಿಯಾದ RMS 30 ಬೇಸಿಸ್ ಪಾಯಿಂಟುಗಳ ಇಳಿಕೆ ಕಂಡಿದೆ. ಶೇ.15.6ರಷ್ಟು RMS ದಾಖಲಾಗಿದೆ.

ಇನ್ನು ಹಿಂದಿನ ತ್ರೈಮಾಸಿಕದ ಹೋಲಿಕೆಯಲ್ಲಿ 40 ಬಿಪಿಎಸ್ ಇಳಿಕೆ ಕಂಡ ಭಾರ್ತಿ ಏರ್‌ಟೆಲ್ ಶೇ. 51.7ರಷ್ಟು RMS ತಲುಪಿದೆ.

ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?

ಜೂನ್ ತ್ರೈಮಾಸಿಕದಲ್ಲಿ, ಜಿಯೋ ಹಾಗೂ ವೊಡಾ-ಐಡಿಯಾಗಳ RMS ಕ್ರಮವಾಗಿ ಶೇ. 24.5 ಹಾಗೂ 19.5ರಷ್ಟು ಆಗಿತ್ತು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಂಗ್ರಹಿಸಿದ ಆರ್ಥಿಕ ದತ್ತಾಂಶದಿಂದ ತಿಳಿದುಬಂದಿದೆ

click me!