ಚೆಲುವೆಯ ಅಂದದ ಮೊಗಕೆ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ!

By Web Desk  |  First Published Nov 27, 2019, 3:53 PM IST

ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ ಕುಸಿತ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.20ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 37,650  ರೂ.| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.45ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 44,036 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್’ಗೆ 1,454.19 ಡಾಲರ್|


ನವದೆಹಲಿ(ನ.27): ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ದರ ಇಂದು ದೇಶೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. 

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.20ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 37,650 ರೂ. ಆಗಿದೆ.

Tap to resize

Latest Videos

undefined

ಮತ್ತೆ ಇಳಿಯಿತು ಬೆಳ್ಳಿ, ಬಂಗಾರ: ಕಷ್ಟವಾಗದು ಸಿಂಗಾರ!

ಈ ಮೂಲಕ ಕಳೆದ ಆರು ದಿನಗಳಿಂದ ಚಿನ್ನದ ದರದಲ್ಲಿ ನಿರಂತರ ಇಳಿಕೆ ದಾಖಲಾಗಿರುವುದು ವಿಶೇಷ.

ಡಿಸೆಂಬರ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಆಭರಣ ದರಗಳು ಇಳಿಕೆ ಕಾಣುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಫೆವರಿಟ್ ಬಂಗಾರ ಇಳಿದಿದೆ: ಖರೀದಿ ಭರದಿಂದ ಸಾಗಿದೆ!

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಶೇ0.45ರಷ್ಟು ದರ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 44,036 ರೂ. ಆಗಿದೆ.

ಇನ್ನುಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಶೇ.0.1 ರಷ್ಟು ಇಳಿಕೆಯಾಗಿದೆ. ಚಿನ್ನದ ದರ ಒಂದು ಔನ್ಸ್’ಗೆ 1,454.19 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!