55 ರೂ.ಯ Jio ಪ್ಲಾನ್‌ಗೆ ಏರ್‌ಟೆಲ್‌ನಿಂದ 15 ರೂ. ಪ್ಯಾಕ್; 168GB ಡೇಟಾ, 18 OTTಗೆ ಆಕ್ಸೆಸ್

Published : Jul 09, 2026, 01:22 PM IST
Jio Airtel

ಸಾರಾಂಶ

ಜಿಯೋ ತನ್ನ ಗ್ರಾಹಕರಿಗಾಗಿ ಕೇವಲ 55 ರೂಪಾಯಿಯ ಹೊಸ ಎಂಟರ್‌ಟೈನ್‌ಮೆಂಟ್ ಪ್ಯಾಕ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿಯೊಂದಿಗೆ 1000ಕ್ಕೂ ಅಧಿಕ ಟಿವಿ ಚಾನೆಲ್‌ಗಳ ಆಕ್ಸೆಸ್ ನೀಡುತ್ತದೆ. ಆದರೆ, ಇದರಲ್ಲಿ ಕಾಲಿಂಗ್ ಅಥವಾ ಡೇಟಾ ಸೌಲಭ್ಯಗಳು ಲಭ್ಯವಿರುವುದಿಲ್ಲ.

ನವದೆಹಲಿ: ಮೊಬೈಲ್‌ನಲ್ಲಿ ಫುಲ್ ಎಂಟರ್‌ಟೈನ್ಮೆಂಟ್ ಪ್ಯಾಕ್ ಪಡೆದುಕೊಳ್ಳಲು ದುಬಾರಿ ರೀಚಾರ್ಜ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ದೇಶದ ಅತಿದೊಡ್ಡ ಮತ್ತು ನಂಬರ್ ಒನ್ ಕಂಪನಿಯಾಗಿರುವ ಜಿಯೋ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ ನಿಮಗೆ ಇಡೀ ದಿನ ಅಂದ್ರೆ 24 ಗಂಟೆಗೂ ಮನರಂಜನೆಯನ್ನು ನೀಡಲಿದೆ. ಹೌದು, ಜಿಯೋ ತನ್ನ ಗ್ರಾಹಕರಿಗಾಗಿ ಕೇವಲ 55 ರೂಪಾಯಿ ಪ್ಲಾನ್ ಪರಿಚಯಿಸಿದೆ.

ಈ ಪ್ಲಾನ್‌ನಲ್ಲಿ ನಿಮಗೆ 1000ಕ್ಕೂ ಅಧಿಕ ಚಾನೆಲ್‌ಗಳ ಆಕ್ಸೆಸ್ ಸಿಗಲಿದೆ. ಇದರಲ್ಲಿ ಕಿಡ್ಸ್, ಲೈಫ್‌ಸ್ಟೈಲ್, ನ್ಯೂಸ್ ಮತ್ತು ಮೂವಿಸ್ ಸೇರಿದಂತೆ genreನ ಟಿವಿ ಚಾನೆಲ್‌ಗಳು ಸೇರಿವೆ. ಇಷ್ಟು ಮಾತ್ರವಲ್ಲ ಮೊಬೈಲ್ ಬಳಕೆದಾರರಿಗೆ ಬೇರೆ ಬೇರೆ 16 ಭಾಷೆಯ ಕಂಟೆಂಟ್ ಮತ್ತು 150ಕ್ಕೂ ಹೆಚ್ಚು ಪ್ರೀಮಿಯಂ ಟಿವಿ ಚಾನೆಲ್ ಆಕ್ಸೆಸ್ ಲಭ್ಯವಾಗುತ್ತದೆ.

30 ದಿನ ವ್ಯಾಲಿಡಿಟಿಯ JioTV Pro Pack

ಜಿಯೋ ನೀಡುತ್ತಿರುವ ವಿಶೇಷ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದಕ್ಕಾಗಿ ನೀವು 55 ರೂಪಾಯಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ಇದು ಕೇವಲ ಎಂಟರ್‌ಟೈನ್ಮೆಂಟ್ ಪ್ಯಾಕ್ ಆಗಿರುವ ಕಾರಣ ಇದರಲ್ಲಿ ನಿಮಗೆ ಕಾಲಿಂಗ್, ವಾಯ್ಸ್ ಮತ್ತು ಡೇಟಾದಂತಹ ಬೆನೆಫಿಟ್ಸ್ ಸಿಗಲ್ಲ. ಜಿಯೋ ಟಿವಿ ಆಪ್ ಮೂಲಕ ಈ ಪ್ಯಾಕ್‌ನ ಲಾಭ ಪಡೆದುಕೊಳ್ಳಬಹುದಾಗಿದೆ. ಇದು ಕೇವಲ ಒಂದು ಡಿವೈಸ್‌ಗೆ ಮಾತ್ರ ಪ್ಲಾನ್ ಆಕ್ಟಿವೇಟ್ ಆಗುತ್ತದೆ.

55 ರೂಪಾಯಿ JioTV Pro Packನಲ್ಲಿ ನಿಮಗೆ ಸೋನಿ ಎಂಟರ್‌ಟೈನ್‌ಮೆಂಟ್, ವಾರ್ನರ್ ಬ್ರದರ್ಸ್, ಡಿಸ್ಕವರಿ ಮತ್ತು ಜಿಯೋಸ್ಟಾರ್‌ ಚಾನೆಲ್‌ಗಳ ಆಕ್ಸೆಸ್ ಸಿಗಲಿದೆ. ಹಾಗೆಯೇ ಸ್ಟಾರ್ ಪ್ಲಸ್, ಸೋನಿ ಸಬ್, ಸನ್ ಟಿವಿ, ಕಲರ್ಸ್ ಎಚ್‌ಡಿ ಮತ್ತು ಇತರ ಹಲವು ಚಾನೆಲ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಆದ್ರೆ ಸೋನಿ ಅಥವಾ ಜಿಯೋಸ್ಟಾರ್‌ನ ಯಾವುದೇ ಸ್ಪೋರ್ಟ್‌ ಚಾನೆಲ್‌ಗಳಿಗೆ ಆಕ್ಸೆಸ್ ಇರಲ್ಲ. ಈ ಪ್ಯಾಕ್ ಅನ್ನು ಜಿಯೋ ಅಪ್ಲಿಕೇಶನ್ ಬಳಸಿ ಆಫ್‌ಲೈನ್‌ನಲ್ಲಿಯೂ ಸಹ ರೀಚಾರ್ಜ್ ಮಾಡಬಹುದು. ರೀಚಾರ್ಜ್ ಮಾಡಿದ ನಂತರ ನೀವು ಜಿಯೋ ಟಿವಿ ಅಪ್ಲಿಕೇಶನ್‌ಗೆ ಹೋಗಿ ನಿಮ್ಮ ರಿಜಿಸ್ಟರ್ ನಂಬರ್‌ನಿಂದ ಸೈನ್ ಇನ್ ಮಾಡಕೊಂಡರೆ ಪ್ಲಾನ್ ಆಕ್ಟಿವೇಟ್ ಆಗುತ್ತದೆ.

ಏರ್‌ಟೆಲ್ ಪ್ಲಾನ್‌ ಏನು?

ಒಂದು ವೇಳೆ ನೀವು ಏರ್‌ಟೆಲ್ ಬಳಕೆದಾರರಾಗಿದ್ರೆ ಸಂಪೂರ್ಣ ಮನರಂಜನೆಗಾಗಿ 838 ರೂಪಾಯಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ 3GB ಡೇಟಾ, Unlimited 5G, ಯಾವುದೇ ಸಂಖ್ಯೆಗೂ ಅನಿಯಮಿತ ಕರೆ ಮತ್ತು ದಿನಕ್ಕೆ ಉಚಿತವಾಗಿ 100 ಎಸ್ಎಂಎಸ್ ಕಳುಹಿಸಬಹುದಾಗಿದೆ. ಈ ಪ್ಲಾನ್ ನಿಮಗೆ ದಿನಕ್ಕೆ 15 ರೂ.ಗೂ ಕಡಿಮೆಯಾಗುತ್ತದೆ. ಈ ಪ್ಲಾನ್‌ನಲ್ಲಿ ಒಟ್ಟು 168GB ಡೇಟಾ ಗ್ರಾಹಕರಿಗೆ ಸಿಗಲಿದೆ.

ಈ ಪ್ಲಾನ್‌ನಲ್ಲಿ ನಿಮಗೆ ಹೆಚ್ಚುವರಿಯಾಗಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ , ಅಮೇಜಾನ್ ಪ್ರೈಮ್ ಲೈಟ್ ಸಬ್‌ಸ್ಕ್ರಿಪ್ಷನ್ ಮತ್ತು ಸೋನಿ ಲಿವ್ ಸೇರಿದಂತೆ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಆಕ್ಸೆಸ್ ಲಭ್ಯವಾಗಲಿದೆ. ಈ ಪ್ಲಾನ್ 12 ತಿಂಗಳ ಕಾಲ ಅಡೋಬ್ ಎಕ್ಸ್‌ಪ್ರೆಸ್‌ನ ಪ್ರೀಮಿಯಂ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ.

ಇದನ್ನೂ ಓದಿ: ಭಾರತದ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ನಮ್ಮ ಬೆಂಗಳೂರು ಅಲ್ಲ, ಮುಂಬೈ ಕೂಡಾ ಅಲ್ಲ

ಇದನ್ನೂ ಓದಿ: Paytm ಪ್ರತಿ ಪಾವತಿಗೂ ಗ್ರಾಹಕರಿಗೆ ಚಿನ್ನದ ನಾಣ್ಯ ಆಫರ್, ಪ್ರತಿಯೊಬ್ಬರಿಗೂ ಸಿಗಲಿದೆ ಬಂಪರ್ ಕೊಡುಗೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಭಾರತದ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ನಮ್ಮ ಬೆಂಗಳೂರು ಅಲ್ಲ, ಮುಂಬೈ ಕೂಡಾ ಅಲ್ಲ..!
ಕೋಟ್ಯಂತರ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಜುಲೈ 15ಕ್ಕೆ ಅಕೌಂಟ್‌ಗೆ ಜಮೆ ಆಗಲಿದೆ 1.44 ಲಕ್ಷ ಕೋಟಿ PF ಬಡ್ಡಿ