
ಮುಂಬೈ(ನ.04): ಹೊಟ್ಟೆ ತುಂಬಿದವನಿಗೆ ಲೋಕದ ಚಿಂತೆ. ಹಸಿದವನಿಗೆ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ. ಮೂರೊತ್ತು ಉಂಡವ ಲೋಕದ ಕಾಳಜಿ ಮಾಡುತ್ತಾನೆ. ಒಂದೊತ್ತಿನ ತುತ್ತಿಗಾಗಿ ಹುಡುಕುವವನಿಗೆ ಅನ್ನ ಬಿಟ್ಟರೆ ಬೇರೇನೂ ಕಾಣದು.
ಅದರಂತೆ ದೇಶದ ವ್ಯಾಪಾರ ಕ್ಷೇತ್ರದ ಉತ್ತುಂಗವನ್ನು ಮುಟ್ಟಿ ಹಾಯಾಗಿರುವ ರಿಲಯನ್ಸ್, ಮೆಟ್ಟಿಲುಗಳನ್ನೇರಲು ತಡಬಡಾಯಿಸುತ್ತಿರುವ ಇತರ ಕಂಪನಿಗಳಿಗೆ ಇದೀಗ ವ್ಯಾಪಾರ ಪಾಠ ಹೇಳಿ ಕೊಡುಲಾರಂಭಿಸಿದೆ.
ಏರ್‌ಟೆಲ್ ಗ್ರಾಹಕರಿಗೆ ಶಾಕ್: ಮಾರ್ಚ್‌ನಿಂದ ಈ ಸೇವೆ ಸ್ವಿಚ್ ಆಫ್!
ಹೌದು, ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ಅಪಾರ ಲಾಭ ಗಳಿಸಿರುವ ರಿಲಯನ್ಸ್ ಜಿಯೋ, ತನ್ನ ಪ್ರತಿಸ್ಪರ್ಧಿ ಏರ್‌ಟೆಲ್ ಹಾಗೂ ವೋಡಾಫೋನ್ ಕಂಪನಿಗಳಿಗೆ ವ್ಯಾಪಾರ ಗುಟ್ಟೊಂದನ್ನು ಹೇಳಿ ಕೊಟ್ಟಿದೆ.
ಸರ್ಕಾರಕ್ಕೆ ಅಪಾರ ಪ್ರಮಾಣದ ಬಾಕಿ ಉಳಿಸಿಕೊಂಡಿರುವ ಏರ್‌ಟೆಲ್ ಹಾಗೂ ವೋಡಾಫೋನ್, ಆರ್ಥಿಕ ಪರಿಹಾರಕ್ಕಾಗಿ ಸರ್ಕಾರದತ್ತಲೇ ದೃಷ್ಟಿ ನೆಟ್ಟಿವೆ. ಆದರೆ ಆರ್ಥಿಕ ಪರಿಹಾರ ಕೊಡುವ ಸರ್ಕಾರದ ನಿರ್ಧಾರವನ್ನು ರಿಲಯನ್ಸ್ ಜಿಯೋ ವಿರೋಧಿಸಿದೆ.
ಜಿಯೋಗೆ ವಂಚನೆ: ಏರ್‌ಟೆಲ್ ವೊಡಾಫೋನ್, ಐಡಿಯಾಗೆ 3050 ಕೋಟಿ ರು. ದಂಡ
ಆದರೆ ಬಾಕಿ ಪಾವತಿಸುವ ರೀತಿ ಕುರಿತು ಏರ್‌ಟೆಲ್ ಹಾಗೂ ವೋಡಾಫೋನ್'ಗೆ ರಿಲಯನ್ಸ್ ಜಿಯೋ ಸಲಹೆ ನೀಡಿದೆ. ಈ ಅಮೂಲ್ಯ ಮಾಹಿತಿ ಏರ್‌ಟೆಲ್ ಹಾಗೂ ವೋಡಾಫೋನ್'ಗೆ ವರವಾಗಬಹುದೇ ಎಂಬುದೇ ಸದ್ಯದ ಕುತೂಹಲ.
ಏರ್‌ಟೆಲ್ ತನ್ನ ಷೇರುಗಳು ಅಥವಾ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಮೂಲಕ ಸುಮಾರು 40 ಸಾವಿರ ಕೋಟಿ ರೂ.(5.7 ಬಿಲಿಯನ್ ಡಾಲರ್) ಸಂಪಾದಿಸಬಹುದಾಗಿದ್ದು, ವೋಡಾಫೋನ್ ಬಾಕಿ ಪಾವತಿಗಾಗಿ ಕಷ್ಟ ಪಡಬೇಕಿದೆ ಎಂದು ರಿಲಯನ್ಸ್ ಜಿಯೋ ಹೇಳಿದೆ.
ಜಿಯೋ ಹವಾ ತಣ್ಣಗಾಗಿಸಲು ವೋಡಾಫೋನ್ ಬ್ರಹ್ಮಾಸ್ತ್ರ!: ಗ್ರಾಹಕರಿಗೆ ಬಂಪರ್!
ಏರ್‌ಟೆಲ್ ತನ್ನ ಇಂಡಸ್ ಮೊಬೈಲ್ ಟವರ್‌ಗಳ ಆಸ್ತಿಯಲ್ಲಿ ಶೇ.15-20ರಷ್ಟು ಇಕ್ವಿಟಿಯನ್ನು ಮಾರಾಟ ಮಾಡುವ ಮೂಲಕ ತನ್ನ ಬಾಕಿಯನ್ನು ಪಾವತಿಸಬಹುದು ಎಂದು ರಿಲಯನ್ಸ್ ಜಿಯೋ ನಿಯಂತರಕ ವ್ಯವಹಾರಗಳ ಅಧ್ಯಕ್ಷ ಕಪೂರ್ ಸಿಂಗ್ ಗುಲಿಯಾನಿ ಸಲಹೆ ನೀಡಿದ್ದಾರೆ.
ಅದರಂತೆ ವೋಡಾಫೋನ್ ಕೂಡ ಇಂಡಸ್ ಮೊಬೈಲ್ ಟವರ್‌ನಲ್ಲಿ ತನ್ನ ಪಾಲನ್ನು ಹೊಂದಿದ್ದು, ಆದರೆ ಇದರಿಂದ ಬಾಕಿ ಪಾವತಿ ಸಾಧ್ಯವಿಲ್ಲ ಎಂದು ಗುಲಿಯಾನಿ ಅಭಿಪ್ರಾಯಪಟ್ಟಿದ್ದಾರೆ.
ಒಂದೇ ವೇದಿಕೆಯಲ್ಲಿ ವ್ಯಾಪಾರ ವೈರಿಗಳು: ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!
ಭಾರ್ತಿ ಏರ್‌ಟೆಲ್ ಹಾಗೂ ವೋಡಾಫೋನ್'ಗೆ ಶೀಘ್ರವೇ 49,990 ಕೋಟಿ ರೂ. ಪಾವತಿಸುವಂತೆ ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.