ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಎಲನ್ ಮಸ್ಕ್ ಹಿಂದಿಕ್ಕಿದ ಅಂಬಾನಿ!

By Suvarna NewsFirst Published Jul 14, 2020, 5:52 PM IST
Highlights

ಕೊರೋನಾ ವೈರಸ್, ಲಾಕ್‌ಡೌನ್‌ನಿಂದ ಉದ್ಯಮಿಗಳು ತೀವ್ರ ನಷ್ಟ ಅನುಭವಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಕ್ಕೂ ಕೊರೋನಾ ಹೊಡೆತ ನೀಡಿದೆ. ಆದರೆ ಈ ಸಂಕಷ್ಟದಲ್ಲೂ ಉದ್ಯಮಿ ಮುಖೇಶ್ ಅಂಬಾನಿ ಆಸ್ತಿ ಎರಿಕೆಯಾಗಿದೆ. ಇಷ್ಟೇ ಅಲ್ಲ ಶ್ರೀಮಂತಿಕೆಯಲ್ಲಿ ಗೂಗಲ್ ಸಂಸ್ಥಾಪಕ, ಟೆಸ್ಲಾ ಕಾರು ಕಂಪನಿ CEO ಎಲನ್ ಮಸ್ಕ್ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

ಮುಂಬೈ(ಜು.14): ರಿಲಯನ್ಸ್ ಇಂಡಸ್ಟ್ರಿ ಚೇರ್ಮೆನ್ ಮುಖೇಶ್ ಅಂಬಾನಿ ಇದೀಗ ವಿಶ್ವದ 6ನೇ ಶ್ರೀಮಂತ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಗೂಗಲ್ ಸಂಸ್ಥಾಪಕರಾದ ಸರ್ಜೆ ಬ್ರಿನ್, ಲ್ಯಾರಿ ಪ್ಯೇಜ್ ಹಾಗೂ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ CEO ಎಲನ್ ಮಸ್ಕ್ ಹಿಂದಿಕ್ಕಿದ್ದಾರೆ. ಸದ್ಯ ಮುಖೇಶ್ ಅಂಬಾನಿ ಒಟ್ಟು ಆಸ್ತಿ 5.44 ಲಕ್ಷ ಕೋಟಿ ರೂಪಾಯಿ(72.4 ಬಿಲಿಯನ್ ಅಮೇರಿಕನ್ ಡಾಲರ್).

ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಕುಬೇರನ ಆಸ್ತಿ ಏರಿದ್ಹೇಗೆ?

ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಮಾತ್ರವಲ್ಲ, ಏಷ್ಯಾದ ಅತ್ಯಂತ ಶ್ರೀಮಂತ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಳೆದ ಮಾರ್ಚ್‌ನಿಂದ ರಿಲಾಯನ್ಸ್ ಇಂಡಸ್ಟ್ರಿ ಷೇರುಗಳು ಬೆಲೆ ಹೆಚ್ಚಳವಾಗಿದೆ. ಪ್ರಮುಖವಾಗಿ ಜಿಯೋ ಪಾಲುದಾರಿಕೆಯಿಂದ ಸಾವಿರ ಸಾವಿರ ಕೋಟಿ ರೂಪಾಯಿಗಳು ಹರಿದು ಬಂದಿದೆ. ಫೇಸ್‌ಬುಕ್, ಕೆಕೆಆರ್, ಇಂಟೆಲ್ ಸೇರಿದಂತೆ ಕಲ ಪ್ರಮುಖ ಕಂಪನಿಗಳು ಜಿಯೋದಲ್ಲಿ ಹಣ ಹೂಡಿಕೆ ಮಾಡಿದೆ.

ಲಾಕ್‌ಡೌನ್‌ನ 58 ದಿನದಲ್ಲಿ 1.68 ಲಕ್ಷ ಕೋಟಿ ರೂ ಸಂಗ್ರಹಿಸಿ ದಾಖಲೆ ಬರೆದ ರಿಲಾಯನ್ಸ್!

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಅಂಬಾನಿ ಶೀಘ್ರದಲ್ಲೇ 5ನೇ ಸ್ಥಾನ ಅಲಂಕರಿಸಲಿದ್ದಾರೆ. ಸದ್ಯ ಅಂಬಾನಿ ಆಸ್ತಿ 72.4 ಬಿಲಿಯನ್ ಅಮೆರಿಕನ್ ಡಾಲರ್. ಇನ್ನು 5ನೇ ಸ್ಥಾನದಲ್ಲಿರುವ ಸ್ಟೀವ್ ಬಾಲ್ಮರ್ ಆಸ್ಟಿ 72.6 ಬಿಲಿಯನ್ ಅಮೆರಿಕನ್ ಡಾಲರ್.

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನದ ಪಡೆದ ಏಷ್ಯಾದ ಏಕೈಕ ಉದ್ಯಮಿ ಅನ್ನೋ ಹಿರಿಮೆಗೂ ಅಂಬಾನಿ ಪಾತ್ರರಾಗಿದ್ದಾರೆ.

click me!