
ನವದೆಹಲಿ(ಜು.11): ಭಾರತಕ್ಕೆ ಕೊರೋನಾ ಕಾಲಿಟ್ಟ ಬೆನ್ನಲ್ಲೇ ದೇಶದಲ್ಲಿ ಲಾಕ್‌ಡೌನ್ ಹೇರಲಾಯಿತು. ಕೊರೋನಾ ಹರಡುವಿಕೆ ವೇಗ ಕಡಿತಗೊಳಿಸಲು ಭಾರತ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಸರಿಸುಮಾರು 4 ಹಂತದ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಸಂಪೂರ್ಣ ಕುಸಿತ ಕಂಡಿತು. ಆರ್ಥಿಕತೆ ಮೇಲಕ್ಕೆತ್ತಲು ಲಾಕ್‌ಡೌನ್ ಸಡಿಲಿಕೆ ಮಾಡಲಾಯಿತು. ಇತ್ತ ಕೊರೋನಾ ಅಟ್ಟಹಾಸ ಆರಂಭಗೊಂಡಿತು. ಕೊರೋನಾ ಮೀತಿ ಮೀರುತ್ತಿರುವ ಸಂದರ್ಭದಲ್ಲೇ RBI ದೇಶದ ಆರ್ಥಿಕತೆ ಕುರಿತು ಸಿಹಿ ಸುದ್ದಿ ನೀಡಿದೆ.
39 ಲಕ್ಷ ಕೋಟಿ ರುಪಾಯಿ ಸಾಲಕ್ಕೆ 6 ತಿಂಗಳ EMI ವಿನಾಯಿತಿ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಹಲವು ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ಆರೋಗ್ಯ ಮುಖ್ಯ. ಹೀಗಾಗಿ ಕಂಟೈನ್ಮೆಂಟ್ ಝೋನ್, ಸೀಲ್‌ಡೌನ್ ಪ್ರದೇಶಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೊರೋನಾ ಮುಂಜಾಗ್ರತ ಕ್ರಮಗಳೊಂದಿಗೆ ಮುನ್ನಡೆಯುವುದು ಸೂಕ್ತ ಎಂದು RBI ಗರ್ವನರ್ ಶ್ರೀಕಾಂತ್ ದಾಸ್ ಹೇಳಿದ್ದಾರೆ.
ಇನ್ಮುಂದೆ ಸಹಕಾರಿ ಬ್ಯಾಂಕ್ ಆರ್‌ಬಿಐ ಅಧೀನಕ್ಕೆ.
7ನೇ SBI ಬ್ಯಾಕಿಂಗ್ ಹಾಗೂ ಎಕನಾಮಿಕ್ ಕಾಂಕ್ಲೇವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀಕಾಂತ್ ದಾಸ್, ಭಾರತದ ಆರ್ಥಿಕತೆ ಕುರಿತು ಮಾತನಾಡಿದರು. ಭಾರತದ ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿದೆ. ಇತ್ತ ಕೊರೋನಾ ವೈರಸ್‌ನಂತಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಭಾರತೀಯ ಬ್ಯಾಂಕ್ ಸಜ್ಜಾಗಿದೆ. ಕೊರೋನಾ ಸಂದರ್ಭದಲ್ಲಿ ಭಾರತದ ಬ್ಯಾಂಕ್‌ಗಳು ಸವಾಲುಗಳನ್ನು ಮೆಟ್ಟಿ ಕಾರ್ಯನಿರ್ವಹಿಸಿದೆ ಎಂದರು.
ಸಾಲ ಮರುಪಾವತಿ ಮುಂದೂಡಿಕೆ ಸೇರಿದಂತೆ ಹಲವು RBI ಕ್ರಮಗಳಿಗೆ ತಕ್ಕಂತೆೆ ಬ್ಯಾಂಕ್‌ಗಳು ಗ್ರಾಹಕರಿಗೆ ಅನುಕೂಲ ಮಾಡಿವೆ. ಇಷ್ಟೇ ಅಲ್ಲ ಹಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ವಿಶೇಷ ಸವಲತ್ತುಗಳನ್ನು ನೀಡಿದೆ. ಕೊರೋನಾ ಜೊತೆಗೆ ಭಾರತದ ಆರ್ಥಿಕತೆ ಚೇತರಿಸುತ್ತಿದೆ ಎಂದು ಶ್ರೀಕಾಂತ್ ದಾಸ್ ಹೇಳಿದರು.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.