ಕೊರೋನಾ ಹೋರಾಟಕ್ಕೆ ರಿಲಯನ್ಸ್ ಪಂಚ ಸೂತ್ರ, 20 ಲಕ್ಷ ಜನರಿಗೆ ಲಸಿಕೆ

Published : Jun 24, 2021, 06:14 PM IST
ಕೊರೋನಾ ಹೋರಾಟಕ್ಕೆ ರಿಲಯನ್ಸ್ ಪಂಚ ಸೂತ್ರ, 20 ಲಕ್ಷ ಜನರಿಗೆ ಲಸಿಕೆ

ಸಾರಾಂಶ

*ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಇಳಿದಿದೆ * ರಿಲಯನ್ಸ್ ನಿಂದ ಅತಿದೊಡ್ಡ ಕಾರ್ಪೋರೇಟ್ ಲಸಿಕಾ ಅಭಿಯಾನ * ತನ್ನ ಸಿಬ್ಬಂದಿ ಮತ್ತು ಕುಟುಂಬದವರಿಗೆ ಲಸಿಕೆ * ಉಚಿತವಾಗಿ ಆಕ್ಸಿಜನ್ ನೀಡಿದ್ದ ಸಂಸ್ಥೆ

ಮುಂಬೈ(ಜೂ. 24)  ಕೊರೋನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಆಕ್ಸಿಜನ್ ನೀಡಿದ್ದ ರಿಲಯನ್ಸ್ ಫೌಂಡೇಶನ್  ಈಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.  ಮಿಷನ್ ಆಕ್ಸಿಜನ್, ಮಿಷನ್ ಕೋವಿಡ್ ಮೂಲಸೌಕರ್ಯ, ಮಿಷನ್ ಅನ್ನ ಸೇವಾ, ಮಿಷನ್ ಎಂಪ್ಲಾಯ್ ಕೇರ್, ಮಿಷನ್ ವ್ಯಾಕ್ಸಿನ್ ಸುರಕ್ಷಾ, ಎಂಬ ಪಂಚಸೂತ್ರಗಳನ್ನು ಪರಿಚಯ ಮಾಡಹೊರಟಿದೆ.

ರಿಲಯನ್ಸ್ ಇಂಡಸ್ಟೀಸ್​ ಲಿಮಿಟೆಡ್​ನ 44 ವಾರ್ಷಿಕ ಸಮ್ಮೇಳನದಲ್ಲಿ (ಎಜಿಎಂ) ಮಾತನಾಡಿದ ನೀತಾ ಅಂಬಾನಿ ಕೊರೋನಾ ವಿರುದ್ಧದ ಹೋರಾಟದ ವಿಚಾರಗಳನ್ನು ತಿಳಿಸಿದ್ದಾರೆ. ಅತ್ಯಾಧುನಿಕ ಮಾದರಿಯಲ್ಲಿ ವೈದ್ಯಕೀಯ ಆಕ್ಸಿಜನ್ ನೀಡಿಕೆಯ ಮಹತ್ವವನ್ನು ಸಾರಿದ್ದಾರೆ.

ನೀತಾ ಬ್ಯೂಟಿ ಸಿಕ್ರೇಟ್ ಏನು? 

ಆಕ್ಸಿಜನ್​ ಬಿಕ್ಕಟ್ಟು ಎದುರಾಗುವವರೆಗೂ ನಾವು ಮೆಡಿಕಲ್​ ಆಕ್ಸಿಜನ್​ ಲಿಕ್ವಿಡ್​ ಅನ್ನು ಉತ್ಪಾದಿಸುತ್ತಿರಲಿಲ್ಲ. ಯಾವಾಗ ಬಿಕ್ಕಟ್ಟು ಎದುರಾಯಿತು ಆಗ ನಾವು ನಮ್ಮ ಜಾಮ್​ನಗರ ಘಟಕದಲ್ಲಿ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದನೆಗೆ ಮುಂದಾದೆವು ಎಂದು ಆಕ್ಸಿಜನ್ ಅಗತ್ಯ ಮನವರಿಕೆ ಮಾಡಿದ್ದಾರೆ.

ನಮ್ಮ ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ.  ರಿಲಯನ್ಸ್​ ಸಂಸ್ಥೆ ದೇಶದ ಶೇ. 11ಕ್ಕಿಂತ ಹೆಚ್ಚಿನ ಮೆಡಿಕಲ್​ ಲಿಕ್ವಿಡ್​ ಆಕ್ಸಿಜನ್​ ಉತ್ಪಾದಿಸುತ್ತಿದೆ. ಅಲ್ಲದೇ ಈ ಆಕ್ಸಿಜನ್​ಗಳನ್ನು ದೇಶಕ್ಕೆ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಂಬಾನಿ ಸಂಸ್ಥೆಯ ಸಿಬ್ಬಂದಿ, ಕುಟುಂಬಕ್ಕೆ ಲಸಿಕೆ

ಮಿಷನ್ ಲಸಿಕೆ ಸುರಕ್ಷಾ  ಅಭಿಯಾನದಲ್ಲಿ ನಿವೃತ್ತ ನೌಕರರು, ಕಂಪನಿ ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಒಳಗೊಂಡಂತೆ ನಮ್ಮ ಕುಟುಂಬದ 20 ಲಕ್ಷ ಜನರಿಗೆ ಲಸಿಕೆ ನೀಡಲು ಆರಂಭಿಸಿದ್ದೇವೆ. ಭಾರತದ ಅತಿದೊಡ್ಡ ಕಾರ್ಪೊರೇಟ್ ವ್ಯಾಕ್ಸಿನೇಷನ್ ಡ್ರೈವ್‌ಗಳಲ್ಲಿ ಇದು ಒಂದು ಎಂದು ನೀತಾ ಮಾಹಿತಿ ನೀಡಿದರು.

ಮಿಷನ್​ ಎಂಪ್ಲೋಯ್​ ಕೇರ್​ ಅಡಿ ನಮ್ಮ ಸಂಸ್ಥೆ ನೌಕರರ ಮತ್ತು ಅವರ ಕುಟುಂಬದ ಕಾಳಜಿ ನಡೆಸುತ್ತಿದ್ದೇವೆ. ಲಾಕ್​ಡೌನ್​ ಆರಂಭದಲ್ಲಿ ನಾವು ಮಿಷನ್​ ಅನ್ನ ಸೇವೆ ಆರಂಭಿಸಿದ್ದು ಜನರ ಜತೆಗೆ ಪ್ರಾಣೀ-ಪಕ್ಷಿಗಳಿಗೂ ಆಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.  ಎರಡನೇ ಅಲೆ ಭೀಕರತೆ ನಡುವೆ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾದಾಗ ಸಂಸ್ಥೆ ಹಲವು ರಾಜ್ಯಗಳಿಗೆ ಉಚಿತ ಆಮ್ಲಜನಕ ನೀಡಿತ್ತು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ? ಹೊಸವರ್ಷದಂದು ಚಿನ್ನದಲ್ಲಿಚಿನ್ನದಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿದ್ರೆ ಮುಂದಿನ ವರ್ಷ ನಿಮ್ಮ ಕೈ ಸೇರುವ ಹಣವೆಷ್ಟು?
ಪ್ರಯಾಣಿಕರನ್ನು ಸತಾಯಿಸಿದ್ದ ಇಂಡಿಗೋಗೆ ಕಿವಿ ಹಿಂಡಿದ ಸರ್ಕಾರ, 458 ಕೋಟಿ ಜಿಎಸ್‌ಟಿ ನೋಟಿಸ್‌ ಜಾರಿ ಮಾಡಿದ ಕೇಂದ್ರ