ಎಫ್ಎಂಸಿಜೆ ಕ್ಷೇತ್ರಕ್ಕೆ ರಿಲಯನ್ಸ್ ಎಂಟ್ರಿ; ಇಂಡಿಪೆಂಡೆನ್ಸ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳ ಬಿಡುಗಡೆ

By Suvarna NewsFirst Published Dec 16, 2022, 5:13 PM IST
Highlights

ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ ಅಂಗಸಂಸ್ಥೆ ರಿಲಯನ್ಸ್‌ ಕನ್ಸೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ 'ಇಂಡಿಪೆಂಡೆನ್ಸ್ ' ಎಂಬ ಬ್ರ್ಯಾಂಡ್ ಅಡಿಯಲ್ಲಿ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಗುಜರಾತ್ ಮಾರುಕಟ್ಟೆಗೆ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಿಗೆ ವಿಸ್ತರಿಸಲಾಗೋದು ಎಂದು ಸಂಸ್ಥೆ ತಿಳಿಸಿದೆ. 

ಅಹಮದಾಬಾದ್ (ಡಿ.16): ಇತ್ತೀಚೆಗೆ ತನ್ನ ಉದ್ಯಮ ಜಗತ್ತನ್ನು ವಿಸ್ತರಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಈಗ  ಎಫ್ ಎಂಸಿಜೆ ಕ್ಷೇತ್ರಕ್ಕೂ ಕಾಲಿಟ್ಟಿದೆ. ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ ಅಂಗಸಂಸ್ಥೆ ರಿಲಯನ್ಸ್‌ ಕನ್ಸೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ 'ಇಂಡಿಪೆಂಡೆನ್ಸ್ ' ಎಂಬ ಬ್ರ್ಯಾಂಡ್ ಅಡಿಯಲ್ಲಿ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಗುಜರಾತ್ ಅಹಮದಾಬಾದ್‌ನ ಅಕ್ಷರಧಾಮದಲ್ಲಿ ಪ್ರಮುಖ್‌ ಸ್ವಾಮಿ ಮಹಾರಾಜ್‌ ಶತಮಾನೋತ್ಸವದ ಆಚರಣೆ ಸಂದರ್ಭದಲ್ಲಿ ಇಂಡಿಪೆಂಡೆನ್ಸ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಗುಜರಾತ್ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳ ಮಾರುಕಟ್ಟೆಗೆ ವಿಸ್ತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಸಕ್ಕರೆ, ಬೇಳೆಕಾಳುಗಳು, ಬಿಸ್ಕೆಟ್ಸ್, ಖಾದ್ಯ ತೈಲ, ಗೋಧಿ ಹಿಟ್ಟು ಸೇರಿದಂತೆ ಆಹಾರ ಧಾನ್ಯಗಳು, ಸಂಸ್ಕರಿಸಿದ ಆಹಾರಗಳು ಹಾಗೂ ಇತರ ನಿತ್ಯದ ಅಗತ್ಯ ವಸ್ತುಗಳು ಇಂಡಿಪೆಂಡೆನ್ಸ್ ಬ್ರ್ಯಾಂಡ್ ಅಡಿಯಲ್ಲಿ ಲಭಿಸಲಿವೆ ಎಂದು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ನಿರ್ದೇಶಕಿ ಇಶಾ ಅಂಬಾನಿ ತಿಳಿಸಿದ್ದಾರೆ. 'ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ಒದಗಿಸೋದು ನಮ್ಮ ಉದ್ದೇಶ' ಎಂದು ಈ ಸಂದರ್ಭದಲ್ಲಿ ಇಶಾ ಅಂಬಾನಿ ತಿಳಿಸಿದ್ದಾರೆ. 

ರಿಲಯನ್ಸ್‌ ಕನ್ಸೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ತನ್ನ ಎಫ್ಎಂಸಿಜಿ ಉದ್ಯಮದ ಪ್ರಾರಂಭಕ್ಕೆ ಗುಜರಾತ್ ಮಾರುಕಟ್ಟೆಯನ್ನು ಆಯ್ಕೆ ಮಾಡಿದೆ.  ಮುಂದಿನ ತಿಂಗಳುಗಳಲ್ಲಿ ಗುಜರಾತ್ ನ ಎಫ್ ಎಂಸಿಜಿ ಚಿಲ್ಲರೆ ವ್ಯಾಪಾರಿಗಳನ್ನು ತಲುಪಲು ಕೂಡ ರಿಲಯನ್ಸ್ ಯೋಜನೆ ರೂಪಿಸಿದೆ. ನಂತರದ ದಿನಗಳಲ್ಲಿ ಇತರ ರಾಜ್ಯಗಳಿಗೆ ಮಾರುಕಟ್ಟೆ ವಿಸ್ತರಣೆ ಮಾಡಲು ನಿರ್ಧರಿಸಿದೆ.

ಇನ್ಫೋಸಿಸ್‌ಗೆ 40ನೇ ವರ್ಷದ ಸಂಭ್ರಮ: ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಮ್ಮ

'ಇಂಡಿಪೆಂಡೆನ್ಸ್ ಬ್ರ್ಯಾಂಡ್ ಭಾರತದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ. ಸ್ಥಳೀಯವಾಗಿ ಸಿದ್ಧಪಡಿಸಿದ ಉತ್ಪನ್ನಗಳೊಂದಿಗೆ ಭಾರತೀಯರ ಸಬಲೀಕರಣದ ಗುರಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇಂಡಿಪೆಂಡೆನ್ಸ್ ಬ್ರ್ಯಾಂಡ್ ಉತ್ಪನ್ನಗಳು ಭಾರತೀಯರ ಮನೆಗಳಲ್ಲಿ ಸ್ಥಾನ ಗಳಿಸುವ ವಿಶ್ವಾಸವಿದೆ. ಈ ಉತ್ಪನ್ನಗಳನ್ನು ಭಾರತದಲ್ಲಿ ಮಾತ್ರ ತಯಾರಿಸುತ್ತಿಲ್ಲ, ಬದಲಿಗೆ ಭಾರತಕ್ಕಾಗಿಯೇ ಉತ್ಪಾದಿಸಲಾಗುತ್ತಿದೆ' ಎಂದು ಇಶಾ ಅಂಬಾನಿ ತಿಳಿಸಿದ್ದಾರೆ. 

ಆಗಸ್ಟ್ ನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿ. 45ನೇ ವಾರ್ಷಿಕ ಸಭೆಯಲ್ಲಿ 'ಎಫ್ಎಂಸಿಜೆ ಸರಕುಗಳು' ಶೀಘ್ರದಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಸಂಸ್ಥೆ ಅಧ್ಯಕ್ಷ ಮುಕೇಶ್ ಅಂಬಾನಿ ಮಾಹಿತಿ ನೀಡಿದ್ದರು. ಈಗಾಗಲೇ ಭಾರತದ ಎಫ್ಎಂಸಿಜೆ ಮಾರುಕಟ್ಟೆಯಲ್ಲಿ ಅನೇಕ ಬ್ರ್ಯಾಂಡ್ ಗಳು ಪ್ರಾಬಲ್ಯ ಸಾಧಿಸಿವೆ. ಹಿಂದೂಸ್ಥಾನ್ ಯುನಿಲಿವರ್ (ಎಚ್ಯುಎಲ್) ಹಾಗೂ ಐಟಿಸಿ ಸೇರಿದಂತೆ ಪ್ರಮುಖ ಎಫ್ ಎಂಸಿಜೆ ಬ್ರ್ಯಾಂಡ್ ಗಳಿಗೆ ರಿಲಯನ್ಸ್ ನ ಇಂಡಿಪೆಂಡೆನ್ಸ್ ಉತ್ಪನ್ನಗಳು ತೀವ್ರ ಸ್ಪರ್ಧೆ ನೀಡುವ ಸಾಧ್ಯತೆ ಇದೆ. 

ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ರಿಲಯನ್ಸ್ ಇಂಡ ಸ್ಟ್ರೀಸ್ ಇತ್ತೀಚೆಗೆ ತನ್ನ ಉದ್ಯಮ (Business) ವಿಸ್ತರಿಸುತ್ತಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಹೂಡಿಕೆ (Invest) ಮಾಡಿದೆ ಕೂಡ. ಕಳೆದ ತಿಂಗಳು  ರಿಲಯನ್ಸ್ ರಿಟೇಲ್ ಸಲೂನ್ ಉದ್ಯಮಕ್ಕೆ ಕಾಲಿಡಲು ಸಜ್ಜಾಗಿದೆ ಎಂಬ ಬಗ್ಗೆ ವರದಿಯಾಗಿತ್ತು.  ಚೆನ್ನೈ ಮೂಲದ  'ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ' ಸಲೂನ್ ಕಂಪನಿಯ ಶೇ.49ರಷ್ಟು ಷೇರುಗಳನ್ನು ಖರೀದಿಸಲು ರಿಲಯನ್ಸ್ ಮುಂದಾಗಿದೆ ಎಂದು ಹೇಳಲಾಗಿತ್ತು. ಅದಾದ ಬಳಿಕ ಜರ್ಮನಿ ಮೂಲದ ಮೆಟ್ರೋ ಎಜೆ ಸಮೂಹದ ಕ್ಯಾಶ್ &  ಕ್ಯಾರಿ ಸಂಸ್ಥೆಯ ಭಾರತದ ವಹಿವಾಟನ್ನು  4,060 ಕೋಟಿ ರೂ.ಗೆ  (500  ಮಿಲಿಯನ್ ಯುರೋಸ್) ಸ್ವಾಧೀನಪಡಿಸಿಕೊಳ್ಳಲು ಸಜ್ಜಾಗಿದೆ ಎಂದು ವರದಿಯಾಗಿತ್ತು. ಇನ್ನೂ ಕೆಲವು ದಿನಗಳ ಹಿಂದೆ  ರಿಲಯನ್ಸ್ ಸಂಸ್ಥೆ ಮೊದಲ ಇನ್ -ಹೌಸ್ ಪ್ರೀಮಿಯಂ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಸ್ಟೋರ್ (Lifestyle store) ಪ್ರಾರಂಭಿಸಿತ್ತು. 

217 ಬಿಲಿಯನ್ ಡಾಲರ್‌ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಆಗಸ್ಟ್ ನಲ್ಲಿ ನೇಮಕ ಮಾಡಿದ್ದರು. 
 

click me!