ಎಲ್ಐಸಿ ಆಯಾ ವಯೋಮಾನ, ಆದಾಯ ಗುಂಪಿಗೆ ಅನುಗುಣವಾಗಿ ಪಾಲಿಸಿಗಳನ್ನು ರೂಪಿಸುತ್ತಲಿರುತ್ತದೆ. ಇದೀಗ ಟೆಕ್ಕಿಗಳಿಗೆ ನ್ಯೂ ಟೆಕ್ ಟರ್ಮ್ ಪ್ಲ್ಯಾನ್ ಎಂಬ ಹೊಸ ಪಾಲಿಸಿಯೊಂದನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಪಾಲಿಸಿಯ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.
Business Desk:ಜೀವ ವಿಮಾ ಪಾಲಿಸಿಗಳು ವ್ಯಕ್ತಿ ಹಾಗೂ ಆತನ ಕುಟುಂಬಕ್ಕೆ ಭದ್ರತೆ ಒದಗಿಸುವ ಜೊತೆಗೆ ಭವಿಷ್ಯಕ್ಕೆ ಆಧಾರವೂ ಆಗಿರುತ್ತವೆ. ಭಾರತದಲ್ಲಿ ಜೀವ ವಿಮೆ ಎಂದ ತಕ್ಷಣ ನೆನಪಾಗುವುದೇ ಭಾರತೀಯ ಜೀವ ವಿಮಾ ನಿಗಮ. ಎಲ್ಲ ವಯೋಮಾನದವರಿಗೂ, ವರ್ಗದವರಿಗೂ ಸರಿಹೊಂದುವಂತಹ ಪಾಲಿಸಿಗಳನ್ನು ಎಲ್ಐಸಿ ರೂಪಿಸುತ್ತಿರುತ್ತದೆ. ಇದೇ ಕಾರಣಕ್ಕೆ ಜೀವ ವಿಮೆ ವಿಚಾರ ಬಂದಾಗ ಮೊದಲು ನೆನಪಾಗುವುದೇ ಎಲ್ ಐಸಿ. ಇದೀಗ ಎಲ್ ಐಸಿ ಟೆಕ್ಕಿಗಳಿಗಾಗಿ ವಿಮಾ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ವಿಮಾ ಯೋಜನೆ ಹೆಸರು ಟೆಕ್ ಟರ್ಮ್ ಪ್ಲ್ಯಾನ್. ಇದು ಪಾಲಿಸಿದಾರನಿಗೆ ಆರ್ಥಿಕ ಸುರಕ್ಷತೆ ಒದಗಿಸುವ ಜೊತೆಗೆ ಆತ ಮರಣ ಹೊಂದಿದ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಕೂಡ ಆರ್ಥಿಕ ಭದ್ರತೆ ನೀಡುತ್ತದೆ. ಟೆಕ್ ಉದ್ಯೋಗಿಗಳ ಅಗತ್ಯಗಳು ಹಾಗೂ ಸಂದರ್ಭಗಳಿಗೆ ಅನುಗುಣವಾಗಿ ಈ ಪಾಲಿಸಿ ರೂಪಿಸಲಾಗಿದೆ. ನಿಮ್ಮ ಆದಾಯ ಹಾಗೂ ಆರ್ಥಿಕ ಬದ್ಧತೆಗಳ ಆಧಾರದಲ್ಲಿ ಪಾಲಿಸಿಯ ಮೊತ್ತ ಹಾಗೂ ಕವರೇಜ್ ಮೊತ್ತವನ್ನು ಆಯ್ಕೆ ಮಾಡಲು ಅವಕಾಶವಿದೆ. ಉದಾಹರಣೆಗೆ ನೀವು ವಾರ್ಷಿಕ 50ಲಕ್ಷ ರೂ. ವೇತನ ಪಡೆಯುತ್ತಿದ್ದರೆ ನೀವು ನಿಮ್ಮ ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು 50ಲಕ್ಷ ರೂ. ಕವರೇಜ್ ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಬಹುದು.
ಪ್ರೀಮಿಯಂ ಎಷ್ಟು?
ಈ ಪಾಲಿಸಿಯ ಪ್ರೀಮಿಯಂ ಕೂಡ ದುಬಾರಿಯೇನಿಲ್ಲ. ಪ್ರೀಮಿಯಂ ಅನ್ನು ನಿಮ್ಮ ವಯಸ್ಸು, ಕವರೇಜ್ ಮೊತ್ತ ಹಾಗೂ ಪಾಲಿಸಿ ಅವಧಿಯನ್ನು ಅವಲಂಬಿಸಿದೆ. ಉದಾಹರಣೆಗೆ ನೀವು 30 ವರ್ಷ ವಯಸ್ಸಿನವರಾಗಿದ್ದು, 50ಲಕ್ಷ ರೂ. ಕವರೇಜ್ ಪಾಲಿಸಿ ಮಾಡಿಸಿದ್ರೆ ನಿಮ್ಮ ಪ್ರೀಮಿಯಂ ವರ್ಷಕ್ಕೆ 4,000 ರೂ. ಪಾವತಿಸಬೇಕು.
ನಿಮ್ಮ ಕೆನರಾ ಬ್ಯಾಂಕ್ ಖಾತೆಯಿಂದ 147.5 ರೂ. ಕಡಿತವಾಗಿದೆಯೇ? ಯಾವ ಕಾರಣಕ್ಕೆ ಗೊತ್ತಾ?
ಹೆಚ್ಚುವರಿ ಪ್ರಯೋಜನಗಳು
ಒಂದು ವೇಳೆ ನೀವು ಮರಣ ಹೊಂದಿದ್ರೆ ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ಒದಗಿಸುವ ಜೊತೆಗೆ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ಕೂಡ ಈ ಯೋಜನೆ ಹೊಂದಿದೆ. ಇದರಲ್ಲಿ ಅಪಘಾತದಲ್ಲಿ ಮರಣ ಹೊಂದಿದ ಸಂದರ್ಭದಲ್ಲಿ ಹೆಚ್ಚುವರಿ ಮೊತ್ತ ಪಾವತಿಯೂ ಸೇರಿದೆ. ಗಂಭೀರ ಆರೋಗ್ಯ ಸಮಸ್ಯೆಯಿದ್ದಾಗ ಈ ಪಾಲಿಸಿಯಿಂದ ಚಿಕಿತ್ಸೆಗೆ ಹಣದ ನೆರವು ಕೂಡ ಸಿಗಲಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಎಲ್ಐಸಿ ಹೊಸ ಟೆಕ್ ಟರ್ಮ್ ಪ್ಲ್ಯಾನ್ (Tech Term plan) ಟೆಕ್ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗಾಗಿ ರೂಪಿಸಲಾಗಿದೆ. ಇವರಲ್ಲಿ ಸಾಫ್ಟ್ ವೇರ್ ಡೆವಲಪರ್ಸ್, ಐಟಿ ಮ್ಯಾನೇಜರ್ ಗಳು ಹಾಗೂ ಇತರ ಟೆಕ್ ಉದ್ಯೋಗಿಗಳು ಸೇರಿದ್ದಾರೆ. ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ಬಯಸುವ ಟೆಕ್ ಉದ್ಯೋಗಿಗಳು ಈ ಪಾಲಿಸಿ ಮಾಡಿಸಬಹುದು. 18 ರಿಂದ 60 ವಯಸ್ಸಿನ ಭಾರತೀಯರು ಈ ಪಾಲಿಸಿ ಮಾಡಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಟೆಕ್ ಟರ್ಮ್ ಪ್ಲ್ಯಾನ್ ಗೆ ಅರ್ಜಿ ಸಲ್ಲಿಸಲು ನೀವು ಸಮೀಪದ ಎಲ್ ಐಸಿ ಶಾಖೆಗೆ ಭೇಟಿ ನೀಡಬಹುದು ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ನೀವು ಕೆಲವು ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಯನ್ನು ನೀಡಬೇಕು. ಹಾಗೆಯೇ ಈ ಪ್ಲ್ಯಾನ್ ಖರೀದಿಸಲು ವೈದ್ಯಕೀಯ ಪರೀಕ್ಷೆಗೆ ಒಳಪಡೋದು ಕೂಡ ಅಗತ್ಯ. ವೈದ್ಯಕೀಯ ಸದೃಢತೆ ಪತ್ರ ಈ ಪ್ಲ್ಯಾನ್ ಗೆ ಅಗತ್ಯ. ನಿಮ್ಮ ಅರ್ಜಿ ಸ್ವೀಕಾರವಾದ ಬಳಿಕ ನೀವು ಪ್ರೀಮಿಯಂ ಪಾವತಿ ಪ್ರಾರಂಭಿಸಬಹುದು. ನಿಮ್ಮ ಕವರೇಜ್ ಕೂಡ ತಕ್ಷಣ ಪ್ರಾರಂಭವಾಗುತ್ತದೆ.
ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ
ಟೆಕ್ಕಿಗಳು ಹಾಗೂ ಕುಟುಂಬಕ್ಕೆ ಈ ಪಾಲಿಸಿ ಆರ್ಥಿಕ ಭದ್ರತೆ ಒದಗಿಸುತ್ತದೆ. ಭವಿಷ್ಯಕ್ಕೆ ಆರ್ಥಿಕ ಸುರಕ್ಷತೆ ಒದಗಿಸುವ ಉದ್ದೇಶದಿಂದ ಹೂಡಿಕೆ ಮಾಡಲು ಬಯಸೋರು ಈ ಪಾಲಿಸಿ ಖರೀದಿಸಬಹುದು.