
ಮುಂಬೈ(ಮೇ.21): ಮಹತ್ವದ ಬೆಳವಣಿಗೆಯೊಂದರಲ್ಲಿ ವಾರ್ಷಿಕ ವಹಿವಾಟು ಲೆಕ್ಕಾಚಾರದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ್ನು ಹಿಂದಿಕ್ಕಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ನಂ.1 ಕಂಪನಿಯಾಗಿ ಹೊರಹೊಮ್ಮಿದೆ.
ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವಹಿವಾಟು 2018-19ರಲ್ಲಿ 6.23 ಲಕ್ಷ ಕೋಟಿಗೆ ತಲುಪಿದ್ದು, ಐಒಸಿಯ ವಾರ್ಷಿಕ ವಹಿವಾಟು 6.17 ಲಕ್ಷ ಕೋಟಿಯಷ್ಟಿದೆ. ಅಲ್ಲದೇ 2019ರ ಆರ್ಥಿಕ ವರ್ಷದಲ್ಲಿ ಅತ್ಯಧಿಕ ಲಾಭಾಂಶ ಗಳಿಸಿದ ಕಂಪನಿ ಎಂಬ ಹೆಗ್ಗಳಿಕೆಗೂ ರಿಲಯನ್ಸ್ ಇಂಡಸ್ಟ್ರಿಸ್ ಪಾತ್ರವಾಗಿದೆ.
2019ರ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಬರೋಬ್ಬರಿ 39,588 ಕೋಟಿ ರೂ. ಲಾಭ ಗಳಿಸಿದ್ದರೆ, ಐಒಸಿ ಕೇವಲ 17.274 ಕೋಟಿ ರೂ. ಲಾಭ ದಾಖಲಿಸಿದೆ. ಇತ್ತೀಚಿನವರೆಗೂ ದೇಶದ ನಂಬರ್ 1 ಸಾರ್ವಜನಿಕ ವಲಯದ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಐಒಸಿ, 2018-19ರ ವಿತ್ತೀಯ ವರ್ಷದಲ್ಲಿ ಕುಸಿತ ಕಂಡಿದ್ದು, ಮತ್ತೊಂದು ಸಾರ್ವಜನಿಕ ವಲಯದ ಸಂಸ್ಥೆಯಾದ ONGC ಈ ಸ್ಥಾನವನ್ನು ಅಲಂಕರಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.