ಭಾರತದ ಉತ್ಪಾದನೆ ಕಡಿಮೆಗೆ ಕಾರಣ ಪತ್ತೆ ಹಚ್ಚಿದ ಐಎಂಎಫ್ ಸಲಹೆಗಾರ್ತಿ

By Web Desk  |  First Published May 20, 2019, 7:19 PM IST

ಭಾರತದ ಅರ್ಥ ವ್ಯವಸ್ಥೆ ಮತ್ತು ಅಭಿವೃದ್ಧಿ  ಪ್ರಮಾಣದ ಬಗ್ಗೆ ಡಾ. ಗೀತಾ ಗೋಪಿನಾಥ್ ಮಾತನಾಡಿದ್ದಾರೆ.


ಬೆಂಗಳೂರು[ಮೇ. 20]  ಗ್ಲೋಬಲೈಷನ್ ಆದ ಮೇಲೆ ಆನೇಕ ರಾಷ್ಟ್ರಗಳ‌ ಆದಾಯ ಮಟ್ಟ ಹೆಚ್ಚಾಗಿದೆ.  ಗ್ಲೋಬಲೈಜೇಶನ್ ಬಳಿಕ ಚೀನಾ ಅಮೇರಿಕಾದ ಆದಾಯವನ್ನು ಮೀರಿಸಿತ್ತು. ಸಣ್ಣ ಪುಟ್ಟ ರಾಷ್ಟ್ರಗಳ ಆದಾಯ ಸಹ 1991ರ ಬಳಿಕ ಹೆಚ್ಚಾಗಿತ್ತು. ಬೇರೆ ರಾಷ್ಟ್ರಗಳಿಗೆ ತುಲನೆ ಮಾಡಿದರೆ ಭಾರತ ಗ್ಲೋಬಲೈಷನ್ ನಲ್ಲಿ ಹಿಂದುಳಿದಿದೆ ಎಂದು  ಐಎಂಎಫ್ ಸಲಹಾಗಾರ್ತಿ, ಹಾರ್ವರ್ಡ್ ವಿವಿ ಪ್ರಾಧ್ಯಾಪಕಿ ಡಾ.ಗೀತಾ ಗೋಪಿನಾಥ್  ಅಭಿಪ್ರಾಯಪಟ್ಟರು.

ಜೆಎಸ್ಎಸ್ ಸುವರ್ಣಮಹೋತ್ಸ ದತ್ತಿ ಉಪನ್ಯಾಸದಲ್ಲಿ ಮಾತನಾಡಿ, ಕೈಗಾರೀಕರಣಕ್ಕೆ ಒತ್ತು ನೀಡುವುದು ಕಡಿಮೆ ಆಗಿದೆ. ಹಾಗಾಗಿ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಯುಎಸ್ ಎ ಹಾಗೂ ಭಾರತದಲ್ಲಿ ನಾನು ಕಂಡೆಕ್ಟ್ ಮಾಡಿದ ಕೆಲವು ಸರ್ವೆಗಳಲ್ಲಿ ಜನ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ ಎಂದರು.

Tap to resize

Latest Videos

ಅಂತರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಉದ್ಯೋಗ ಸೃಷ್ಟಿಯಾಗುತ್ತದೆಂದು ತಿಳಿಸಿದ್ದಾರೆ. ಅನೇಕ ರಾಷ್ಟ್ರಗಳು ಆನೇಕ‌ ಸಂಶೋಧನಗಳನ್ನು ಮಾಡುತ್ತವೆ. ನೂತನ ತಂತ್ರಜ್ಞಾನವನ್ನು ಕಂಡು ಹಿಡಿದ ಅನೇಕ ದೇಶಗಳು ಕೆಲವು ಗೆಲ್ಲುತ್ತವೆ ಮತ್ತೆ ಕೆಲವು ಸೋಲುತ್ತವೆ. ಹೀಗಾಗಿ ಆಯಾ ದೇಶದ ಅಂತರಾಷ್ಟ್ರೀಯ ರಾಜನೀತಿಗಳು ಅತ್ಯಂತ ಮುಖ್ಯ. ಅಂತಾರಾಷ್ಟ್ರೀಯ ವ್ಯಾಪಾರದಿಂದ ಅಭಿವೃದ್ಧಿಯಾಗಬೇಕಾದರೆ ಉತ್ತಮ ಪಾಲಿಸಿಗಳು ಬೇಕಾಗುತ್ತವೆ ಹಾಗಾಗಿ ಅಂತರಾಷ್ಟ್ರೀಯ ವ್ಯವಹಾರಗಳಿಗೆ ಉಪಯೋಗವಾಗುವ ಕಾಯ್ದೆಗಳನ್ನು ತರಬೇಕು ಎಂದು ಅಭಿಪ್ರಾಯಪಟ್ಟರು.

click me!