
ನವದೆಹಲಿ(ಮೇ.21): ಕಳೆದ ಭಾನುವಾರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಪರಿಣಾಮ ಷೇರು ಮಾರುಕಟ್ಟೆ ಮೇಲೂ ಬೀರಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಏಕಾಏಕಿ ಜಿಗಿತ ಕಂಡಿದೆ.
ಇಂದು ಸೆನ್ಸೆಕ್ಸ್ 1,421. 90 ಅಂಕ ಏರಿಕೆಯೊಂದಿಗೆ 39,352.67ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ನಿಫ್ಟಿಯಲ್ಲಿ 421.10 ಪಾಯಿಂಟ್ ಏರಿಕೆಯಾಗುವ ಮೂಲಕ 11,828.25ಕ್ಕೆ ದಿನದ ವಹಿವಾಟು ಮುಗಿದಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರಳ ಬಹುಮತಕ್ಕೂ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷೆ ವರದಿಯಿಂದ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.
ಬ್ಯಾಂಕಿಂಗ್, ಹೌಸಿಂಗ್ ಫೈನಾನ್ಸ್, ಆಟೋಮೊಬೈಲ್ ವಲಯದ ಷೇರುಗಳು ಏರುಗತಿ ಕಂಡಿದ್ದು, ಸ್ಥಿರ ಸರ್ಕಾರ ಬಂದರೆ ಷೇರು ಮಾರುಕಟ್ಟೆ ಏರಿಕೆ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.