ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್‌: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ

Published : Nov 01, 2023, 10:43 AM ISTUpdated : Nov 01, 2023, 10:44 AM IST
ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್‌: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ

ಸಾರಾಂಶ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾದರೂ, ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಗೃಹಬಳಕೆಯ ಎಲ್‌ಪಿಜಿ ಬೆಲೆ ಸ್ಥಿರವಾಗಿದ್ದು, ಯಾವುದೇ ವ್ಯತ್ಯಾಸವಾಗಿಲ್ಲ. ಈಗಾಗಲೇ ಹೋಟೆಲ್‌ಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆ. 

ನವದೆಹಲಿ (ನವೆಂಬರ್ 1, 2023): ತೈಲ ಮಾರುಕಟ್ಟೆ ಕಂಪನಿಗಳು (OMCs) ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು 100 ರೂ. ಹೆಚ್ಚಿಸಿದೆ. ಈ ಮೂಲಕ ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆಯಾಗಿದೆ. ಪರಿಷ್ಕೃತ ದರ ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಈಗಾಗಲೇ ಹೋಟೆಲ್‌ಗಳು ಗ್ರಾಹಕರಿಗೆ ತಿಂಡಿ - ಕಾಫಿಯ ಬೆಲೆ ಹೆಚ್ಚಿಸಿದ್ದು, ಮತ್ತೊಮ್ಮೆ ದರ ಹೆಚ್ಚಾದರೆ ಜನಸಾಮಾನ್ಯರಿಗೂ ಇದು ತಟ್ಟುತ್ತದೆ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾದರೂ, ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಗೃಹಬಳಕೆಯ ಎಲ್‌ಪಿಜಿ ಬೆಲೆ ಸ್ಥಿರವಾಗಿದ್ದು, ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಇತ್ತೀಚಿನ ಬೆಲೆ ಏರಿಕೆಯ ನಂತರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,833 ರೂ. ಆಗಿದೆ. ಇತರ ಪ್ರಮುಖ ನಗರಗಳಲ್ಲಿ, ಅದೇ ಸಿಲಿಂಡರ್‌ಗೆ ಕ್ರಮವಾಗಿ ಕೋಲ್ಕತ್ತಾದಲ್ಲಿ ₹1,943, ಮುಂಬೈನಲ್ಲಿ ₹1,785, ಬೆಂಗಳೂರಿನಲ್ಲಿ ₹1,914.50 ಮತ್ತು ಚೆನ್ನೈನಲ್ಲಿ ₹1,999.50 ಆಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಮೋದಿ ಸರ್ಕಾರದ ಮತ್ತೊಂದು ಬಂಪರ್‌: ಎಲ್‌ಪಿಜಿ ಆಯ್ತು.. ಶೀಘ್ರದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲೂ ಭಾರಿ ಕಡಿತ!

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಏರಿಕೆ ಕಂಡರೂ, ಪ್ರಾಥಮಿಕವಾಗಿ ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಗೃಹಬಳಕೆಯ ಎಲ್‌ಪಿಜಿಯ ಬೆಲೆ ಯಾವುದೇ ವ್ಯತ್ಯಾಸವಾಗಿಲ್ಲ. ಕೋಲ್ಕತ್ತಾದಲ್ಲಿ ಗೃಹ ಬಳಕೆಯ ಸಿಲಿಂಡರ್‌ 929ಕ್ಕೆ ಲಭ್ಯವಿದೆ. ಮುಂಬೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹902.5 ಮತ್ತು ಚೆನ್ನೈನಲ್ಲಿ ₹918.5ಕ್ಕೆ ಮಾರಾಟವಾಗುತ್ತಿದೆ. ಹಾಗೂ, ದೆಹಲಿಯಲ್ಲಿ, 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 903 ರೂ. ಆಗಿದೆ.

ಅಕ್ಟೋಬರ್ 4 ರಂದು, ಕೇಂದ್ರ ಕ್ಯಾಬಿನೆಟ್ ಅಡುಗೆ ಅನಿಲ ಸಬ್ಸಿಡಿ ಹೆಚ್ಚಿಸಿತ್ತು. ಸರಿಸುಮಾರು 96 ಮಿಲಿಯನ್ ಕಡಿಮೆ ಆದಾಯದ ಕುಟುಂಬಗಳಿಗೆ ಪ್ರತಿ ಸಿಲಿಂಡರ್‌ಗೆ ₹200 ರಿಂದ ₹300 ಕ್ಕೆ ಸಬ್ಸಿಡಿ ಹೆಚ್ಚಿಸಿತು. ಐದು ರಾಜ್ಯಗಳಲ್ಲಿ ಸಮೀಪಿಸುತ್ತಿರುವ ಅಸೆಂಬ್ಲಿ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಈ ನಿರ್ಧಾರ ಜಾರಿಗೆ ಬಂದಿದೆ.

ಇದನ್ನೂ ಓದಿ: ಬಂಪರ್‌ ಆಫರ್‌: ಈ ರಾಜ್ಯದಲ್ಲಿ 428 ರೂ. ಗೆ ಸಿಗುತ್ತೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್!

ಹೆಚ್ಚುವರಿ ಸಬ್ಸಿಡಿಗಳನ್ನು ಒದಗಿಸುವ ಸರ್ಕಾರದ ಕ್ರಮವು ಗ್ರಾಮೀಣ ಮಹಿಳೆಯರನ್ನು ಉದ್ದೇಶಿಸಿ ಬಂದಿದೆ. ಹೆಚ್ಚುವರಿ 7.5 ಮಿಲಿಯನ್ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯೋಜನೆಯನ್ನು ವಿಸ್ತರಿಸಲು ಅದರ ಅನುಮೋದನೆಯ ಸ್ವಲ್ಪ ಸಮಯದ ನಂತರ ಬರುತ್ತದೆ. ಈ ವಿಸ್ತರಣೆಯು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 103.5 ಮಿಲಿಯನ್‌ಗೆ (10 ಕೋಟಿ 35 ಲಕ್ಷ) ಹೆಚ್ಚಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ.

ಇದಕ್ಕೂ ಮುನ್ನ ಆಗಸ್ಟ್ 29 ರಂದು, ರಕ್ಷಾ ಬಂಧನದ ಪೂರ್ವಭಾವಿಯಾಗಿ ಮಹಿಳೆಯರಿಗೆ ಉಡುಗೊರೆಯಾಗಿ 14.2 ಕೆಜಿ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ಕೇಂದ್ರ ಸಚಿವ ಸಂಪುಟವು 200 ರೂ. ಕಡಿತಗೊಳಿಸಿತ್ತು. ಏರುತ್ತಿರುವ ಹಣದುಬ್ಬರದ ಬಗ್ಗೆ ಕೇಂದ್ರ ಸರ್ಕಾರ ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Good News: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 158 ರೂ. ಇಳಿಕೆ; ಪರಿಷ್ಕೃತ ಬೆಲೆ ವಿವರ ಹೀಗಿದೆ..

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!