Personal Finance : ನಿರುದ್ಯೋಗಿಗಳಿಗೆ ಖುಷಿ ಸುದ್ದಿ, ಮತ್ತೆ ಶುರುವಾಗಿದೆ ನೇಮಕಾತಿ

Published : Feb 07, 2023, 12:19 PM IST
Personal Finance : ನಿರುದ್ಯೋಗಿಗಳಿಗೆ ಖುಷಿ ಸುದ್ದಿ, ಮತ್ತೆ ಶುರುವಾಗಿದೆ ನೇಮಕಾತಿ

ಸಾರಾಂಶ

ಒಂದಾದ್ಮೇಲೆ ಒಂದರಂತೆ ಅನೇಕ ಐಟಿ ಕಂಪನಿಗಳು ಉದ್ಯೋಗಿಗಳನ್ನು ಹೊರ ಹಾಕಿವೆ. ಇದು ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿಸಿದ್ದಲ್ಲೆ ಮುಂದೇನು ಎಂಬ ಭಯವನ್ನು ಹುಟ್ಟುಹಾಕಿದೆ. ಈ ಮಧ್ಯೆ ಸ್ಟಾರ್ಟ್ ಅಪ್ ಕಂಪನಿಗಳು ನೇಮಕಾತಿ ಶುರು ಮಾಡಿ ಸ್ವಲ್ಪ ನೆಮ್ಮದಿ ನೀಡಿವೆ.   

ಕಳೆದ ಕೆಲ ತಿಂಗಳಲ್ಲಿ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹಿಂಬಡ್ತಿ ಪಡೆದವರ ಸಂಖ್ಯೆಯೂ ಸಾಕಷ್ಟಿದೆ. ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಜೀವ ಕೈನಲ್ಲಿ ಹಿಡಿದು ಕುಳಿತಿದ್ರು. ಯಾವಾಗ ಕಂಪನಿ ಕೈ ಎತ್ತುತ್ತೆ ಎನ್ನುವ ಭಯ  ಅವರನ್ನು ಕಾಡ್ತಿತ್ತು. ಆದ್ರೀಗ ನೆಮ್ಮದಿ ಸುದ್ದಿಯೊಂದು ಬಂದಿದೆ. ನಿರುದ್ಯೋಗಿಗಳು ಖುಷಿಯಾಗುವ ಸುದ್ದಿ ಇದಾಗಿದೆ.

ಮೂರ್ನಾಲ್ಕು ತಿಂಗಳ ನಂತ್ರ ಸ್ಟಾರ್ಟ್ ಅಪ್ (Start Up) ಕಂಪನಿಗಳು ಉದ್ಯೋಗ (Employment) ನೇಮಕಾತಿ ಶುರು ಮಾಡಿವೆ. ಸ್ಟಾರ್ಟ್ ಅಪ್ ಕಂಪನಿಗಳು ಪ್ರತಿಭಾವಂತ ಅಭ್ಯರ್ಥಿಗಳನ್ನು ಹುಡುಕ್ತಿದೆ ಎಂದು ತಜ್ಞರು ಹೇಳಿದ್ದಾರೆ. ಹೊಸ ಉದ್ಯೋಗಿಗಳ ಹುಡುಕಾಟ ನಡೆಸ್ತಿರುವ ಕಂಪನಿಯಲ್ಲಿ ಬೈಜುಸ್,ಫಿಸಿಕ್ಸ್‌ವಾಲಾ ಮತ್ತು ಝೊಮಾಟೊ ಸೇರಿದೆ.  ಮಾಹಿತಿ ಪ್ರಕಾರ, ಜನವರಿಯ ಆರಂಭದ ಕೆಲ ವಾರಗಳಲ್ಲಿ ಸುಮಾರು 101 ಟೆಕ್ ಕಂಪನಿಗಳು 25, 436 ನೌಕರರನ್ನು ಕೆಲಸದಿಂದ ವಜಾ ಮಾಡಿತ್ತು. ಟೆಕ್ ಕಂಪನಿ ಹಾಗೂ ಸ್ಟಾರ್ಟ್ ಅಪ್ ಕಂಪನಿಗಳು ಹಿಂದಿನ ಕೆಲ ವರ್ಷಗಳಲ್ಲಿ 17,000 ಕ್ಕಿಂತಲೂ ಹೆಚ್ಚು ನೌಕರರನ್ನು ಕೆಲಸದಿಂದ ತೆಗೆದಿತ್ತು. ಸ್ಟಾರ್ಟ್‌ಅಪ್‌ಗಳು ಆಗಾಗ್ಗೆ ಮಧ್ಯಂತರದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತವೆ ಮತ್ತು ಪುನಃ ನೇಮಿಸಿಕೊಳ್ಳುತ್ತವೆ. ಇದರಿಂದಾಗಿ ಕಂಪನಿಯಲ್ಲಿ ಹೆಚ್ಚಿನ ಏರುಪೇರು ಕಂಡುಬರುತ್ತದೆ. 

ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ: ಹೆಣ್ಣುಮಕ್ಕಳ ಭವಿಷ್ಯಕ್ಕೆ ಯಾವ ಯೋಜನೆ ಬೆಸ್ಟ್?

ಹೈಬ್ರಿಡ್ ಉದ್ಯೋಗ : ಕೆಲಸದ ಸ್ಥಳಗಳು ಹೈಬ್ರಿಡ್ ಆಗುತ್ತಿರುವ ಸಮಯದಲ್ಲಿ  ಹೆಚ್ಚಿನ ಸಂಖ್ಯೆಯ ಕಂಪನಿಗಳು ಅಭ್ಯರ್ಥಿಗಳ ನೇಮಕಾತಿಯನ್ನು ಹೈಬ್ರಿಡ್ ರೀತಿಯಲ್ಲೇ ಮಾಡ್ತಿದೆ. ಐಟಿ, ಬಿಎಫ್ ಎಸ್ ಐ, ಎಫ್ ಎಂಸಿಜಿ, ಚಿಲ್ಲರೆ ವ್ಯಾಪಾರ, ಇಕಾಮರ್ಸ್, ಟೆಲಿಕಾಂ, ಆರೋಗ್ಯ, ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲ ಕಂಪನಿಗಳು ಹೈಬ್ರಿಡ್ ಉದ್ಯೋಗ ಮಾದರಿ ಅಳವಡಿಸಿಕೊಂಡಿವೆ. ಇದು ಕಂಪನಿ ಖರ್ಚನ್ನು ಕಡಿಮೆ ಮಾಡುವ ಕಾರಣ ನೇಮಕಾತಿ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ. 

ಈಗ ಡೆಲ್ ಸರದಿ  : ಜೊಮೊಟೊ ಕೆಲ ದಿನಗಳ ಹಿಂದೆ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಆದ್ರೆ ಬೇರೆ ಕೆಲಸಕ್ಕೆ 800ಕ್ಕೂ ಹೆಚ್ಚು ಉದ್ಯೋಗಿಗಳನ್ನು ಜೊಮೊಟೊ ನೇಮಿಸಿಕೊಳ್ತಿದೆ. ಇನ್ನು ಕಾರ್ಸ್ 24, ಹಿಂದಿನ ವರ್ಷ 600 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. 500 ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿಕೊಳ್ಳಲಿದ್ದು, ಅದಕ್ಕೆ ತಯಾರಿ ನಡೆದಿದೆ ಎಂದು ಕಾರ್ಸ್ 24 ಹೇಳಿದೆ.  ಇನ್ನು ಬೈಜುಸ್, 3500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊರ ಹಾಕಿದೆ. ಬೈಜುಸ್ ನಲ್ಲಿ 50 ಸಾವಿರ ಉದ್ಯೋಗಿಗಳಿದ್ದು, ಇನ್ನೂ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳೋದಾಗಿ ಅದು ಹೇಳಿದೆ. ಡೆಲ್ ಈಗ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. 600ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ವೇತನ ಕಡಿಮೆ ಕೇಳ್ತಿದ್ದಾರೆ ಉದ್ಯೋಗಿಗಳು : ಸ್ಟಾರ್ಟ್ ಅಪ್ ಕಂಪನಿಗಳ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರ್ತಿದೆ. ಉದ್ಯೋಗಿಗಳು ಶೇಕಡಾ 50ರಿಂದ 60ರಷ್ಟು ವೇತನ ವೃದ್ಧಿಯ ಬೇಡಿಕೆಯಿಡ್ತಿದ್ದಾರೆ. ಹಿಂದೆ ಶೇಕಡಾ 100ರಷ್ಟು ವೇತನ ವೃದ್ಧಿ ಮಾಡುವಂತೆ ಬೇಡಿಕೆ ಇಡುತ್ತಿದ್ದರು. 

ಇಂಥ ಉದ್ಯೋಗಿಗಳನ್ನು ಹುಡುಕ್ತಿದೆ ಕಂಪನಿ : ಸ್ಟಾರ್ಟ್ ಅಪ್ ಕಂಪನಿಗಳು ಅಭ್ಯರ್ಥಿಯ ವಿದ್ಯಾರ್ಹತೆ ಮಾತ್ರ ನೋಡ್ತಿಲ್ಲ. ಪ್ರತಿಭಾವಂತ ಹಾಗೂ ಅತ್ಯಧಿಕ ಉತ್ಪಾದನೆ ಮಾಡುವ ಜನರನ್ನು ಹುಡುಕ್ತಿದೆ. ಬದಲಾವಣೆಯನ್ನು ಬೇಗ ಸ್ವೀಕರಿಸಿ ಕಂಪನಿಗೆ ನೆರವಾಗುವ ಉದ್ಯೋಗಿಗಳನ್ನು ಸ್ಟಾರ್ಟ್ ಅಪ್ ಕಂಪನಿಗಳು ಹುಡುಕ್ತಿವೆ.  ಇತ್ತೀಚೆಗೆ ಟಾಪ್ 60 ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುತ್ತಿರುವ 60 ಕ್ಕೂ ಹೆಚ್ಚು ಹಜೀರ್ ಉದ್ಯೋಗಿಗಳ ಸಮೀಕ್ಷೆಯನ್ನು ನಡೆಸಿದ ನಂತರ CIEL ಈ ತೀರ್ಮಾನಕ್ಕೆ ಬಂದಿದೆ.

ನೀವು ಈಗ ಸ್ವಂತ ಮನೆ ಖರೀದಿಸಲು ಆರ್ಥಿಕವಾಗಿ ಸಶಕ್ತರಾ? ಪತ್ತೆ ಹಚ್ಚೋದು ಹೇಗೆ?

ಪಿಡಬ್ಲ್ಯುಸಿಯಲ್ಲಿ ನಡೆಯಲಿದೆ ನೇಮಕಾತಿ :  ಪ್ರೈಸ್ ವಾಟರ್ ಹೌಸ್ ಕೂಪರ್ ಮುಂದಿನ ಐದು ವರ್ಷಗಳಲ್ಲಿ ಅತಿ ಹೆಚ್ಚು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. 30 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಘೋಷಣೆ ಮಾಡಿದೆ. 2028ರ ಸುಮಾರಿ ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 80 ಸಾವಿರಕ್ಕೆ ಏರಿಸುವ ಗುರಿಯನ್ನು ಕಂಪನಿ ಹೊಂದಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!