ಡಿಜಿಟಲ್ ಸಾಲಕ್ಕೆ ಆರ್ ಬಿಐ ಮೂಗುದಾರ; ಕಠಿಣ ಮಾರ್ಗಸೂಚಿ ಬಿಡುಗಡೆ

By Suvarna News  |  First Published Aug 11, 2022, 11:42 AM IST

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಹಣಕಾಸು ವ್ಯವಹಾರ ಜನಪ್ರಿಯತೆ ಗಳಿಸಿದ್ದೇನೂ ನಿಜ. ಆದರೆ, ಅದರ ಜೊತೆಗೆ ವಂಚನೆ ಪ್ರಕರಣಗಳು ಕೂಡ ಹೆಚ್ಚಿವೆ. ಅದರಲ್ಲೂ ಡಿಜಿಟಲ್ ಸಾಲದ ಹೆಸರಿನಲ್ಲಿ ಮೋಸ ಹೋದವರ ಸಂಖ್ಯೆ ಹೆಚ್ಚೇ ಇದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಸಾಲ ನೀಡುವ ಪ್ರಕ್ರಿಯೆಯ ನಿಯಂತ್ರಣಕ್ಕೆ ಆರ್ ಬಿಐ ಮುಂದಾಗಿದ್ದು, ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. 


ನವದೆಹಲಿ (ಜು.11): ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜನಪ್ರಿಯತೆ ಗಳಿಸುತ್ತಿರುವ ಬೆನ್ನಲ್ಲೇ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ಸಾಲ ನಿಯಂತ್ರಣಕ್ಕೆ ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI),ಈ ಸಂಬಂಧ ಬುಧವಾರ (ಜು.10) ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಎಲ್ಲ ಸಾಲಗಳ ವಿತರಣೆಗಳು ಹಾಗೂ ಮರುಪಾವತಿ ಸಾಲಗಾರನ ಬ್ಯಾಂಕ್ ಖಾತೆಗಳು ಹಾಗೂ ನಿಯಂತ್ರಿತ ಸಂಸ್ಥೆ (ಆರ್ ಇ) ನಡುವೆಯೇ ಕಾರ್ಯಗತವಾಗಬೇಕು. ಸಾಲ ಸೇವೆ ಪೂರೈಕೆ ಅಥವಾ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ಪೂಲ್ ಖಾತೆಯಿಂದ ಈ ಕಾರ್ಯ ನಡೆಯಬಾರದು ಎಂದು ಆರ್ ಬಿಐ ತಿಳಿಸಿದೆ. ಇನ್ನು ಕ್ರೆಡಿಟ್ ವರ್ಗಾವಣೆ ಪ್ರಕ್ರಿಯೆಗೆ ಎಲ್ ಎಸ್ ಪಿಗೆ ಯಾವುದೇ ಶುಲ್ಕ ಪಾವತಿಸಬೇಕಿದ್ರೂ ಅದನ್ನು ನಿಯಂತ್ರಿತ ಸಂಸ್ಥೆ ನೇರವಾಗಿ ಪಾವತಿಸಬೇಕೆಯೇ ಹೊರತು ಸಾಲ ಪಡೆದವರಲ್ಲ. ಡಿಜಿಟಲ್ ಸಾಲಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅಧ್ಯಯನ ನಡೆಸಲು ಆರ್ ಬಿಐ 2021ರ ಜನವರಿಯಲ್ಲಿ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಡಿಜಿಟಲ್ ಸಾಲಕ್ಕೆ ಸಂಬಂಧಿಸಿ ಕಠಿಣ ನಿಯಮಗಳನ್ನು ರೂಪಿಸಲು ನವೆಂಬರ್ ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ ಡಿಜಿಟಲ್ ಸಾಲ ನೀಡುವ ಅಪ್ಲಿಕೇಷನ್ ಗಳನ್ನು ನೋಡಲ್ ಏಜೆನ್ಸಿಯಿಂದ ಪರಿಶೀಲನೆಗೊಳಪಡಿಸಬೇಕು ಎಂದು ಕೂಡ ಶಿಫಾರಸ್ಸು ಮಾಡಲಾಗಿದೆ. 

ಡಿಜಿಟಲ್ ಸಾಲದ ಬಗ್ಗೆ ಅಧ್ಯಯನ ನಡೆಸಿದ ಸಮಿತಿಯ ಕೆಲವು ಶಿಫಾರಸ್ಸುಗಳನ್ನು ಆರ್ ಬಿಐ ಸ್ವೀಕರಿಸಿದೆ. ಇನ್ನೂ ಕೆಲವನ್ನು ಇನ್ನಷ್ಟು ಪರಿಶೀಲನೆಗೊಳಪಡಿಸಲಾಗೋದು ಎಂದು ಆರ್ ಬಿಐ ಆಗಸ್ಟ್ 10ರಂದು ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

Tap to resize

Latest Videos

ಗೃಹ ಸಚಿವಾಲಯದ ಮಹತ್ವದ ನಿರ್ಧಾರ, ಉದ್ಯಮಿ ಗೌತಮ್‌ ಅದಾನಿಗೆ Z ವರ್ಗದ ಭದ್ರತೆ!

ಮೂರು ವರ್ಗದ ಡಿಜಿಟಲ್ ಸಾಲದಾತರು
ಡಿಜಿಟಲ್ ಸಾಲದಾತರನ್ನು (Digital lenders)ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಮೊದಲನೇ ವರ್ಗದ ಸಾಲದಾತರು ಆರ್ ಬಿಐ (RBI) ನಿಯಂತ್ರಣಕ್ಕೊಳಪಡುವ ಜೊತೆಗೆ ಸಾಲದ ವ್ಯವಹಾರಗಳನ್ನು ನಡೆಸಲು ಅನುಮತಿ ಪಡೆದಿರುತ್ತಾರೆ. ಎರಡನೇ ವರ್ಗದ ಸಾಲದಾತ ಸಂಸ್ಥೆಗಳು ಆರ್ ಬಿಐ ನಿಯಂತ್ರಣಕ್ಕೊಳಪಡೋದಿಲ್ಲ. ಆದರೆ, ಇತರ ಶಾಸನಬದ್ಧ ಅಥವಾ ನಿಯಂತ್ರಿತ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಇನ್ನು ಮೂರನೇ ವರ್ಗದ ಸಾಲದಾತ ಸಂಸ್ಥೆಗಳು ಶಾಸನಬದ್ಧ ಅಥವಾ ನಿಯಂತ್ರಿತ ನಿಬಂಧನೆಗಳಿಂದ ಹೊರಗೆ ಕಾರ್ಯನಿರ್ವಹಿಸುತ್ತವೆ. 

ಆರ್ ಬಿಐ ಮಾರ್ಗಸೂಚಿಗಳು ಹೀಗಿವೆ:
*ಸಾಲದ ಒಪ್ಪಂದವನ್ನು ಕಾರ್ಯಗತಗೊಳಿಸುವ ಮುನ್ನ ಸಾಲಗಾರನಿಗೆ ಪ್ರಮಾಣೀಕರಿಸಿದ ಕೀ ಫ್ಯಾಕ್ಟ್ ಸ್ಟೇಟ್ಮೆಂಟ್  (KFS) ಒದಗಿಸಬೇಕು. ಇನ್ನು ಡಿಜಿಟಲ್ ಸಾಲದ ಸಂಪೂರ್ಣ ವೆಚ್ಚಗಳ ಮಾಹಿತಿಯನ್ನು ವಾರ್ಷಿಕ ಶೇಕಡವಾರು ದರ (APR) ರೂಪದಲ್ಲಿ KFS ಭಾಗವಾಗಿ ಸಾಲದಾತ ಸಂಸ್ಥೆಗಳು ಸಾಲಗಾರನಿಗೆ ನೀಡಬೇಕು. 
*ಇನ್ನು ಸಾಲಗಾರರ ಅನುಮತಿಯಿಲ್ಲದೆ ಕ್ರೆಡಿಟ್ ಮಿತಿಯಲ್ಲಿ ಯಾವುದೇ ಸ್ವಯಂಚಾಲಿತ ಹೆಚ್ಚಳವನ್ನು ನಿಷೇಧಿಸಲಾಗಿದೆ. ಕೂಲಿಂಗ್ ಆಫ್ ಅಥವಾ ಲುಕ್ ಆಫ್ ಅವಧಿಯಲ್ಲಿ ಸಾಲಗಾರರು ಅಸಲನ್ನು ಪಾವತಿಸುವ ಮೂಲಕ ಡಿಜಿಟಲ್ ಸಾಲಗಳನ್ನು ಕ್ಲೋಸ್ ಮಾಡಬಹುದು. ಇಂಥ ಸಂದರ್ಭದಲ್ಲಿ ಸಾಲದ ಒಪ್ಪಂದದ ಭಾಗವಾಗಿ ಅನುಪಾತದ ಎಪಿಆರ್ ಅನ್ನು ಯಾವುದೇ ದಂಡವಿಲ್ಲದೆ ನೀಡಲಾಗುತ್ತದೆ.

1,508 ರೂ.ಗೆ ವಿಮಾನದಲ್ಲಿ ಪ್ರಯಾಣಿಸಿ: ಗೋ ಫಸ್ಟ್‌ನಿಂದ ಇಂಡಿಪೆಂಡೆನ್ಸ್ ಡೇ ಸೇಲ್‌

*ಫಿನ್ ಟೆಕ್ ಅಥವಾ ಡಿಜಿಟಲ್ ಸಾಲಕ್ಕೆ ಸಂಬಂಧಿಸಿದ ಗ್ರಾಹಕರ ದೂರುಗಳ ನಿರ್ವಹಣೆಗೆ ನಿಯಂತ್ರಿತ ಸಂಸ್ಥೆಗಳು ಹಾಗೂ ಎಲ್ ಎಸ್ ಪಿಗಳು ಕುಂದುಕೊರತೆ ವಿಚಾರಣೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಈ ಅಧಿಕಾರಿಯು ಡಿಜಿಟಲ್ ಸಾಲ ಒದಗಿಸುವ ಮೊಬೈಲ್ ಅಪ್ಲಿಕೇಷನ್ ಗಳ ವಿರುದ್ಧದ ದೂರುಗಳನ್ನು ನಿರ್ವಹಿಸಬೇಕು. ಈ ಅಧಿಕಾರಿಯ ಸಂಪರ್ಕ ಮಾಹಿತಿಯನ್ನು ಡಿಜಿಟಲ್ ಸಾಲದ ಅಪ್ಲಿಕೇಷನ್ ಗಳಲ್ಲಿ ಹಾಗೂ ನಿಯಂತ್ರಿತ ಸಂಸ್ಥೆ ವೆಬ್ ಸೈಟ್ ಳಲ್ಲಿ ಪ್ರಕಟಿಸಬೇಕು.
*ಸಾಲಗಾರ ನೀಡಿದ ಯಾವುದೇ ದೂರನ್ನು ನಿಗದಿತ ಅವಧಿಯಾದ 30 ದಿನಗಳೊಳಗೆ ಸಂಬಂಧಿತ ಸಂಸ್ಥೆ ಪರಿಹರಿಸದಿದ್ರೆ ಆತ ಅಥವಾ ಆಕೆ ರಿಸರ್ವ್ ಬ್ಯಾಂಕ್ ಇಂಟಿಗ್ರೇಟೆಡ್ ಒಂಬುಡ್ಸ್ ಮನ್ ಯೋಜನೆಯಡಿಯಲ್ಲಿ ದೂರು ದಾಖಲಿಸಬಹುದು. 
*ಡಿಎಲ್ ಎಗಳು ಸಂಗ್ರಹಿಸಿದ ದತ್ತಾಂಶಗಳು ಅಗತ್ಯ ಆಧಾರಿತವಾಗಿದ್ದು, ಸ್ಪಷ್ಟ ಆಡಿಟ್ ಟ್ರಯಲ್ ಗಳನ್ನು ಹೊಂದಿರುವ ಜೊತೆಗೆ ಸಾಲಗಾರನ ಪೂರ್ವಾನುಮತಿ ಪಡೆದಿರಬೇಕು. 
*ನಿರ್ದಿಷ್ಟ ದತ್ತಾಂಶದ ಬಳಕೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಆಯ್ಕೆಯನ್ನು ಸಾಲಗಾರರಿಗೆ ನೀಡಬೇಕು. 

click me!