
ಮನೆಗೆ ಅಗತ್ಯ ಹಾಗೂ ಐಷಾರಾಮಿ ವಸ್ತು ಬೇಕು, ಆದ್ರೆ ಕೈನಲ್ಲಿ ಹಣ ಇಲ್ಲ ಎಂದಾಗ ನಾವು ಸಾಲದ ಮೊರೆ ಹೋಗ್ತೇವೆ. ಈಗ ಫ್ರಿಡ್ಜ್, ವಾಷಿಂಗ್ ಮಷಿನ್, ಎಸಿ ಮಾತ್ರವಲ್ಲ ಪ್ರತಿ ದಿನ ಅತಿ ಹೆಚ್ಚು ಬಳಕೆ ಮಾಡುವ ಮೊಬೈಲ್ (Mobile) ಗೂ ಸಾಲ (loan) ಸಿಗ್ತಿದೆ. ಆಪಲ್ ನಂತ ದುಬಾರಿ ಐಫೋನ್ ಖರೀದಿ ಮಾಡಲು ಜನರು ಸಾಲ ಮಾಡ್ತಾರೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಂತಹ ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳಲ್ಲಿ, ಹೆಚ್ಚಿನ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ನೋ ಕಾಸ್ಟ್ ಇಎಂಐ ಮತ್ತು ಸಾಲದ ವ್ಯವಸ್ಥೆ ಇದೆ. ಸಾಲ ಮಾಡೋದು ಮಾತ್ರವಲ್ಲ ಅದನ್ನು ಸರಿಯಾದ ಟೈಂಗೆ ಪಾವತಿ ಮಾಡ್ಬೇಕು. ಒಂದ್ವೇಳೆ ನೀವು ಸಾಲ ಮರುಪಾವತಿ ಮಾಡಿಲ್ಲ ಅಂದ್ರೆ ನಿಮ್ಮ ಫೋನ್ ಲಾಕ್ ಆಗುತ್ತೆ. ಯಸ್, ಈ ಬಗ್ಗೆ ಆರ್ ಬಿಐ ಆಲೋಚನೆ ಮಾಡ್ತಿದೆ.
ಸಾಲ ತೀರ್ಸಿಲ್ಲ ಅಂದ್ರೆ ಲಾಕ್ ಆಗುತ್ತೆ ಮೊಬೈಲ್ : 2024 ರಲ್ಲಿ ಹೋಮ್ ಕ್ರೆಡಿಟ್ ಫೈನಾನ್ಸ್ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮೂರನೇ ಒಂದು ಭಾಗವನ್ನು ಸಣ್ಣ ಸಾಲಗಳ ಮೇಲೆ ಖರೀದಿ ಮಾಡಲಾಗ್ತಿದೆ. ಇದ್ರಲ್ಲಿ ಸ್ಮಾರ್ಟ್ಫೋನ್ ಕೂಡ ಸೇರಿದೆ. 1.4 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ 1.16 ಬಿಲಿಯನ್ ಮೊಬೈಲ್ ಸಂಪರ್ಕವಿದೆ. ಈ ಹಿಂದೆ ಕೂಡ ಲೋನ್ ನೀಡಿದ ಕಂಪನಿಗಳು, ಸಾಲದ ಮೇಲೆ ತೆಗೆದುಕೊಂಡ ಫೋನ್ ಲಾಕ್ ಮಾಡ್ತಿತ್ತು. ಫೋನ್ ಲಾಕ್ ಅಪ್ಲಿಕೇಶನ್ ಬಳಸುತ್ತಿತ್ತು. ಕಳೆದ ವರ್ಷ ಆರ್ಬಿಐ ಸಾಲದಾತರ ಅಭ್ಯಾಸವನ್ನು ನಿಷೇಧಿಸಿತ್ತು.
ಮುಂದಿನ ಫೆಬ್ರವರಿಯಿಂದ ಪ್ರತಿ ವರ್ಷ ಮೆಟ್ರೋ ದರ ಏರಿಕೆ!
ಫೋನ್ ಲಾಕ್ ಗೆ ಆರ್ ಬಿಐ (RBI)ನಿಂದ ಒಪ್ಪಿಗೆ ಸಾಧ್ಯತೆ : ಸಾಲದ ಮೂಲಕ ಮೊಬೈಲ್ ಖರೀದಿ ಮಾಡುವ ಗ್ರಾಹಕರ ಮೊಬೈಲ್ ಗಳನ್ನು ಲಾಕ್ ಮಾಡಲು ಬ್ಯಾಂಕ್ ಒಂದು ಅಪ್ಲಿಕೇಷನ್ ಬಳಕೆ ಮಾಡ್ತಿತ್ತು. ಆರ್ ಬಿಐ ಸೂಚನೆ ನಂತ್ರ ಫೋನ್ ಲಾಕ್ ವ್ಯವಸ್ಥೆ ಬಂದ್ ಆಗಿತ್ತು. ಈಗ ಆರ್ ಬಿಐ ಮತ್ತೆ ಬ್ಯಾಂಕ್ ಜೊತೆ ಮಾತುಕತೆ ನಡೆಸಿದೆ. ಆರ್ಬಿಐ ಕೆಲವು ತಿಂಗಳುಗಳಲ್ಲಿ ತನ್ನ ಎಸ್ಒಪಿಯನ್ನು ನವೀಕರಿಸಲಿದೆ. ಫೋನ್ ಲಾಕಿಂಗ್ ವ್ಯವಸ್ಥೆಗೆ ಹೊಸ ಮಾರ್ಗಸೂಚಿ ಜಾರಿಗೆ ತರಲಿದೆ ಎನ್ನಲಾಗ್ತಿದೆ.
ಫೋನ್ ಲಾಕ್ ವ್ಯವಸ್ಥೆ : ಸಾಲ ಮಾಡಿ ಫೋನ್ ಖರೀದಿ ಮಾಡಿದ ವ್ಯಕ್ತಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿಲ್ಲ ಎಂದಾದರೆ ಆತನ ಫೋನ್ ಲಾಕ್ ಆಗುತ್ತೆ. ಈ ಬಗ್ಗೆ ಗ್ರಾಹಕರ ಪೂರ್ವಾನುಮತಿ ತೆಗೆದುಕೊಳ್ಳಲಾಗುತ್ತದೆ. ಗ್ರಾಹಕರ ಲಾಕ್ ಮಾಡಿದ ಫೋನ್ನ ವೈಯಕ್ತಿಕ ಡೇಟಾ ಸಂಪೂರ್ಣವಾಗಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಬ್ಯಾಂಕಿನದ್ದು. ಈ ಬಗ್ಗೆ ಬ್ಯಾಂಕ್ ಹಾಗೂ ಸಾಲ ಕಂಪನಿಗಳು ವಿಶೇಷ ತಯಾರಿ ನಡೆಸುತ್ತಿದ್ದು, ಪ್ರತ್ಯೇಕ ವ್ಯವಸ್ಥೆ ಮಾಡ್ತಿವೆ. ಆದ್ರೆ ಈ ಬಗ್ಗೆ ಆರ್ ಬಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
18 ಸಾವಿರ ಕೋಟಿ ಮೌಲ್ಯದ 10 ಕೋಟಿ ಷೇರು Buyback ಒಪ್ಪಿಗೆ ನೀಡಿದ ಇನ್ಫೋಸಿಸ್ ಬೋರ್ಡ್!
ಫೋನ್ ಲಾಕ್ ಆಗೋದು ಹೇಗೆ? : ಬ್ಯಾಂಕುಗಳು ಮತ್ತು ಎನ್ ಬಿಎಫ್ ಸಿ (NBFC)ಗಳು ಇದಕ್ಕಾಗಿ ಒಂದು ಅಪ್ಲಿಕೇಶನ್ ಅನ್ನು ಬಳಸಬಹುದು. ಸಾಧನವನ್ನು ಖರೀದಿಸುವ ಸಮಯದಲ್ಲಿ ಈ ಅಪ್ಲಿಕೇಶನ್ ಅನ್ನು ಗ್ರಾಹಕರ ಫೋನ್ನಲ್ಲಿ ಸ್ಥಾಪಿಸಲಾಗುತ್ತದೆ. Google Device Lock Controller, Samsung Finance+ ಅಪ್ಲಿಕೇಶನ್ (Samsung ಬಳಕೆದಾರರಿಗೆ ಮಾತ್ರ) ಮತ್ತು ಇತರ ಅಪ್ಲಿಕೇಶನ್ಗಳನ್ನು ಬಳಸಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.