
ನವದೆಹಲಿ: ಅಮೂಲ್ಯ ಲೋಹಗಳಾದ ಬಂಗಾರ ಮತ್ತು ಬೆಳ್ಳಿಯ ಬೆಲೆ ತಮ್ಮ ಓಟವನ್ನು ಸತತ 4ನೇ ದಿನವಾದ ಶುಕ್ರವಾರವೂ ಮುಂದುವರೆಸಿವೆ. ಬೆಂಗಳೂರಿನಲ್ಲಿ ಶೇ.99.5 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,15,500 ರು. ಆಗಿದೆ.
ಆಭರಣ ಹೊನ್ನಿನ ಮೌಲ್ಯ ಪ್ರತಿ ಗ್ರಾಂಗೆ 10,500 ರು.ನಷ್ಟಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1,13,800 ರು. ತೆರಬೇಕಾರಿಗೆ. ಬೆಂಗಳೂರಿನಲ್ಲಿ ಬೆಳ್ಳೆ ಬೆಲೆ ಪ್ರತಿ ಕೆ.ಜಿ.ಗೆ 1,35,600 ರು ಆಗಿದ್ದು, ದೆಹಲಿಯಲ್ಲಿ ಇದು 1,32,000 ರು. ಇದೆ.
ಗಗನಕ್ಕೇರಿದ ಚಿನ್ನ, ವಿಮಾನ ನಿಲ್ದಾಣದಲ್ಲಿ ಭಾರತೀಯರಿಗೆ ಕಿರುಕುಳ, ನಿಯಮ ಬದಲಿಸುವಂತೆ ಎನ್‌ಆರ್‌ಐಗಳ ಆಕ್ರೋಶ!
ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಹಳೆಯ ಕಸ್ಟಮ್ಸ್ ನಿಯಮಗಳು ಕಂಟಕವಾಗಿ ಪರಿಣಮಿಸಿವೆ. ಚಿನ್ನದ ಬೆಲೆ ಏರಿಕೆಯಿಂದಾಗಿ ಹಳೆಯ ಮಿತಿಗಳು ಇಂದಿನ ಮಾರುಕಟ್ಟೆ ದರಗಳಿಗೆ ಹೊಂದಿಕೆಯಾಗುತ್ತಿಲ್ಲ. ಇದರಿಂದಾಗಿ ಪ್ರಯಾಣಿಕರು ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾಗುತ್ತಿದೆ.
ಭಾರತದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನ ಕಳ್ಳಸಾಗಣೆ ಕೂಡ ಕಮ್ಮಿ ಆಗುತ್ತಿಲ್ಲ. ಆದರೆ ವಿದೇಶದಿಂದ ಭಾರತಕ್ಕೆ ಬರುತ್ತಿರುವ ಪ್ರಯಾಣಿಕರಿಗೆ ಮಾತ್ರ ಈಗ ಚಿನ್ನದ ಬೆಲೆ ಏರಿಕೆಯೇ ಕಂಟಕವಾಗಿ ಪರಿಣಮಿಸಿದೆ. ಹಳೆಯ ಕಸ್ಟಮ್ಸ್ ನಿಯಮಗಳಿಂದ ದಂಡ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2016ರಲ್ಲಿ ಕೊನೆಯದಾಗಿ ನಿಯಮ ಬದಲಿಸಲಾಗಿತ್ತು. ಅದಾದ ನಂತರ ಈವರೆಗೆ ಯಾವುದೇ ನಿಯಮವನ್ನು ಬದಲಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಹಳೆಯ ಕಸ್ಟಮ್ಸ್ ನಿಯಮಗಳನ್ನು ಬದಲಾಯಿಸುವಂತೆ ಯುಎಇಯಲ್ಲಿರುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಭಾರತೀಯ ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿರುವ ಕಿರುಕುಳ ಮತ್ತು ಗೊಂದಲಗಳನ್ನು ಉಲ್ಲೇಖಿಸಿ, ಯುಎಇ ಸೇರಿ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಚಿನ್ನಾಭರಣಗಳ ಮೇಲಿನ ಹಳೆಯ ಕಸ್ಟಮ್ಸ್ ಸುಂಕ ನಿಯಮಗಳನ್ನು ತಿದ್ದುಪಡಿ ಮಾಡಿ ನವೀಕರಿಸಲು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವೈಯಕ್ತಿಕ ಚಿನ್ನಾಭರಣಗಳನ್ನು ಹೊತ್ತೊಯ್ಯುವ ನಿಜವಾದ ಪ್ರಯಾಣಿಕರಿಗೆ ಕಿರುಕುಳ ನೀಡದಂತೆ ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನಗಳಿದ್ದರೂ, ಎನ್‌ಆರ್‌ಐ ಸಮುದಾಯವು ನಿರಂತರವಾಗಿ ತೊಂದರೆಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾರ್ಜಾದ ಭಾರತೀಯ ಸಂಘವು ಈ ವಿಚಾರದಲ್ಲಿ ಧ್ವನಿಯೆತ್ತಿದೆ.
ಹಳೆಯ ನಿಯಮ, ಹೊಸ ಸಂಕಷ್ಟ
ಪ್ರಸ್ತುತ ಕಸ್ಟಮ್ಸ್ ನಿಯಮಗಳ ಪ್ರಕಾರ, ಮಹಿಳಾ ಪ್ರಯಾಣಿಕರು ಗರಿಷ್ಠ 40 ಗ್ರಾಂ (₹1 ಲಕ್ಷ ಮೌಲ್ಯ) ಹಾಗೂ ಪುರುಷರು ಗರಿಷ್ಠ 20 ಗ್ರಾಂ (₹50 ಸಾವಿರ ಮೌಲ್ಯ) ಚಿನ್ನಾಭರಣಗಳನ್ನು ಸುಂಕವಿಲ್ಲದೆ ಕೊಂಡೊಯ್ಯಲು ಅವಕಾಶವಿದೆ. ಈ ಮಿತಿಯನ್ನು ಮೀರುವ ಚಿನ್ನದ ಮೇಲೆ ಕಡ್ಡಾಯವಾಗಿ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ದಂಡ ತಪ್ಪಿಸಲು ಪ್ರಯಾಣಿಕರು ಚಿನ್ನ ಖರೀದಿಸಿದ ಬಿಲ್‌ಗಳನ್ನು ತೋರಿಸಬೇಕಾಗಿದೆ ಹಾಗೂ ಹೆಚ್ಚುವರಿ ಚಿನ್ನವನ್ನು ‘ರೆಡ್ ಚಾನೆಲ್’ ಮೂಲಕ ಘೋಷಿಸಬೇಕಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.