ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್​: FD ಇಡುವವರಿಗೆ ಬ್ಯಾಡ್​ ನ್ಯೂಸ್​: ಇಲ್ಲಿದೆ ಡಿಟೇಲ್ಸ್​...

Published : Apr 09, 2025, 11:59 AM ISTUpdated : Apr 09, 2025, 12:09 PM IST
ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್​: FD ಇಡುವವರಿಗೆ ಬ್ಯಾಡ್​ ನ್ಯೂಸ್​: ಇಲ್ಲಿದೆ ಡಿಟೇಲ್ಸ್​...

ಸಾರಾಂಶ

ಆರ್‌ಬಿಐ ರೆಪೊ ದರವನ್ನು 6%ಕ್ಕೆ ಇಳಿಸಿದ್ದು, ಸಾಲಗಾರರಿಗೆ ಅನುಕೂಲವಾಗಲಿದೆ. ಗೃಹ, ವಾಹನ ಸಾಲಗಳು ಅಗ್ಗವಾಗಲಿದ್ದು, ಇಎಂಐ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಎಫ್‌ಡಿ ಬಡ್ಡಿದರಗಳು ಇಳಿಕೆಯಾಗುವ ನಿರೀಕ್ಷೆಯಿದೆ. ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡಲು ಮತ್ತು ಹಣದುಬ್ಬರ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರೆಪೊ ದರ ಇಳಿಕೆಯಿಂದ ಬ್ಯಾಂಕುಗಳು ಕಡಿಮೆ ಬಡ್ಡಿಗೆ ಸಾಲ ಪಡೆಯುವುದರಿಂದ, ಗ್ರಾಹಕರಿಗೆ ಅನುಕೂಲವಾಗಲಿದೆ.

ಕೇವಲ 2 ತಿಂಗಳ ಅಂತರದಲ್ಲಿ ಆರ್​ಬಿಐ ಸಾಲಗಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದೆ.  ದೇಶದಲ್ಲಿನ ಆರ್ಥಿಕ ಚೇತರಿಕೆಗೆ ನೆರವು ನೀಡುವ ನಿಟ್ಟಿನಲ್ಲಿ ರೆಪೊ ದರವನ್ನು 6.25 ರಿಂದ ಶೇಕಡಾ 6 ಕ್ಕೆ ರಿಸರ್ವ್​ ಬ್ಯಾಂಕ್​ ಇಳಿಸಿದೆ. ಕಳೆದ ಫೆಬ್ರವರಿಯಲ್ಲಿ ಆರ್ಥಿಕ ನೀತಿ ಪ್ರಕಟಿಸಿದ್ದ ರಿಸರ್ವ್​ ಬ್ಯಾಂಕ್​ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 6.25 ಶೇಕಡಾಕ್ಕೆ ಇಳಿಕೆ ಮಾಡಿತ್ತು. ಈಗ ಮತ್ತೊಮ್ಮೆ ದರ ಇಳಿಸಿದೆ. ಈ ಹಿನ್ನೆಲೆಯಲ್ಲಿ, ಹೊಸದಾಗಿ ಗೃಹ, ವಾಹನ, ಕಾರ್ಪೊರೆಟ್​ ಸಾಲ ಮಾಡುವವರಿಗೆ ಬಂಪರ್​ ಆಫರ್​ ಸಿಕ್ಕಂತಾಗಿದೆ.  ರೆಪೋ ದರ ಎಂದರೆ ಆರ್​ಬಿಐ ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ. ಇದು ಕಡಿಮೆಯಾಗುವ ಕಾರಣದಿಂದ ಸಹಜವಾಗಿ,  RBI ರೆಪೊ ದರವನ್ನು ಕಡಿಮೆ ಮಾಡಿದಾಗ, ಬ್ಯಾಂಕುಗಳು ಸಾಮಾನ್ಯವಾಗಿ ತಮ್ಮ ಸಾಲ ದರಗಳನ್ನು ಕೂಡ ಕಡಿಮೆ ಮಾಡುತ್ತದೆ, ಇದು ಗೃಹ, ವಾಹನ ಇತ್ಯಾದಿ ಸಾಲಗಳನ್ನು ಅಗ್ಗವಾಗಿಸುತ್ತದೆ.  ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಆಗಿರುವ ಕಾರಣ, ವಿವಿಧ ಸಾಲಗಳ ದರಗಳಲ್ಲಿಯೂ ಕಡಿತವಾಗಲಿದೆ.

ಆದರೆ ಭದ್ರತಾ ಠೇವಣಿ ಅಂದ್ರೆ FD ಇಡುವವರಿಗೆ ಇದು ಬ್ಯಾಡ್​ ನ್ಯೂಸ್​ ಆಗಲಿದೆ. ಏಕೆಂದರೆ, ಹೊಸದಾಗಿ ಎಫ್​ಡಿ ಇಡುವವರಿಗೆ ಕಡಿಮೆ ಬಡ್ಡಿದರ ಇದರಿಂದ ಸಿಗುವ ಸಾಧ್ಯತೆ ಇದೆ. ಸಾಲ ದರಗಳು ಕಡಿಮೆಯಾಗುತ್ತಿದ್ದಂತೆ, ಬ್ಯಾಂಕುಗಳು ತಮ್ಮ ಲಾಭದ ಮಟ್ಟವನ್ನು ಕಾಪಾಡಿಕೊಳ್ಳಲು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಸಹ ಕಡಿತಗೊಳಿಸಬಹುದು.  ಈಗಾಗಲೇ ಎಫ್​ಡಿ ಇಟ್ಟವರಿಗೆ ಇದು ಅನ್ವಯ ಆಗುವುದಿಲ್ಲ. ನೀವು ಈಗಾಗಲೇ ವೈಯಕ್ತಿಕ ಸಾಲವನ್ನು ಹೊಂದಿದ್ದರೆ, ವಿಶೇಷವಾಗಿ ಸ್ಥಿರ ಬಡ್ಡಿದರವನ್ನು ಹೊಂದಿದ್ದರೆ, ನಿಮ್ಮ EMI ಒಂದೇ ಆಗಿರುತ್ತದೆ. ಆದರೆ ನೀವು ಹೊಸ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಲಾಭ ಆಗಲಿದೆ. ಆದರೆ ಹೊಸ ಎಫ್‌ಡಿ ಹೂಡಿಕೆದಾರರು ಈ ಹಿಂದೆ ಹೆಚ್ಚಿನ ದರಗಳಲ್ಲಿ ಎಫ್​ಡಿ ಇಟ್ಟವರಿಗಿಂತ ಕಡಿಮೆ ಆದಾಯವನ್ನು ಗಳಿಸಬಹುದು. ನೀವು FD ಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಬ್ಯಾಂಕುಗಳು ದರಗಳನ್ನು ಕಡಿಮೆ ಮಾಡುವ ಮೊದಲು ಈಗಲೇ ಎಫ್​ಡಿ ಇಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಇದು ಜಾರಿಯಾದ ಕೂಡಲೇ ಬಡ್ಡಿದರ ಮತ್ತಷ್ಟು ಕಡಿಮೆ ಆಗಲಿದೆ.

ಬಾಡಿಗೆದಾರರಿಗೆ ಆದಾಯತೆರಿಗೆ ಇಲಾಖೆ ಶಾಕ್​: ದಂಡ-ಶಿಕ್ಷೆ ಆಗ್ಬಾರ್ದು ಎಂದ್ರೆ ಕೂಡಲೇ ಈ ರೀತಿ ಮಾಡಿ...

ಬೆಲೆ ಏರಿಕೆ ಆಗುತ್ತಿದೆ ಎನಿಸಿದರೆ ಆಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಡಿಮೆ ಮಾಡಲು ಆರ್​​ಬಿಐ ರಿಪೋ ದರವನ್ನು ಹೆಚ್ಚಿಸುತ್ತದೆ. ಹಣದುಬ್ಬರ ನಿಯಂತ್ರಣದಲ್ಲಿದ್ದರೆ ಮತ್ತು ಆರ್ಥಿಕತೆಗೆ ಪುಷ್ಟಿ ಸಿಗುವ ಅವಶ್ಯಕತೆ ಇದೆ ಎನಿಸಿದಲ್ಲಿ ಆಗ ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಹಣದ ಹರಿವು ಬೇಕಾಗುತ್ತದೆ. ಆಗ ರಿಪೋ ದರವನ್ನು ಆರ್​​ಬಿಐ ಇಳಿಸುತ್ತದೆ. ರೆಪೊ ದರ ಹೆಚ್ಚಳದೊಂದಿಗೆ, ದೇಶದ ಎಲ್ಲಾ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೆ ರೆಪೊ ದರ ಕಡಿತದಿಂದ ಬಡ್ಡಿದರಗಳಲ್ಲಿ ಗಣನೀಯ ಇಳಿಕೆ ಕಂಡುಬರಲಿದೆ.   ಆರ್‌ಬಿಐ ಬಡ್ಡಿದರಗಳನ್ನು ಕಡಿಮೆ ಮಾಡಿದಾಗ, ಬ್ಯಾಂಕುಗಳು ಕಡಿಮೆ ವೆಚ್ಚದಲ್ಲಿ ಹಣವನ್ನು ಸಾಲ ಪಡೆಯಬಹುದು. ಇದು ಬ್ಯಾಂಕುಗಳು ನೀಡುವ ಸಾಲಗಳ ಮೇಲಿನ ಬಡ್ಡಿದರಗಳನ್ನು ಸಹ ಕಡಿಮೆ ಮಾಡುತ್ತದೆ. ಏತನ್ಮಧ್ಯೆ, ರಿವರ್ಸ್ ರೆಪೊ ದರವು ಮಾರುಕಟ್ಟೆಯಲ್ಲಿ ಹೆಚ್ಚುವರಿ ಹಣವನ್ನು ಮರುಪಡೆಯಲು ರಿಸರ್ವ್ ಬ್ಯಾಂಕ್ ಅಲ್ಪಾವಧಿಯಲ್ಲಿ ಬ್ಯಾಂಕುಗಳಿಂದ ಹಣವನ್ನು ಎರವಲು ಪಡೆಯುವ ದರವಾಗಿದೆ.

ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಭಾರತೀಯ ಆಮದುಗಳ ಮೇಲೆ ಶೇಕಡಾ 26 ರಷ್ಟು ರೆಸಿಪ್ರೋಕಲ್​ ಸುಂಕಗಳನ್ನು ಘೋಷಿಸಿದ್ದರು. ಈ ಗದ್ದಲದ ನಡುವೆ ಆರ್​ಬಿಐನ ವಿತ್ತೀಯ ನೀತಿ ಸಮಿತಿ ಸಭೆ ಸೇರಿತ್ತು. ಇದರ ಫಲಿತಾಂಶದ ಮೇಲೆ ಹೂಡಿಕೆದಾರರು ಹೆಚ್ಚಿನ ಗಮನ ಹರಿಸಿದ್ದರು.  ಇದೀಗ ತಜ್ಞರ ಹಾಗೂ ಹೂಡಿಕೆದಾರರ ನಿರೀಕ್ಷೆಯಂತೆ ರೆಪೋ ದರ ಇಳಿಕೆ ಮಾಡಲಾಗಿದೆ. ಇದು ಆರ್ಥಿಕ ಚೇತರಿಕೆಗೆ ಅವಕಾಶ ಮಾಡಿಕೊಡಲಿದೆ. ಇದರಿಂದ ಜನರ ಕೈಯಲ್ಲಿ ಹಣ ದೊರೆಯುವಂತೆ ಮಾಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.  

ವಿವಾಹ ನೋಂದಣಿ ಏಕೆ ಬೇಕು? ಇಷ್ಟೆಲ್ಲಾ ಪ್ರಯೋಜನ ಇವೆಯಾ? ಆನ್‌ಲೈನ್‌ ಸಲ್ಲಿಕೆ ಹೇಗೆ? ಡಿಟೇಲ್ಸ್‌ ಇಲ್ಲಿದೆ...
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!