ಭಾರತದ ಪೆಟ್ರೋಲ್ ಪಂಪ್‌ಗಳಲ್ಲಿ ಟಾಯ್ಲೆಟ್ ಮಾತ್ರವಲ್ಲ, ನೀವು ಬಯಸಿದಲ್ಲಿ ಈ ಸೇವೆಗಳನ್ನೂ ಕೂಡ ಉಚಿತವಾಗಿ ನೀಡಬೇಕು. ಒಂದು ವೇಳೆ ನಿಮಗೆ ಸೇವೆಗಳನ್ನು ನೀಡಲು ನಿರಾಕರಿಸಿದರೆ, ಪೆಟ್ರೋಲ್ ಪಂಪ್‌ನ ಲೈಸೆನ್ಸ್ ರದ್ದಾಗಬಹುದು.
ಭಾರತದಲ್ಲಿ ಪೆಟ್ರೋಲ್ ಪಂಪ್‌ಗಳು ಸರಿಯಾದ ಟಾಯ್ಲೆಟ್ ಸೌಲಭ್ಯ ಮತ್ತು ಇತರ ಕಡ್ಡಾಯ ಸೇವೆಗಳನ್ನು ನೀಡಲು ನಿರಾಕರಿಸಿದರೆ ಲೈಸೆನ್ಸ್ ರದ್ದು ಮಾಡುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಅನೇಕ ಪ್ರಯಾಣಿಕರಿಗೆ ತಿಳಿದಿರಲಿಕ್ಕಿಲ್ಲ. ನೀವು ಬಯಸಿದಲ್ಲಿ ಈ ಸೇವೆ ನೀಡದಿದ್ದರೆ ಕೂಡಲೇ ದೂರು ಕೊಡಬಹುದು.
ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿಎನ್‌ಜಿಆರ್‌ಬಿ) ಮತ್ತು ಇತರ ಸ್ಥಳೀಯ ಆಡಳಿತಗಳು ಇಂಧನ ಸ್ಟೇಷನ್‌ಗಳಿಗೆ ಕೆಲವು ನಿಯಮಗಳನ್ನು ಹಾಕಿವೆ. ಅದರಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಅಗತ್ಯ ಸೌಲಭ್ಯಗಳನ್ನು ನೀಡುವುದು ಸೇರಿವೆ. ಈ ನಿಯಮಗಳನ್ನು ಪಾಲಿಸುತ್ತಾರೋ ಇಲ್ಲವೋ ಎಂದು ನೋಡಿದ ನಂತರವೇ ಈ ಸಂಸ್ಥೆಗಳಿಗೆ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಈ ಕಾನೂನುಗಳ ಬಗ್ಗೆ ನಮ್ಮಲ್ಲಿ ಕೆಲವೇ ಜನರಿಗೆ ಮಾತ್ರ ತಿಳಿದಿದೆ ಅನ್ನೋದು ದುರದೃಷ್ಟಕರ ಸಂಗತಿ. ಆದರೆ ಪೆಟ್ರೋಲ್ ಪಂಪ್‌ಗಳಲ್ಲಿ ಟಾಯ್ಲೆಟ್ ಸೇವೆ ಮಾತ್ರವಲ್ಲದೆ ಇನ್ನೂ ಕೆಲವು ಸೇವೆಗಳನ್ನು ಉಚಿತವಾಗಿ ನೀಡಬೇಕು. ನಮ್ಮ ದೇಶದ ಎಲ್ಲಾ ಪೆಟ್ರೋಲ್ ಸ್ಟೇಷನ್‌ಗಳಲ್ಲಿ ಲಭ್ಯವಿರುವ ಕೆಲವು ಉಚಿತ ಸೇವೆಗಳ ಬಗ್ಗೆ ತಿಳಿಯೋಣ.
ಸರಿಯಾದ ಟಾಯ್ಲೆಟ್ ಸೌಲಭ್ಯಗಳು
ಪ್ರಯಾಣ ಮಾಡುವಾಗ ಬಾತ್‌ರೂಮ್ ಬಳಸಬೇಕೆಂದರೆ ಪೆಟ್ರೋಲ್ ಪಂಪಿಗೆ ಹೋಗಿ ಟಾಯ್ಲೆಟ್ ಬಳಸಿ. ಇದು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ. ಈ ಅಗತ್ಯವನ್ನು ಪೆಟ್ರೋಲ್ ಪಂಪ್ ಮಾಲೀಕರು ನಿರಾಕರಿಸಲು ಸಾಧ್ಯವಿಲ್ಲ. ಟಾಯ್ಲೆಟ್ ಮತ್ತು ವಿಶ್ರಾಂತಿ ಕೊಠಡಿ ಬಳಸಲು ನಿಮಗೆ ಬಿಡದಿದ್ದರೆ ಅಥವಾ ಕೊಳಕಾಗಿದ್ದರೆ ನೀವು ಅಧಿಕಾರಿಗಳಿಗೆ ದೂರು ನೀಡಬಹುದು.
ಫಿಲ್ಟರ್ ಮಾಡಿದ ಮತ್ತು ಶುದ್ಧ ಕುಡಿಯುವ ನೀರು
ದೂರದ ಕಾರ್ ಜರ್ನಿಗಳಲ್ಲಿ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಪೆಟ್ರೋಲ್ ಪಂಪ್‌ಗಳಲ್ಲಿ ನಿಮಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಬಳಸಲು ಹಕ್ಕಿದೆ. ಪೆಟ್ರೋಲ್ ಪಂಪ್ ಕಾನೂನಿನ ಪ್ರಕಾರ ನೀರು ಕೊಡಬೇಕು.
ಇದನ್ನೂ ಓದಿ: ಗರ್ಲ್‌ಫ್ರೆಂಡ್‌ಗೆ ಐಫೋನ್ ಕೊಡಿಸಲು ಕಿಡ್ನಿ ಮಾರಿದ ಹುಡುಗ! ಹೃದಯಹಿಂಡುವ ಈ ಹುಚ್ಚಾಟಕ್ಕೆ ಏನ್ ಹೇಳೋಣ?
ಟೈರ್‌ಗಳಲ್ಲಿ ಉಚಿತ ಗಾಳಿ
ರಸ್ತೆಗಳಲ್ಲಿ ವಾಹನಗಳು ಓಡಾಡಬೇಕೆಂದರೆ ಅವುಗಳ ಟೈರ್‌ಗಳಲ್ಲಿ ಗಾಳಿ ಇರಬೇಕು. ಟೈರ್‌ಗಳಲ್ಲಿ ಗಾಳಿಯ ಒತ್ತಡ ಕಡಿಮೆಯಾದರೆ ಡ್ರೈವಿಂಗ್‌ಗೆ ತೊಂದರೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೊರಗೆ ಹೋಗುವಾಗಲೆಲ್ಲಾ ವಾಹನದ ಟೈರ್‌ಗಳಲ್ಲಿ ಗಾಳಿಯನ್ನು ಟೈರ್ ಅಂಗಡಿಯಲ್ಲಿ ಪರೀಕ್ಷಿಸಬೇಕಾಗುತ್ತದೆ. ಆದರೆ ಈ ಸೇವೆಗೆ ನಾವು ಹಣ ನೀಡಬೇಕು. ಆದರೆ ಪೆಟ್ರೋಲ್ ಪಂಪಲ್ಲಿ ನಿಮಗೆ ಈ ಸೇವೆ ಉಚಿತವಾಗಿ ಸಿಗುತ್ತದೆ.
ಅಗ್ನಿ ಸುರಕ್ಷತಾ ಉಪಕರಣ
ಪೆಟ್ರೋಲ್ ಪಂಪ್ ಹತ್ತಿರ ನೀವು ಬೆಂಕಿ ತಗುಲುವಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದನ್ನು ನಂದಿಸಲು ನೀವು ಅಗ್ನಿ ಸುರಕ್ಷತಾ ಉಪಕರಣಗಳು ಮತ್ತು ಒಂದು ಬಕೆಟ್ ಮರಳನ್ನು ಬಳಸಬಹುದು. ಇದರಿಂದ ಬೆಂಕಿಯನ್ನು ನಿಯಂತ್ರಿಸಬಹುದು. ಎಲ್ಲಿ ಬೇಕಾದರೂ ಬಳಸಬಹುದಾದ ಉಚಿತ ಅಗ್ನಿ ಸುರಕ್ಷತಾ ಉಪಕರಣಗಳು ಪೆಟ್ರೋಲ್ ಪಂಪ್‌ಗಳಲ್ಲಿ ಲಭ್ಯವಿದೆ.
ಫಸ್ಟ್ ಏಡ್ ಬಾಕ್ಸ್
ದಾರಿಯಲ್ಲಿ ಅಪಘಾತಗಳಾಗಿ ನಿಮಗೆ ಗಾಯಗಳಾದರೆ ನೀವು ಪೆಟ್ರೋಲ್ ಸ್ಟೇಷನ್‌ನಲ್ಲಿ ಪ್ರಥಮ ಚಿಕಿತ್ಸೆ ಮತ್ತು ಉಚಿತ ಡ್ರೆಸ್ಸಿಂಗ್‌ಗೆ ನಿಲ್ಲಬಹುದು. ಒಂದು ಪ್ರಥಮ ಚಿಕಿತ್ಸಾ ಕಿಟ್ ಪೆಟ್ರೋಲ್ ಪಂಪ್ ಮಾಲೀಕರು ಯಾವಾಗಲೂ ಇಟ್ಟುಕೊಂಡಿರಬೇಕು. ಪ್ರಾಥಮಿಕ ಚಿಕಿತ್ಸೆ ಪೆಟ್ರೋಲ್ ಪಂಪಲ್ಲಿ ಉಚಿತವಾಗಿ ಸಿಗುತ್ತದೆ.
ಇದನ್ನೂ ಓದಿ: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ರಿಯಾಯಿತಿಗಳ ಸುರಿಮಳೆ; ಗ್ರಾಹಕರಿಗೆ ಭರ್ಜರಿ ಆಫರ್
ಇತರ ಸೇವೆಗಳು
ಒಂದು ತಾಯಿಗೆ ಮಗುವಿಗೆ ಹಾಲು ಕುಡಿಸಬೇಕೆಂದರೆ ಮಗುವಿಗೆ ಹಾಲುಣಿಸಲು ಬೇಕಾದ ಫೀಡಿಂಗ್ ರೂಮ್ ಇಂಧನ ಸ್ಟೇಷನ್‌ನಲ್ಲಿ ಇರಬೇಕು. ಒಂದು ಪೆಟ್ರೋಲ್ ಸ್ಟೇಷನ್‌ನ ಮಾಲೀಕರು ಅಂತಹ ಸೇವೆಗಳನ್ನು ನೀಡಲು ನಿರಾಕರಿಸಿದರೆ ಸ್ಥಳೀಯ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ನಿಮಗೆ ಹಕ್ಕಿದೆ. ಅಧಿಕಾರಿಗಳು ಪೆಟ್ರೋಲ್ ಪಂಪಿನ ಮಾಲೀಕರಿಗೆ ದಂಡ ವಿಧಿಸಬಹುದು ಮತ್ತು ಪೆಟ್ರೋಲ್ ಪಂಪಿನ ಲೈಸೆನ್ಸ್ ರದ್ದು ಮಾಡಬಹುದು. ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಟೇಷನ್ ಮ್ಯಾನೇಜರ್ ಮತ್ತು ಸಿಬ್ಬಂದಿಯ ಸಂಪರ್ಕ ಸಂಖ್ಯೆಗಳನ್ನು ಒಂದು ಗೋಡೆಯಲ್ಲಿ ಪ್ರದರ್ಶಿಸಬೇಕು ಅನ್ನೋದು ಕಡ್ಡಾಯ.
ಪೆಟ್ರೋಲ್ ಪಂಪಲ್ಲಿನ ಈ ಸೇವೆಗಳನ್ನು ಬಳಸುವುದು ಪ್ರಯಾಣಿಕರ ಹಕ್ಕು. ಈ ಷರತ್ತುಗಳನ್ನು ಒಪ್ಪಿಕೊಂಡ ನಂತರವೇ ಪ್ರತಿ ಇಂಧನ ಪಂಪಿಗೂ ಲೈಸೆನ್ಸ್ ನೀಡುವುದು. ನಾಗರಿಕರಿಗೆ ಈ ಸೇವೆಗಳನ್ನು ನೀಡದಿದ್ದರೆ ಪೆಟ್ರೋಲ್ ಪಂಪ್ ಮಾಲೀಕರ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ತಿಳಿಸಲಾಗಿದೆ. ಆದ್ದರಿಂದ ಪೆಟ್ರೋಲ್ ಪಂಪಲ್ಲಿ ನಿಮಗೆ ಸಂಪೂರ್ಣವಾಗಿ ಉಚಿತವಾಗಿ ಸಿಗುವ ಈ ಸೇವೆಗಳನ್ನು ಖಂಡಿತವಾಗಿಯೂ ಬಳಸಿ.