ದತ್ತಾಂಶ ಸಂಗ್ರಹಣೆಯಲ್ಲಿ ನಿಯಮ ಪಾಲನೆ; ಮಾಸ್ಟರ್ ಕಾರ್ಡ್ ಮೇಲಿನ ನಿರ್ಬಂಧ ತೆರವುಗೊಳಿಸಿದ ಆರ್ ಬಿಐ

Published : Jun 16, 2022, 10:31 PM IST
ದತ್ತಾಂಶ ಸಂಗ್ರಹಣೆಯಲ್ಲಿ ನಿಯಮ ಪಾಲನೆ; ಮಾಸ್ಟರ್ ಕಾರ್ಡ್ ಮೇಲಿನ ನಿರ್ಬಂಧ ತೆರವುಗೊಳಿಸಿದ ಆರ್ ಬಿಐ

ಸಾರಾಂಶ

ಸುಮಾರು ಒಂದು ವರ್ಷದಿಂದ ಆರ್ ಬಿಐ ನಿರ್ಬಂಧದ ಹಿನ್ನೆಲೆಯಲ್ಲಿ ಮಾಸ್ಟರ್ ಕಾರ್ಡ್ ಹೊಸ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸುವಂತಿರಲಿಲ್ಲ.ಆದ್ರೆ ಪಾವತಿ ವ್ಯವಸ್ಥೆ ದತ್ತಾಂಶ ಸಂಗ್ರಹಣೆಯಲ್ಲಿ ಮಾಸ್ಟರ್ ಕಾರ್ಡ್ ಈಗ ನಿಯಮಗಳನ್ನು ಪಾಲಿಸುತ್ತಿದೆ ಎಂಬ ಕಾರಣಕ್ಕೆ ಆರ್ ಬಿಐ ಈ ನಿರ್ಬಂಧಗಳನ್ನು ತೆರವುಗೊಳಿಸಿದೆ.   

ನವದೆಹಲಿ (ಜೂ.16):  ಮಾಸ್ಟರ್ ಕಾರ್ಡ್ (Mastercard) ಮೇಲೆ ವಿಧಿಸಲಾಗಿದ್ದ ವ್ಯವಹಾರಿಕ ನಿರ್ಬಂಧಗಳನ್ನು (business restrictions) ಭಾರತೀಯ ರಿಸರ್ವ್ ಬ್ಯಾಂಕ್ (RBI) ಇಂದು ತೆರವುಗೊಳಿಸಿದೆ. ಪಾವತಿ ವ್ಯವಸ್ಥೆ (Payment System) ದತ್ತಾಂಶ (Data) ಸಂಗ್ರಹಣೆಯಲ್ಲಿ (Storage) ಮಾಸ್ಟರ್ ಕಾರ್ಡ್ ತೃಪ್ತಿದಾಯಕ ಮಾನದಂಡಗಳನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು (restrictions) ತೆರವುಗೊಳಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ.

ಅಮೆರಿಕ (America) ಮೂಲದ ಮಾಸ್ಟರ್ ಕಾರ್ಡ್ ಕಂಪನಿಯು ಪಾವತಿ ದತ್ತಾಂಶ ಸಂಗ್ರಹಣೆಯ ಮಾನದಂಡಗಳಿಗೆ ಸಂಬಂಧಿಸಿ  2018ರ ಏಪ್ರಿಲ್ 6ರ ಆರ್ ಬಿಐ ಸುತ್ತೋಲೆಯಲ್ಲಿನ (Circular) ಅಂಶಗಳನ್ನು ಅನುಸರಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಆರ್ ಬಿಐ 2021ರ ಜುಲೈ 22ರಂದು ಅನಿರ್ದಿಷ್ಟಾವಧಿ ನಿರ್ಬಂಧಗಳನ್ನು ವಿಧಿಸಿತ್ತು. ಈ ಸಂದರ್ಭದಲ್ಲಿ ಮಾಸ್ಟರ್ ಕಾರ್ಡ್ ಉಲ್ಲಂಘಿಸಿರುವ ನಿಯಮಗಳನ್ನು (Rules) ಕೂಡ ಆರ್ ಬಿಐ ಉಲ್ಲೇಖಿಸಿತ್ತು. 2021ರ ಜುಲೈ 22ರಿಂದ ದೇಶೀಯ ಹೊಸ ಗ್ರಾಹಕರನ್ನು ಕಾರ್ಡ್ ನೆಟ್ ವರ್ಕ್ ಗೆ ಸೇರ್ಪಡೆಗೊಳಿಸುವಂತಿಲ್ಲ ಎಂದು ಆರ್ ಬಿಐ ತಿಳಿಸಿತ್ತು. ಇದ್ರಿಂದ ಮಾಸ್ಟರ್ ಕಾರ್ಡ್ ಹೊಸ  ಡೆಬಿಟ್ (Debit), ಕ್ರೆಡಿಟ್ (Credit) ಅಥವಾ ಪ್ರೀಪೇಯ್ಡ್ ಕಾರ್ಡ್ ಗಳನ್ನು (Prepaid cards) ಗ್ರಾಹಕರಿಗೆ (Customers) ವಿತರಿಸಲು ಇಲ್ಲಿಯ ತನಕ ಸಾಧ್ಯವಾಗಿರಲಿಲ್ಲ. ಆದ್ರೆ, ಈಗ ಆರ್ ಬಿಐ ಈ ನಿರ್ಬಂಧವನ್ನು ತೆರವುಗೊಳಿಸಿದೆ. 

Credit Card:ಆಫರ್ ಗೆ ಮರುಳಾಗಿ ಕ್ರೆಡಿಟ್ ಕಾರ್ಡ್ ಕೊಳ್ಳಬೇಡಿ; ಈ 5 ವಿಷಯಗಳನ್ನು ಮರೆಯದೆ ವಿಚಾರಿಸಿ

'ಮಾಸ್ಟರ್ ಕಾರ್ಡ್ ಏಷ್ಯಾ/ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್ 2018ರ ಏಪ್ರಿಲ್ 6ರ ಆರ್ ಬಿಐ ಸುತ್ತೋಲೆಯಲ್ಲಿನ ಪಾವತಿ ದತ್ತಾಂಶ ಸಂಗ್ರಹಣೆಗೆ ಸಂಬಂಧಿಸಿದ ಮಾನದಂಡಗಳನ್ನು ತೃಪ್ತಿದಾಯಕವಾಗಿ ಅನುಸರಿಸುತ್ತಿದೆ. ಆದಕಾರಣ ದೇಶೀಯ ಹೊಸ ಗ್ರಾಹಕರ ಸೇರ್ಪಡೆ ಮೇಲೆ 2021ರ ಜುಲೈ 22ರಂದು ವಿಧಿಸಲಾಗಿದ್ದ ನಿರ್ಬಂಧಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತೆರವು ಮಾಡಲಾಗಿದೆ' ಎಂದು ಆರ್ ಬಿಐ ತಿಳಿಸಿದೆ. 

2018ರ ಏಪ್ರಿಲ್ 6ರಂದು ಆರ್ ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಎಲ್ಲ ವಿದೇಶಿ ಪಾವತಿ ಆಪರೇಟರ್ ಗಳು ಕಾರ್ಡ್ ಹಾಗೂ ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಗಳನ್ನು ಭಾರತದಲ್ಲಿರುವ ಸರ್ವರ್ ನಲ್ಲಿ ಸಂಗ್ರಹಿಸಬೇಕು ಎಂದು ತಿಳಿಸಿದೆ. ಆರ್ ಬಿಐ ನಿಯಮಗಳ ಪ್ರಕಾರ ವಿದೇಶಿ ಪಾವತಿ ಪ್ರೊಸೆಸರ್ಸ್ ಕಾರ್ಡ್ ಸಂಗ್ರಹಣೆ ದತ್ತಾಂಶಗಳನ್ನು ಸುಗಮ ಕಾರ್ಯನಿರ್ವಹಣೆಗಾಗಿ ವಿದೇಶಕ್ಕೆ ವರ್ಗಾವಣೆ ಮಾಡಬಹುದು. ಆದ್ರೆ ಈ ದತ್ತಾಂಶವನ್ನು 24 ಗಂಟೆಗಳೊಳಗೆ ಅಳಿಸಿ ಹಾಕಬೇಕು. 

ಮಾಸ್ಟರ್ ಕಾರ್ಡ್ ಪಿಎಸ್ಎಸ್ ಕಾಯ್ದೆ (PSS Act) ಅಡಿಯಲ್ಲಿ ದೇಶಾದ್ಯಂತ ಕಾರ್ಡ್ ನೆಟ್ ವರ್ಕ್ ನಿರ್ವಹಿಸಲು ಪಾವತಿ ವ್ಯವಸ್ಥೆ ನಿರ್ವಾಹಕರಾಗಿ  (PSO) ನೋಂದಾಯಿತರಾಗಿದ್ದಾರೆ. ಅಮೆರಿಕ ಮೂಲದ ವೀಸಾ (US-based Visa) ಹಾಗೂ ಭಾರತದ ರುಪೇಯ (RuPay) ರಾಷ್ಟ್ರೀಯ ಪಾವತಿಗಳ ನಿಗಮ ಭಾರತದ ಇತರ ಪ್ರಮುಖ ಕಾರ್ಡ್ ನೆಟ್ ವರ್ಕ್ ಗಳಾಗಿವೆ. 

Edible Oil Price:ಗೃಹಿಣಿಯರಿಗೆ ಸಿಹಿ ಸುದ್ದಿ; ಅಡುಗೆ ಎಣ್ಣೆ ಬೆಲೆ ಲೀಟರ್ ಗೆ 15ರೂ. ಇಳಿಕೆ

ಭಾರತದಲ್ಲಿ ಪಾವತಿ ವ್ಯವಸ್ಥೆ ನಿರ್ವಾಹಕರಿಗೆ (PSO) ಆರ್ ಬಿಐ ದತ್ತಾಂಶ ಸಂಗ್ರಹಣೆ ನಿಯಮಗಳನ್ನು ಬಿಗಿಗೊಳಿಸಿದೆ. ಈ ಕುರಿತು ಭಾರತದಲ್ಲಿರುವ ಇಂಥ ಎಲ್ಲ ಪರವಾನಗಿ ಹೊಂದಿರುವ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ನಿಯಮದ ಅನ್ವಯ ಈ ಕಂಪನಿಗಳು 2022ನೇ ಹಣಕಾಸು ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಆರ್ ಬಿಐಗೆ ವಿಸ್ತೃತ ಅನುಸರಣಾ ಪ್ರಮಾಣ ಪತ್ರ ಸಲ್ಲಿಸೋದು ಕಡ್ಡಾಯ. ದತ್ತಾಂಶಗಳ ಸಂಗ್ರಹಣೆ ಹಾಗೂ ಭದ್ರತೆಗೆ ಸಂಬಂಧಿಸಿ ಆರ್ ಬಿಐ ನಿಯಮಗಳನ್ನು ಪಾಲನೆ ಮಾಡಿರುವ ಬಗ್ಗೆ ಈ ಪ್ರಮಾಣಪತ್ರದಲ್ಲಿ ನಮೂದಿಸಿರುವ ಜೊತೆಗೆ ಇದಕ್ಕೆ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯ ಸಹಿ ಕೂಡ ಇರಬೇಕು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್