Credit Card:ಆಫರ್ ಗೆ ಮರುಳಾಗಿ ಕ್ರೆಡಿಟ್ ಕಾರ್ಡ್ ಕೊಳ್ಳಬೇಡಿ; ಈ 5 ವಿಷಯಗಳನ್ನು ಮರೆಯದೆ ವಿಚಾರಿಸಿ

By Suvarna News  |  First Published Jun 16, 2022, 4:13 PM IST

ಕ್ರೆಡಿಟ್ ಕಾರ್ಡ್ ಕೊಳ್ಳುವಾಗ ನಮ್ಮಲ್ಲಿ ಬಹುತೇಕರು ಆಫರ್ ಗಳಿಗೆ ಮರುಳಾದ್ರೆ, ಇನ್ನೂ ಕೆಲವರು ಗೊಂದಲಕ್ಕೊಳಗಾಗುತ್ತಾರೆ. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಖರೀದಿಸೋವಾಗ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ಇಲ್ಲಿದೆ ಮಾಹಿತಿ.
 


Business Desk: ಕ್ರೆಡಿಟ್ ಕಾರ್ಡ್ (Credit card) ಖರೀದಿಸುವಂತೆ (Purchase) ಅನೇಕ ಬ್ಯಾಂಕುಗಳಿಂದ (Banks) ಪ್ರತಿದಿನ ಕರೆ ಹಾಗೂ ಸಂದೇಶಗಳು ಬರುತ್ತಲೇ ಇರುತ್ತವೆ. ಅನೇಕ ಆಫರ್ ಗಳ (Offers) ಮೂಲಕ ಕ್ರೆಡಿಟ್ ಕಾರ್ಡ್ ಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸುತ್ತವೆ. ಆದ್ರೆ ಕ್ರೆಡಿಟ್ ಕಾರ್ಡ್ ಖರೀದಿಸುವ ಮುನ್ನ ಶುಲ್ಕ (fees), ಬಡ್ಡಿ ಶುಲ್ಕ  (Interest rate) ಸೇರಿದಂತೆ ಕೆಲವೊಂದು ಅಂಶಗಳನ್ನು ಗಮನಿಸೋದು ಅತ್ಯಗತ್ಯ. ಕ್ರೆಡಿಟ್ ಕಾರ್ಡ್ ಒದಗಿಸುವ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪರಿಗಣಿಸುವ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸೋದು ಕೂಡ ಅಷ್ಟೇ ಮುಖ್ಯ. ಕಾರ್ಡ್ ಬಿಲ್ ಪಾವತಿಸಲು ನೀವು ಸಮರ್ಥರು ಎಂದು ನಿಮಗನಿಸಿದರೆ ಮಾತ್ರ ಖರೀದಿಸಿ. ಹಾಗೆಯೇ ಕ್ರೆಡಿಟ್ ಕಾರ್ಡ್ ಖರೀದಿಸುವ ಮುನ್ನ ಈ ಕೆಳಗಿನ 5 ಅಂಶಗಳನ್ನು ತಪ್ಪದೇ ಗಮನಿಸಿ.

1.ಬಡ್ಡಿದರ
ಬಹುತೇಕ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಅಥವಾ ಬ್ಯಾಂಕುಗಳು ಗ್ರಾಹಕರನ್ನು ಸೆಳೆಯಲು ಶೂನ್ಯ ಬಡ್ಡಿದರವನ್ನು (Interest rate) ಬಳಕೆ ಮಾಡುತ್ತವೆ. ಆದ್ರೆ ಕ್ರೆಡಿಟ್ ಕಾರ್ಡ್ ಪಡೆದ ಬಳಿಕ ಯಾವಾಗ ನಿಗದಿತ ಅವಧಿಯೊಳಗೆ ಆ ಗ್ರಾಹಕ ಬಿಲ್ ಮೊತ್ತವನ್ನು ಪೂರ್ಣವಾಗಿ ಪಾವತಿ ಮಾಡಲು ವಿಫಲವಾಗುತ್ತಾನೋ ಆಗ ಬ್ಯಾಂಕುಗಳು ಅಥವಾ ಕಂಪನಿಗಳು ಅಧಿಕ ಬಡ್ಡಿದರ ವಿಧಿಸುತ್ತವೆ. ಕೆಲವೊಮ್ಮೆ ಈ ಬಡ್ಡಿದರ ಶೇ.25ಕ್ಕೆ ತಲುಪುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಕಡಿಮೆ ಬಡ್ಡಿದರ ವಿಧಿಸುವ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಖರೀದಿಸಿ ಎನ್ನುವುದು ತಜ್ಞರ ಸಲಹೆಯಾಗಿದೆ. ಇದ್ರಿಂದ ದೀರ್ಘಾವಧಿಯಲ್ಲಿ ಹಣ ಉಳಿಸಲು ಸಾಧ್ಯವಾಗುತ್ತದೆ.

Tap to resize

Latest Videos

Post Office Schemes:ತೆರಿಗೆ ಉಳಿತಾಯಕ್ಕೆ, ಉತ್ತಮ ರಿಟರ್ನ್ಸ್ ಗೆ ಬ್ಯಾಂಕ್ ಎಫ್ ಡಿಗಿಂತ ಅಂಚೆ ಕಚೇರಿಯ ಈ 5 ಯೋಜನೆಗಳು ಬೆಸ್ಟ್!

2.ವಾರ್ಷಿಕ ಶುಲ್ಕ
ಕ್ರೆಡಿಟ್ ಕಾರ್ಡ್ ಒದಗಿಸುವ ಸಂಸ್ಥೆಗಳ ಸಂಖ್ಯೆ ಹೆಚ್ಚಿರೋದು ಗ್ರಾಹಕರಿಗೆ ಲಾಭದಾಯಕವೇ ಆಗಿದೆ. ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಅನೇಕ ಸಂಸ್ಥೆಗಳು ವಾರ್ಷಿಕ ಶುಲ್ಕವಿಲ್ಲದೆ ಕ್ರೆಡಿಟ್ ಕಾರ್ಡ್ ಗಳನ್ನು ನೀಡುತ್ತಿವೆ. ಹೀಗಾಗಿ ಈ ರೀತಿ ವಾರ್ಷಿಕ ಶುಲ್ಕವಿರದ ಕ್ರೆಡಿಟ್ ಕಾರ್ಡ್ ಗಳನ್ನೇ ಆಯ್ಕೆ ಮಾಡಿ. ಇದ್ರಿಂದ ನೀವು ವರ್ಷವಿಡೀ ಬಳಕೆ ಮಾಡದಿದ್ರೂ ಅಥವಾ ಅತೀಯಾಗಿ ಬಳಸಿದ್ರೂ ನಿಮಗೆ ಯಾವುದೇ ನಿಶ್ಚಿತ ಶುಲ್ಕ ವಿಧಿಸಲಾಗೋದಿಲ್ಲ. ಇನ್ನು ಯಾವುದೇ ಒಂದು ಬ್ಯಾಂಕಿನಲ್ಲಿ ನೀವು ದೀರ್ಘಾವಧಿಯಿಂದ ಖಾತೆ ಹೊಂದಿದ್ದರೆ ಹಾಗೂ ನಿರ್ದಿಷ್ಟ ಬ್ಯಾಲೆನ್ಸ್ ನಿರ್ವಹಣೆ ಮಾಡಿದ್ರೆ ಆಗ ಆ ಬ್ಯಾಂಕ್ ನಿಮಗೆ ಯಾವುದೇ ವಾರ್ಷಿಕ ಶುಲ್ಕವಿಲ್ಲದೆ ಕ್ರೆಡಿಟ್ ಕಾರ್ಡ್ ಒದಗಿಸುವ ಸಾಧ್ಯತೆಗಳಿವೆ.

3.ರಿವಾರ್ಡ್ಸ್ 
ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ರೆ ಅಥವಾ ನಿರ್ದಿಷ್ಟ ಶಾಪಿಂಗ್ ಸ್ಟೋರ್ ಗಳು ಅಥವಾ ಇ-ಕಾಮರ್ಸ್ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಬಳಸಿದ್ರೆ ಸಿಗುವ ರಿವಾರ್ಡ್ಸ್ ಅಥವಾ ಬಹುಮಾನಗಳ ಬಗ್ಗೆ ವಿವರಿಸುವಂತೆ ಕಂಪನಿಯ ಎಕ್ಸಿಕ್ಯುಟಿವ್ ಗೆ ಹೇಳಿ. ಕ್ಯಾಶ್ ಬ್ಯಾಕ್ ಆಫರ್ ಹೊಂದಿರುವ ಕ್ರೆಡಿಟ್ ಕಾರ್ಡ್ ಖರೀದಿಸೋದು ಅತ್ಯುತ್ತಮ. ಇದ್ರಿಂದ ನೀವು ವ್ಯಯಿಸಿದ ಹಣದ ಪುಟ್ಟ ಭಾಗ ನಿಮಗೆ ವಾಪಸ್ ಬರುತ್ತದೆ.

4.ದಂಡ
ಕ್ರೆಡಿಟ್ ಕಾರ್ಡ್ ಖರೀದಿಸೋವಾಗ ದಂಡದ ಬಗ್ಗೆ ಕೂಡ ಯೋಚಿಸಬೆಕು. ದಂಡಗಳ ಬಗ್ಗೆ ತಿಳಿದುಕೊಳ್ಳಲ್ಲಷ್ಟೇ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಸಮಯಕ್ಕೆ ಸರಿಯಾಗಿ ಸಾಲ ಹಿಂತಿರುಗಿಸಲು ಸಾಧ್ಯವಾಗದಿದ್ರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಿ. ಕೆಲವು ಕಂಪನಿಗಳು ಒಂದು ಪಾವತಿಯನ್ನು ತಡವಾಗಿ ಮಾಡಿದ್ರೆ ಕೂಡ ಅದಕ್ಕೆ ಬಡ್ಡಿ ವಿಧಿಸುತ್ತವೆ. ಹೀಗಾಗಿ ಕಾರ್ಡ್ ಆಯ್ಕೆ ಮಾಡುವ ಮುನ್ನ ಈ ಎಲ್ಲ ವಿಷಯಗಳ ಬಗ್ಗೆ ವಿಚಾರಿಸಿ.

ನಿಮ್ಮ ಬಳಿಯೂ ಇದೆಯಾ '786'ರ ನೋಟು? ಮೂರು ಲಕ್ಷ ರೂಪಾಯಿ ಗಳಿಸೋ ಅವಕಾಶ!

5.ಕ್ರೆಡಿಟ್ ಮಿತಿ
ಅರ್ಜಿದಾರರ ಆದಾಯ ಹಾಗೂ ಕ್ರೆಡಿಟ್ ಸ್ಕೋರ್ ಆಧರಿಸಿ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ನ ಕ್ರೆಡಿಟ್ ಮಿತಿಯನ್ನು (Credit limit) ನಿರ್ಧರಿಸುತ್ತವೆ. ನಿಮ್ಮ ಆದಾಯ ಹಾಗೂ ಕ್ರೆಡಿಟ್ ಸ್ಕೋರ್ ಆಧರಿಸಿ ವಿವಿಧ ಬ್ಯಾಂಕುಗಳು ನಿಮಗೆ ವಿಭಿನ್ನ ಕ್ರೆಡಿಟ್ ಮಿತಿಗಳನ್ನು ಒದಗಿಸುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಖರೀದಿಸುವಾಗ ಕ್ರೆಡಿಟ್ ಮಿತಿ ಕೂಡ ಗಮನಿಸಿ.

click me!