Digital Payments ಇ-ವಹಿವಾಟುಗಳ ಮೇಲಿನ ಶುಲ್ಕ ಪರಿಷ್ಕರಣೆಗೆ RBI ಚಿಂತನೆ

By Suvarna News  |  First Published Dec 9, 2021, 7:37 PM IST

ಡಿಜಿಟಲ್ ಪಾವತಿ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದೆ. ಪ್ರಸ್ತುತ ಕೆಲವು ಇ-ಪಾವತಿ ವಹಿವಾಟುಗಳು ಇನ್ನೂ ಶುಲ್ಕರಹಿತವಾಗಿಯೇ ಇವೆ. ಆದ್ರೆ ಇನ್ನು ಮುಂದೆ ಡಿಜಿಟಲ್ ಪಾವತಿ ಶುಲ್ಕಗಳಿಗೆ ಸಂಬಂಧಿಸಿ ಏಕರೂಪತೆ ತರಲು RBI ನಿರ್ಧರಿಸಿದೆ.


ಮುಂಬೈ (ಡಿ.9):  ಪಾವತಿ ವಹಿವಾಟುಗಳ (Payment transactions) ಮೇಲಿನ ಶುಲ್ಕಗಳನ್ನು ( fees) ಪರಿಷ್ಕರಿಸಲು  ಭಾರತೀಯ ರಿಸರ್ವ್ ಬ್ಯಾಂಕ್ (RBI) ಯೋಚಿಸುತ್ತಿದೆ. ಇದ್ರಿಂದ ಡಿಜಿಟಲ್ ಪಾವತಿ (Digital Payments) ವಲಯದಲ್ಲಿನ ಶುಲ್ಕಗಳಲ್ಲಿ ಏಕರೂಪತೆ ಕಾಣಲು ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಲ್ಕಗಳಲ್ಲಿ ಯಾವುದೇ ಬದಲಾವಣೆ ತಂದರೂ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಅದ್ರಿಂದ ಲಾಭ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. 

ಡಿಜಿಟಲ್ ಪಾವತಿ ಸೇವೆಗಳಿಗೆ ತಗಲುವ ವೆಚ್ಚವನ್ನು ಗ್ರಾಹಕರು ಅಥವಾ ವ್ಯಾಪಾರಿಗಳಿಂದ ಅಥವಾ ಇದ್ರಲ್ಲಿ ಪಾಲುದಾರರಾಗಿರೋ ಒಬ್ಬರು ಅಥವಾ ಹಲವು ಮಂದಿಯಿಂದ ವಸೂಲು ಮಾಡಲಾಗೋದು ಎಂದು ಹಣಕಾಸು ನೀತಿ ಸಮಿತಿ (MPC)ಸಭೆ ನಂತರ ಪ್ರಕಟಿಸಿದ ನೀತಿಯಲ್ಲಿ ಆರ್ ಬಿಐ ತಿಳಿಸಿತ್ತು. 'ಗ್ರಾಹಕರು ಈ ಶುಲ್ಕಗಳನ್ನು ಭರಿಸೋದ್ರಿಂದ ಅನುಕೂಲ ಹಾಗೂ ಅನನುಕೂಲ ಎರಡೂ ಇದೆ. ಈ ಶುಲ್ಕಗಳು ಸಮಂಜಸವಾಗಿರೋ ಜೊತೆ ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳೋದ್ರಿಂದ ಗ್ರಾಹಕರು ಹಿಂದೆ ಸರಿಯುವಂತೆ ಮಾಡಬಾರದು' ಎಂದು ಆರ್ ಬಿಐ ಹೇಳಿದೆ. ಕ್ರೆಡಿಟ್ ಕಾರ್ಡ್ಸ್, ಡೆಬಿಟ್ ಕಾರ್ಡ್ಸ್, ಪ್ರೀಪೇಯ್ಡ್ ಪಾವತಿ ಸಾಧನಗಳು (ಕಾರ್ಡ್ಸ್ ಹಾಗೂ ಇ-ವ್ಯಾಲೆಟ್ ಗಳು) ಮತ್ತು ಯುಪಿಐ (UPI)ಮೇಲಿನ ಶುಲ್ಕಗಳನ್ನು ಪರಿಶೀಲಿಸಿ, ಆ ಬಗ್ಗೆ ಚರ್ಚೆ ನಡೆಸಲಾಗೋದು. ಅನುಕೂಲಕರ ಶುಲ್ಕದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗೋದು ಹಾಗೂ ಅದರ ಆಧಾರದಲ್ಲಿ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಡಿಜಿಟಲ್ ವಹಿವಾಟುಗಳು ದೊರೆಯುವಂತೆ ಮಾಡೋ ಜೊತೆ ಸೇವಾ ಪೂರೈಕೆದಾರ ಸಂಸ್ಥೆಗಳಿಗೂ ಆರ್ಥಿಕವಾಗಿ ಹೊರೆಯಾಗದಂತೆ ಎಚ್ಚರ ವಹಿಸೋದಾಗಿ' ಆರ್ ಬಿಐ ಹೇಳಿದೆ.

Tap to resize

Latest Videos

PM Kisan Samman Nidhi: ಶೀಘ್ರದಲ್ಲೇ ರೈತರ ಖಾತೆಗೆ ಹಣ, ಆದ್ರೆ ಇವರಿಗಿಲ್ಲ ಯೋಜನೆ ಫಲಾನುಭವಿಯಾಗೋ ಭಾಗ್ಯ

ಕೆಲವು ತಜ್ಞರು ಆರ್ ಬಿಐನ ಈ ಹೇಳಿಕೆಯನ್ನು ಡಿಜಿಟಲ್ ವಹಿವಾಟಿನ ಶುಲ್ಕ ತಗ್ಗಿಸೋ ಸೂಚನೆ ಎಂದು ಕೂಡ ವಿಶ್ಲೇಷಿಸಿದ್ದಾರೆ. ಈ ಕುರಿತು ಮಾತನಾಡಿದ NPCI ಎಂಡಿ ಹಾಗೂ ಸಿಇಒ ದಿಲೀಪ್ ಅಸ್ಬೆ, 'ನಿಗಮವು ರುಪೇ ಡೆಬಿಟ್ ಕಾರ್ಡ್ ಗಳು ಅಥವಾ ಯುಪಿಐ ವಹಿವಾಟುಗಳಿಂದ ( UPI transactions) ಯಾವುದೇ ಶುಲ್ಕಗಳನ್ನು ಗಳಿಸುತ್ತಿಲ್ಲ. ಹೀಗಾಗಿ ಮುಂದೆ ಆದಾಯ ನಷ್ಟವಾಗುತ್ತೆ ಎಂದು ಹೇಳಲು ಸಾಧ್ಯವಿಲ್ಲ' ಎಂದರು. 
ಈ ಬಗ್ಗೆ ಪ್ರತಿಕ್ರಿಯಿಸಿರೋ ಪೇಟಿಎಂ ಸಂಸ್ಥಾಪಕ ವಿಜಯ್ ಶಂಕರ್ ಶರ್ಮ 'ಡಿಜಿಟಲ್ ಪಾವತಿಗಳ ಕ್ಷೇತ್ರದಲ್ಲಿ ಭಾರತದ ಯಶಸ್ಸಿಗೆ ಶೂನ್ಯ ಶುಲ್ಕ ಪಾವತಿಗಳ ವ್ಯವಸ್ಥೆಯೇ ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಪೇಟಿಎಂ ಸಣ್ಣ ವ್ಯಾಪಾರಿಗಳಿಗೆ ಶೂನ್ಯ ಶುಲ್ಕ ಪಾವತಿಗಳನ್ನು ಕಲ್ಪಿಸೋ ಮೂಲಕ  ಕ್ರಾಂತಿಯನ್ನು ಸೃಷ್ಟಿಸಿತ್ತು. ಇನ್ನೂ ಮುಂದೆ ಸಾಧಿಸಬೇಕಾಗಿರೋದು ಬಹಳ ಇದೆ. ಯುಪಿಐ ಶುಲ್ಕ ಅಥವಾ ಸಣ್ಣ ವ್ಯಾಪಾರಿಗಳಿಗೆ ಶುಲ್ಕಗಳನ್ನು ವಿಧಿಸೋ ಮೂಲಕ ಭಾರತದಲ್ಲಿ ಡಿಜಿಟಲ್ ಪಾವತಿ ಪ್ರಗತಿಯನ್ನು ಸ್ಥಗಿತಗೊಳಿಸಬಾರದು' ಎಂದರು.   ದೇಶದಲ್ಲಿ  ಡಿಜಿಟಲೀಕರಣ ಹೆಚ್ಚಿದಂತೆ ಹಣಕಾಸು ವ್ಯವಸ್ಥೆಯಲ್ಲಿ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳಲು  ಸಾಧ್ಯವಾಗುತ್ತದೆ ಎಂದರು.
ವಹಿವಾಟುಗಳನ್ನು ಕಾರ್ಯಸಾಧ್ಯವಾಗಿಸೋದು ಹಾಗೂ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸೋದು ಮುಖ್ಯ ಗುರಿಗಳಾಗಿವೆ ಎಂದು ಆರ್ ಬಿಐ ಡೆಪ್ಯೂಟಿ ಗವರ್ನರ್ ಟಿ.ರವಿಶಂಕರ್ ಹೇಳಿದ್ದಾರೆ. ಡಿಜಿಟಲ್ ಪಾವತಿಗಳನ್ನು ಜನಪ್ರಿಯಗೊಳಿಸೋದು ಹಾಗೂ ಹೆಚ್ಚಿಸೋದು ಆರ್ ಬಿಐ ಮುಖ್ಯ ಉದ್ದೇಶವಾಗಿದೆ.ಇದು ಕಾರ್ಯಸಾಧ್ಯವಾಗಬೇಕೆಂದ್ರೆ ಶುಲ್ಕಗಳನ್ನು ವಿಧಿಸೋದು ಮುಖ್ಯ. ಹೀಗಾಗಿ ನಾವು ಶುಲ್ಕಗಳನ್ನು ಪರಿಶೀಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. 

Tata Motors:ವಾಣಿಜ್ಯ ವಾಹನ ಉತ್ಪಾದನೆ ಉದ್ಯಮದಲ್ಲಿ 7,500ಕೋಟಿ ರೂ. ಹೂಡಿಕೆಗೆ ನಿರ್ಧಾರ?

ಜಾಗತಿಕ ವಲಯದಲ್ಲಿ ಶುಲ್ಕಗಳ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ಕೆಲವು ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಗ್ರಾಹಕರಿಗೆ ಡಿಜಿಟಲ್ ಪಾವತಿಯ ಸ್ವಲ್ಪ ಶುಲ್ಕವನ್ನು ವರ್ಗಾಯಿಸೋ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಆರ್ ಬಿಐ ಮೊದಲಿನಿಂದಲೂ ಡೆಬಿಟ್ ಕಾರ್ಡ್ ಗೆ ಹೋಲಿಸಿದ್ರೆ ಕ್ರೆಡಿಟ್ ಕಾರ್ಡ್ ಗೆ ಶುಲ್ಕ ವಿಧಿಸೋ ವಿಷಯದಲ್ಲಿ ಹೆಚ್ಚು ಉದಾರತೆ ತೋರಿಸಿದೆ. 

click me!