Tata Motors ವಾಣಿಜ್ಯ ವಾಹನ ಉತ್ಪಾದನೆ ಉದ್ಯಮದಲ್ಲಿ 7,500ಕೋಟಿ ರೂ. ಹೂಡಿಕೆಗೆ ನಿರ್ಧಾರ?

By Suvarna NewsFirst Published Dec 9, 2021, 4:33 PM IST
Highlights

ದೇಶದ ವಾಹನ ತಯಾರಿಕಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರೋ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಉತ್ಪಾದನಾ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಒತ್ತು ನೀಡಲು ಯೋಜಿಸಿದ್ದು, 7,500ಕೋಟಿ ರೂ. ಹೂಡಿಕೆ ಮಾಡಲು ನಿರ್ಧಾರಿಸಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ನವದೆಹಲಿ (ನ.9): ಭಾರತದ ಅತಿದೊಡ್ಡ ಟ್ರಕ್(Truck)ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್(Tata Motors)ವಾಣಿಜ್ಯ ವಾಹನ ಉತ್ಪಾದನೆಗೆ(commercial vehicle business) ಸಂಬಂಧಿಸಿದ ತನ್ನ ಯೋಜನೆಗಳನ್ನು ಪರಿಷ್ಕರಿಸಲಿದ್ದು, ಮುಂದಿನ 4-5 ವರ್ಷಗಳಲ್ಲಿ ಒಂದು ಬಿಲಿಯನ್ ಡಾಲರ್ (7,500ಕೋಟಿ ರೂ.) ಹೂಡಿಕೆ (Investment) ಮಾಡಲು ಚಿಂತನೆ ನಡೆಸಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಎಲೆಕ್ಟ್ರಿಕ್ ವಾಹನಗಳಿ ಗೆ(Electric Vehicle) ಬೇಡಿಕೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಈ ನಿರ್ಧಾರ ಕೈಗೊಂಡಿದೆ.  

ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ (EV) ಉತ್ಪಾದನಾ ವಲಯದಲ್ಲಿ ಟಾಟಾ ಕಂಪನಿ ಮುಂಚೂಣಿಯಲ್ಲಿದ್ದು, ಮುಂದೆ ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ಧಪಡಿಸೋ ಯೋಜನೆ ರೂಪಿಸಿದೆ. ಅಲ್ಲದೆ, ವಾಣಿಜ್ಯ ವಾಹನ ಕ್ಷೇತ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯನ್ನು ಹೆಚ್ಚಿಸೋ ನಿರ್ಧಾರ ಕೈಗೊಂಡಿದೆ. ಈ ವಾಹನಗಳ ವಿನ್ಯಾಸ  CNG, LNG ಹಾಗೂ ಡೀಸೆಲ್ ಪವರ್ ಟ್ರೇನ್ ಗಳ ಅಳವಡಿಕೆಗೂ ಅವಕಾಶವನ್ನು ಕಲ್ಪಿಸಲಿವೆ. ಈ ಹಿಂದೆ ಇಂಧನ ಚಾಲಿತ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಮಾರ್ಪಡಿಸಲು ಮರುವಿನ್ಯಾಸ ಮಾಡೋದು ಅಗತ್ಯವಾಗಿತ್ತು. 

UPI Payment Limit:ಐಪಿಒ, ಸರ್ಕಾರಿ ಬಾಂಡ್ ಹೂಡಿಕೆಗೆ ಯುಪಿಐ ವಹಿವಾಟು ಮಿತಿ 5ಲಕ್ಷ ರೂ.ಗೆ ಏರಿಕೆ

ಮಾರುಕಟ್ಟೆಯಲ್ಲಿ ಈ ಹಿಂದೆ ಇದ್ದಂತೆ ಇನ್ನು ಮುಂದೆ ಕೂಡ ಎಲೆಕ್ಟ್ರಿಫಿಕೇಷನ್ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರಲು  ಟಾಟಾ ಮೋಟಾರ್ಸ್ ಬಯಸಿದೆ ಎಂದು ಸಂಸ್ಥೆಯ ವಾಣಿಜ್ಯ ವಾಹನ ಉದ್ಯಮದ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ತಿಳಿಸಿದ್ದಾರೆ.  ವಾಣಿಜ್ಯ ವಾಹನಗಳ ತಯಾರಿಕೆಯಲ್ಲಿ ಅನಿಲ ಆಧರಿತ ಇಂಧನ ಕೋಶ ತಯಾರಿಕೆಗೆ ಮೊದಲು ಆದ್ಯತೆ ನೀಡಲಾಗೋದು. ಸಿಎನ್ ಜಿ (CNG) ಕಡೆಗೆ ಒಲವು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಸಿಎನ್ ಜಿ  (CNG) ವಿತರಣೆಯಲ್ಲಿ ಪ್ರಗತಿಯಾಗೋ ನಿರೀಕ್ಷೆಯಿದೆ ಎಂದು ವಾಘ್ ತಿಳಿಸಿದರು. ಆದ್ರೆ, ಎಷ್ಟು ಮೊತ್ತದ ಹೂಡಿಕೆಗೆ ಯೋಜನೆ ರೂಪಿಸಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಈ ಕುರಿತ ಸುದ್ದಿಗಳು ಕೇವಲ ವಂದತಿಗಳಷ್ಟೇ ಎಂದರು. ಈ ಕುರಿತ ಯೋಜನೆಗಳನ್ನು ರೂಪಿಸೋ ಪ್ರಕ್ರಿಯೆಗೆ ಈಗಷ್ಟೇ ಚಾಲನೆ ಸಿಕ್ಕಿದೆ. ಕಂಪನಿ ಮಾರಾಟಕ್ಕೆ ಸಂಬಂಧಿಸಿ ಮಾರುಕಟ್ಟೆಯಲ್ಲಿನ ಸ್ಥಿತಿಗಳ ಅಧ್ಯಯನ ನಡೆಸುತ್ತಿದೆ. ಈ ಕಾರ್ಯಕ್ಕೆ ಈಗಾಗಲೇ ಮಾರ್ಕೆಟಿಂಗ್ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ರಾಯಲ್ ಎನ್ ಫೀಲ್ಡ್  (Royal Enfield) ಸಂಸ್ಥೆಯಲ್ಲಿದ್ದ ಸುಬ್ರಂಶು ಸಿಂಗ್ ಹಾಗೂ ಫೋರ್ಡ್ ಇಂಡಿಯಾದ (Ford India) ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅನುರಾಗ್ ಮೆಹ್ರೋತ್ರ ಈಗಾಗಲೇ ಮಾರ್ಕೆಟಿಂಗ್ ತಂಡವನ್ನು ಸೇರಿದ್ದಾರೆ. ಅವರು ಅಂತಾರಾಷ್ಟ್ರೀಯ ಉದ್ಯಮವನ್ನು ಅಧ್ಯಯನ ನಡೆಸಿ ಯೋಜನೆ ರೂಪಿಸಲಿದ್ದಾರೆ ಎಂದು ವಾಘ್  ಹೇಳಿದರು.
ಗಣಿಗಾರಿಕೆಗಾಗಿ ಕೆಲವು ಉಕ್ಕು(Steel) ಹಾಗೂ ಸಿಮೆಂಟ್ (Cement)ಕಂಪನಿಗಳು ಕೂಡ ಎಲೆಕ್ಟ್ರಿಕ್ ಟ್ರಕ್ ಗಳಿಗಾಗಿ ಬೇಡಿಕೆಯಿಟ್ಟಿವೆ. ಕಂಪನಿ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದೆ. ಆದ್ರೆ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಉದ್ಯಮಕ್ಕೆ ಸಂಬಂಧಿಸಿ ಪ್ರತ್ಯೇಕ ಘಟಕ ಸ್ಥಾಪಿಸೋ ಯಾವ ನಿರ್ದಿಷ್ಟ ಯೋಜನೆಯೂ ಸದ್ಯ ಟಾಟಾ ಮೋಟಾರ್ಸ್ ಮುಂದಿಲ್ಲ ಎಂದರು. 

Forbes Most Powerful Women list: ಸತತ ಮೂರನೇ ಬಾರಿ ಸ್ಥಾನ ಗಿಟ್ಟಿಸಿಕೊಂಡ ನಿರ್ಮಲಾ ಸೀತಾರಾಮನ್

ಟಾಟಾ ಮೋಟಾರ್ಸ್ ಉನ್ನತಾಧಿಕಾರಿಗಳು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನಡುವೆ ಇತ್ತೀಚೆಗೆ ನಡೆದ ಸಭೆಗೆ ಪ್ರಸ್ತಾಪಿಸಿದ ವಾಘ್ , ತಮಿಳುನಾಡಿನಲ್ಲಿ ಡ್ರೈವಿಂಗ್ ಮೋಟಾರ್ ತರಬೇತಿ ಶಾಲೆ ಪ್ರಾರಂಭಿಸಲು ಚಿಕ್ಕ ಸ್ಥಳಾವಕಾಶವನ್ನು ಕಂಪನಿ ಕೋರಿದೆ ಎಂದರು. ಸಭೆ ನಡೆದ 48 ಗಂಟೆಗಳಲ್ಲಿ ಕಂಪನಿಗೆ ಕೆಲವು ಎಕರೆ ಜಾಗವನ್ನು ಸರ್ಕಾರ ಒದಗಿಸಿದೆ ಎಂದರು. ಚೆನ್ನೈನಲ್ಲಿರೋ ಫೋರ್ಡ್ ಫ್ಯಾಕ್ಟರಿಯನ್ನು ಮಾರ್ಪಡು ಮಾಡೋ ಯೋಚನೆ ಟಾಟಾ ಮೋಟಾರ್ಸ್ ಗೆ ಇದೆ ಎಂಬ ವಿಷಯವಾಗಿ ಮಾತನಾಡಿದ ವಾಘ್ ಇದು ಬರೀ ವದಂತಿ ಎಂದರು. 

ಇಲ್ಲಿಯವರೆಗೆ, ಟಾಟಾ ಮೋಟಾರ್ಸ್ ಭಾರತದ ಅನೇಕ ನಗರಗಳಿಗೆ 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳನ್ನು ಪೂರೈಸಿದ್ದು, ಇವು ಒಟ್ಟು 20 ಮಿಲಿಯನ್ ಕಿಲೋಮೀಟರ್‍ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‍ಗೆ 15 ಹೈಡ್ರೋಜನ್ ಇಂಧನ ಸೆಲ್ ಬಸ್‍ಗಳನ್ನು ಒದಗಿಸಲು ಕಂಪನಿಯು ಆದೇಶವನ್ನು ಪಡೆದುಕೊಂಡಿದೆ. 


 

click me!