PM Kisan Samman Nidhi ಶೀಘ್ರದಲ್ಲೇ ರೈತರ ಖಾತೆಗೆ ಹಣ, ಆದ್ರೆ ಇವರಿಗಿಲ್ಲ ಯೋಜನೆ ಫಲಾನುಭವಿಯಾಗೋ ಭಾಗ್ಯ

By Suvarna News  |  First Published Dec 9, 2021, 6:00 PM IST

ಕಿಸಾನ್ ಸಮ್ಮಾನ್ ನಿಧಿ 10ನೇ ಕಂತಿನ ಹಣಕ್ಕಾಗಿ ನಿರೀಕ್ಷಿಸುತ್ತಿರೋ ರೈತರಿಗೆ ಶುಭಸುದ್ದಿ. ಶೀಘ್ರದಲ್ಲೇ ರೈತರ ಖಾತೆಗೆ ಹಣ ಜಮೆಯಾಗಲಿದೆ.


ನವದೆಹಲಿ (ಡಿ.9): ದೇಶದ ರೈತರಿಗೆ ಕೇಂದ್ರ ಸರ್ಕಾರ (Central government) ಶುಭ ಸುದ್ದಿ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ 10ನೇ ಕಂತಿನ ಹಣವು ಶೀಘ್ರದಲ್ಲೇ ರೈತರ(Farmers) ಬ್ಯಾಂಕ್ ಖಾತೆಗೆ (Bank Account) ಜಮೆಯಾಗಲಿದೆ. ಡಿಸೆಂಬರ್ 15 ಹಾಗೂ 25 ರ ನಡುವೆ ಯಾವ ದಿನ ಬೇಕಿದ್ದರೂ ಈ ಹಣ  ಖಾತೆಗೆ ಬರಬಹುದು ಎಂದು ಮೂಲಗಳು ತಿಳಿಸಿವೆ.  ಈ ಯೋಜನೆ ಮುಖಾಂತರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು  6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಈ ರೀತಿ ಇಲ್ಲಿಯ ತನಕ ಸರ್ಕಾರ 9n ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈ ತಿಂಗಳು ಹತ್ತನೇ ಕಂತಿನ ಹಣವನ್ನು ಜಮೆ ಮಾಡಬೇಕಿದೆ. ಒಂದು ವೇಳೆ ನೀವು ರೈತರಾಗಿದ್ದು, ಇನ್ನೂ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಸೇರ್ಪಡೆಗೊಂಡಿಲ್ಲ ಎಂದಾದ್ರೆ ಇಂದೇ ಹೆಸರು ನೋಂದಾಯಿಸಿ. 

10ನೇ ಕಂತಿನ ಫಲಾನುವಿ ಪಟ್ಟಿ ಪರಿಶೀಲಿಸೋದು ಹೇಗೆ?
-ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ https://pmkisan.gov.in/ ಭೇಟಿ ನೀಡಿ.
-ಈಗ ಮುಖಪುಟದಲ್ಲಿ 'Farmers Corner'ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
-ಇಲ್ಲಿ Beneficiary List ಮೇಲೆ ಕ್ಲಿಕ್ ಮಾಡಿದ್ರೆ ಹೊಸ ಪುಟ ತೆರೆದುಕೊಳ್ಳುತ್ತದೆ.
-ಈ ಪುಟದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮದ ಮಾಹಿತಿ ಭರ್ತಿ ಮಾಡಿ.
-ಆ ಬಳಿಕ Get Report ಆಯ್ಕೆ ಮೇಲೆ ಕ್ಲಿಕಿಸಿ. ಈಗ ನಿಮಗೆ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಇದ್ರಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿ.

Latest Videos

undefined

Tata Motors:ವಾಣಿಜ್ಯ ವಾಹನ ಉತ್ಪಾದನೆ ಉದ್ಯಮದಲ್ಲಿ 7,500ಕೋಟಿ ರೂ. ಹೂಡಿಕೆಗೆ ನಿರ್ಧಾರ?

 ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಕೇಳಿರೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
-ಬಳಿಕ submit ಆಯ್ಕೆ ಮೇಲೆ ಕ್ಲಿಕ್ ಮಾಡಿ. 

UPI Payment Limit:ಐಪಿಒ, ಸರ್ಕಾರಿ ಬಾಂಡ್ ಹೂಡಿಕೆಗೆ ಯುಪಿಐ ವಹಿವಾಟು ಮಿತಿ 5ಲಕ್ಷ ರೂ.ಗೆ ಏರಿಕೆ

ಈ ರೈತರಿಗೆ ಪ್ರಯೋಜನ ಸಿಗಲ್ಲ
-ಒಂದು ಕುಟುಂಬದ ಯಾವುದೇ ಸದಸ್ಯ ಆದಾಯ ತೆರಿಗೆ ಪಾವತಿಸುತ್ತಿದ್ರೆ ಅಂಥ ಕುಟುಂಬದ ರೈತನಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾರ ಬಳಿ ಕೃಷಿಯೋಗ್ಯ ಭೂಮಿಯಿಲ್ಲವೋ ಅಂಥವರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
-ಒಂದು ವೇಳೆ ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ರೆ ಅಂದ್ರೆ ನಿಮ್ಮ ತಾತಾ ಅಥವಾ ಅಪ್ಪನ ಹೆಸರಿನಲ್ಲಿದ್ರೆ ನೀವು ಈ ಯೋಜನೆ ವ್ಯಾಪ್ತಿಗೆ ಒಳಪಡೋದಿಲ್ಲ.
-ಒಂದು ವೇಳೆ ನೀವು ಕೃಷಿ ಭೂಮಿ ಹೊಂದಿದ್ದು, ಸರ್ಕಾರಿ ನೌಕರಿಯಲ್ಲಿದ್ರೆ ನಿಮಗೆ ಈ ಯೋಜನೆ ಲಾಭ ಸಿಗೋದಿಲ್ಲ.
-ನೋಂದಾಯಿತ ವೈದ್ಯ, ಇಂಜಿನಿಯರ್, ನ್ಯಾಯವಾದಿ ಹಾಗೂ ಸಿಎ ಅಂಥ ಹುದ್ದೆಯಲ್ಲಿರೋ ವ್ಯಕ್ತಿ ಹೆಸರಿನಲ್ಲಿ ಕೃಷಿ ಭೂಮಿ ಇದ್ದರೂ ಆತ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾವುದೇ ರೈತನಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ದೊರೆಯುತ್ತಿದ್ರೆ, ಅಂಥವರು ಕೂಡ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.

click me!