ATM ಹಣ ವಿತ್‌ಡ್ರಾ ಶುಲ್ಕ ಹೆಚ್ಚಿಸಿದ RBI; ಆಗಸ್ಟ್ 1 ರಿಂದ ಜಾರಿ!

By Chethan KumarFirst Published Jun 10, 2021, 10:14 PM IST
Highlights
  • ಇತರ ಬ್ಯಾಂಕ್‍‌ ATM‌ನಿಂದ ಹಣ ತೆಗೆಯಲು ಶುಲ್ಕ ಹೆಚ್ಚಿಸಿದ ಆರ್‌ಬಿಐ
  • ಹಣಕಾಸೇತರ ವಹಿವಾಟಿನ ಶುಲ್ಕವೂ ಹೆಚ್ಚಳ
  • ಆಗಸ್ಟ್ 1ರಿಂದ ಪರಿಷ್ಕೃತ ಶಲ್ಕ ಜಾರಿ

ನವದೆಹಲಿ(ಜೂ10): ಕೊರೋನಾ ಸಂಕಷ್ಟದಲ್ಲಿರುವ ಭಾರತೀಯ ಜನತೆಗೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಶಾಕ್ ನೀಡಿದೆ. ಇತರ ಬ್ಯಾಂಕ್‌ಗಳ ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕವನ್ನು ಹೆಚ್ಚಿಸಿದೆ. ಇದರ ಜೊತೆಗೆ ಹಣಕಾಸೇತರ ವಹಿವಾಟು ಶುಲ್ಕವನ್ನೂ ಹೆಚ್ಚಿಸಿದೆ.

ಚೆಕ್‌ ಮೂಲಕ ಹಣ ಪಾವತಿ ಇನ್ನು ಸುಲಭವಿಲ್ಲ, ಆರ್‌ಬಿಐ ಹೊಸ ನಿಯಮ ಜಾರಿ!

ಆರ್‌ಬಿಐ ನಿಯಮದ ಪ್ರಕಾರ ನಿಮ್ಮ ಬ್ಯಾಂಕ್ ಎಟಿಎಂ ಹೊರತು ಪಡಿಸಿ ಇತರ ಬ್ಯಾಂಕ್ ಎಟಿಎಂನಲ್ಲಿ ಆರಂಭಿಕ 5 ಟ್ರಾನ್ಸಾಕ್ಷನ್ ಉಚಿತವಾಗಿದೆ. 5ನೇ ಬಾರಿಗೆ ಹಣ ತೆಗೆಯಲು 20 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದೀಗ ಈ ಶುಲ್ಕವನ್ನು 21 ರೂಪಾಯಿಗೆ ಏರಿಸಲಾಗಿದೆ. ಈ ನಿಯಮವು 2022ರ ಜನವರಿ 1 ರಿಂದ ಜಾರಿಯಾಗಲಿದೆ.

ಇನ್ನು ಇಂಟರ್‌ಚೇಂಜ್ ಶುಲ್ಕವಾಗಿ ಗ್ರಾಹಕನ ಬ್ಯಾಂಕ್, ಇತರ ಬ್ಯಾಂಕ್ ಎಟಿಎಂ ಬಳಸಿದ ಬ್ಯಾಂಕ್‌ಗಳಿಗೆ 16 ರೂಪಾಯಿ ಇದ್ದ ಶುಲ್ಕವನ್ನು  17 ರೂಪಾಯಿ ಮಾಡಲಾಗಿದೆ. ಇದರೊಂದಿಗೆ ಹಣಕಾಸೇತರ ವಹಿವಾಟು ಶುಲ್ಕವನ್ನು 5 ರೂಪಾಯಿಂದ 6 ರೂಪಾಯಿಗೆ ಹೆಚ್ಚಿಸಲಾಗಿದೆ.  ಪರಿಷ್ಕೃತ ಶುಲ್ಕ ಆಗಸ್ಟ್ 1 ರಿಂದ ಜಾರಿಯಾಗಲಿದೆ ಎಂದು ಆರ್‌ಬಿಐ ಹೇಳಿದೆ.

ATMಗೆ ಹೋಗಿ ಹಣ ತೆಗೆದ, ಸ್ಯಾನಿಟೈಸರ್ ಕದ್ದ; ವಿಡಿಯೋ ವೈರಲ್!

5 ಉಚಿತ ಎಟಿಎಂ ವಹಿವಾಟು ಕೇವಲ ಮೆಟ್ರೋ ಹೊರತು ಪಡಿಸಿದ ಕೇಂದ್ರಗಳಲ್ಲಿ ಲಭ್ಯವಿದೆ. ಆದರೆ ಮೆಟ್ರೋ ಕೇಂದ್ರಗಳಲ್ಲಿ ಇದರ ಮಿತಿ ಮೂರಕ್ಕೆ ಇಳಿಯಲಿದೆ. 

click me!